ಮಂಗಳೂರು : Tulu Times | ದಕ್ಷಿಣ ಕನ್ನಡ ಕರಾವಳಿಯ ಹಾಸ್ಪಿಟಾಲಿಟಿ ಅಂದ್ರೆ ಆತಿಥ್ಯ ಕ್ಷೇತ್ರವು ಭಾರೀ ವಿಸ್ತರಣೆಗೆ ಸಜ್ಜಾಗಿದೆ. ಪ್ರವಾಸೋದ್ಯಮ ಹಾಗೂ ಉನ್ನತ ಮಟ್ಟದ ವಸತಿ ಸೌಲಭ್ಯಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಉದ್ಯಮಿಗಳು ಸುಮಾರು ₹500 ಕೋಟಿ ಹೂಡಿಕೆ ಮಾಡಿ ಫೈವ್ ಸ್ಟಾರ್ ಹೋಟೆಲ್ಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.
ಈ ಹೋಟೆಲ್ಗಳಲ್ಲಿ ಮೂರನ್ನು ಸ್ಥಳೀಯ ಹೂಡಿಕೆದಾರರು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಉದ್ಯಮ ವಲಯದ ಮೂಲಗಳು ತಿಳಿಸಿವೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ನಂತರ, ಕರಾವಳಿಯಲ್ಲಿ ಐಷಾರಾಮಿ ಹೋಟೆಲ್ಗಳ ಕೊರತೆಯಿಂದಾಗಿ ಪ್ರವಾಸಿಗರು ಕೇರಳ ಅಥವಾ ಕೊಡಗು ಕಡೆಗೆ ತೆರಳುತ್ತಿದ್ದಾರೆ. ಈ ಸ್ಥಿತಿಯನ್ನು ಬದಲಿಸಲು ಈ ಯೋಜನೆಗಳು ಉದ್ದೇಶಿತವಾಗಿವೆ. ಗುರುಪುರದಲ್ಲಿ ಒಂದು ಫೈವ್ ಸ್ಟಾರ್ ಹೋಟೆಲ್ ಈಗಾಗಲೇ ನಿರ್ಮಾಣ ಹಂತದಲ್ಲಿದ್ದು, ಮತ್ತೊಂದು ಕುಳೂರಿನಲ್ಲಿ ನಿರ್ಮಿಸಲು ಪ್ರಸ್ತಾವಿಸಲಾಗಿದೆ. ಮುಂದಿನ ಎರಡು ವರ್ಷಗಳೊಳಗೆ ಈ ಯೋಜನೆಗಳು ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಕರಾವಳಿ ಕರ್ನಾಟಕದಲ್ಲಿ ಬಹುಕಾಲದಿಂದಲೂ ಇದ್ದ ಪ್ರೀಮಿಯಂ ಹೋಟೆಲ್ಗಳ ಕೊರತೆಯನ್ನು ನೀಗಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಹೆಚ್ಚಿನ ಪ್ರವಾಸಿಗರು ಇತರ ಜಿಲ್ಲೆಗಳತ್ತ ಅಥವಾ ನೆರೆಯ ರಾಜ್ಯಗಳತ್ತ ತೆರಳುತ್ತಾರೆ. ಐದು ನಕ್ಷತ್ರ ಹೋಟೆಲ್ಗಳ ಆರಂಭದಿಂದಾಗಿ ಈ ಪ್ರದೇಶಕ್ಕೆ ಹೆಚ್ಚಿನ ಪ್ರವಾಸಿಗರು ಆಕರ್ಷಿತರಾಗುತ್ತಾರೆ. ಮಂಗಳೂರು ನಗರ ನಿರಂತರವಾಗಿ ಅಭಿವೃದ್ಧಿ ಪಥದಲ್ಲಿರುವ ಹಿನ್ನೆಲೆಯಲ್ಲಿ, ಆತಿಥ್ಯ ಕ್ಷೇತ್ರದಲ್ಲಿ ಹೊಸ ಹೂಡಿಕೆಗಳಿಗೆ ಹೆಚ್ಚಿನ ಅವಕಾಶವಿದ್ದು, ಇದು ಕರಾವಳಿಯ ಪ್ರವಾಸೋದ್ಯಮ ಹಾಗೂ ವ್ಯಾಪಾರ ವೃದ್ಧಿಗೆ ಮಹತ್ವದ ಪಾತ್ರ ವಹಿಸಲಿದೆ ಎಂದು ಉದ್ಯಮ ವೀಕ್ಷಕರು ಹೇಳಿದ್ದಾರೆ.
Five-star hotel in Mangalore with an investment of Rs. 500 crore – ತುಳು ಟೈಮ್ಸ್
ಇದನ್ನೂ ಓದಿ : ಸುಳ್ಯದ ರಂಗ ಮಯೂರಿಯಲ್ಲಿ ‘ನಿರ್ದಿಂಗತ’ದ ಬಹುನಿರೀಕ್ಷಿತ ನಾಟಕ ಪ್ರದರ್ಶನ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SDL5CAMpIQ0?si=lCY7AV2us-sH_sNs











