ಬ್ರೇಕಿಂಗ್ ನ್ಯೂಸ್
ಪುತ್ತೂರು

ಪುನೀತ್ ಕೆರೆಹಳ್ಳಿ ಬಂಧನ ಖಂಡನೀಯ:ಅರುಣ್ ಕುಮಾರ್ ಪುತ್ತಿಲ

ಪುತ್ತೂರು:ತುಳುಟೈಮ್ಸ್ | ಅಕ್ರಮ ವಲಸಿಗರ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಖಂಡಿಸಿದ್ದಾರೆ.
ಪುನೀತ್ ಕೆರೆಹಳ್ಳಿಯವರನ್ನು ಬಂಧಿಸಿದ್ದು ಕಾಂಗ್ರೆಸ್ ಸರ್ಕಾರದ ಮತೀಯ ಒಲೈಕೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಯಾವುದೇ ನೋಟೀಸ್ ಕೂಡ ನೀಡದೆ ಏಕಾಏಕಿ ಪುನೀತ್ ಕೆರೆಹಳ್ಳಿಯವರನ್ನು ಬಂಧಿಸಿದ್ದು ಹಲವು ಅನುಮಾನವನ್ನು ಸೃಷ್ಟಿಸಿದೆ. ವೋಟ್ ಬ್ಯಾಂಕ್ ರಾಜಕಾರಣ, ಓಲೈಕೆ, ತುಷ್ಟೀಕರಣಕ್ಕಾಗಿ  ಪುನೀತ್ ಕೆರೆಹಳ್ಳಿಯನ್ನು ಬಂಧಿಸಲಾಗಿದೆ.  ಪುನೀತ್ ಕೆರೆಹಳ್ಳಿ ಅವರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಒತ್ತಾಯಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಅಕ್ರಮ ವಲಸಿಗರ ಮೇಲೆ ಕಠಿಣ ಕ್ರಮಕೈಗೊಂಡು,ಅವರನ್ನು ಹೊರಗಟ್ಟುವ ಕೆಲಸವನ್ನು ಮಾಡಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.

Arrest of Puneeth Kerehalli is condemnable: Arun Kumar Puttila -tulutimes

ಇದನ್ನೂ ಓದಿ:ಪಿಎಫ್ ಖಾತೆದಾರರೇ ಗಮನಿಸಿ : ಇನ್ಮುಂದೆ ಸುಲಭವಾಗಿ ನಿಮ್ಮ ಹಣ ನಿಮ್ಮ ಖಾತೆ ಸೇರಲಿದೆ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ :https://www.youtube.com/@tulutimess
ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page