ಮಂಗಳೂರು : Tulu Times | ಇಂಡೋನೇಷಿಯಾದ ವಿಶ್ವವಿದ್ಯಾಲಯೊಂದು ಬಿಡುಗಡೆ ಮಾಡಿದ UI ಗ್ರೀನ್ಮೆಟ್ರಿಕ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ 2025ರಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಭಾರತದಲ್ಲಿ ಮೂರನೇ ಸ್ಥಾನ ಪಡೆದು ಮಹತ್ವದ ಸಾಧನೆ ಮಾಡಿದೆ. ಇದರೊಂದಿಗೆ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಹಾಗೂ ಜಾಗತಿಕ ಮಟ್ಟದಲ್ಲಿ 127ನೇ ಸ್ಥಾನ ಪಡೆದಿದೆ.
ಈ ವರ್ಷದ ರ್ಯಾಂಕಿಂಗ್ನಲ್ಲಿ ಭಾರತದಿಂದ 100 ವಿಶ್ವವಿದ್ಯಾಲಯಗಳು ಸೇರಿದಂತೆ ವಿಶ್ವದ 105 ದೇಶಗಳ 1,745 ಉನ್ನತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದವು. ಹಸಿರು ಕ್ಯಾಂಪಸ್ ಉಪಕ್ರಮಗಳು ಮತ್ತು ಪರಿಸರ ಸ್ನೇಹಿ ಕಾರ್ಯಪದ್ದತಿಗಳನ್ನು ಆಧಾರವಾಗಿಟ್ಟುಕೊಂಡು ಈ ರ್ಯಾಂಕಿಂಗ್ ನೀಡಲಾಗುತ್ತದೆ.
ಮಂಗಳೂರು ವಿಶ್ವವಿದ್ಯಾಲಯ ದೇಶದ ಮಟ್ಟದಲ್ಲಿ ಮೂರನೇ ಸ್ಥಾನ ;
ಪರಿಸರ ಜವಾಬ್ದಾರಿ ಮತ್ತು ಸ್ಥಿರ ಅಭಿವೃದ್ಧಿಗೆ ವಿಶ್ವವಿದ್ಯಾಲಯಗಳ ಬದ್ಧತೆಯನ್ನು ಅಳೆಯುವ ಏಳು ಮಾನದಂಡಗಳ ಆಧಾರದಲ್ಲಿ ಮೌಲ್ಯಮಾಪನ ನಡೆದಿದ್ದು, ಅದರಲ್ಲೇ ಮಂಗಳೂರು ವಿಶ್ವವಿದ್ಯಾಲಯ ದೇಶದ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು, ಹಸಿರು ಪರಿಸರ ಮತ್ತು ಮೂಲಸೌಕರ್ಯ ವಿಭಾಗದಲ್ಲಿ ವಿಶ್ವವಿದ್ಯಾಲಯವು ದೇಶದಲ್ಲೇ ಪ್ರಥಮ ಸ್ಥಾನ ಗಳಿಸಿದೆ ಎಂದು ತಿಳಿಸಿದರು.
ಇತರೆ ವಿಭಾಗಗಳಲ್ಲಿ: ಇಂಧನ ಮತ್ತು ಹವಾಮಾನ ಬದಲಾವಣೆ – ದೇಶದಲ್ಲಿ 4ನೇ ಸ್ಥಾನ, ತ್ಯಾಜ್ಯ ನಿರ್ವಹಣೆ – 6ನೇ ಸ್ಥಾನ, ನೀರು ನಿರ್ವಹಣೆ – 6ನೇ ಸ್ಥಾನ, ಶಿಕ್ಷಣ ಮತ್ತು ಸಂಶೋಧನೆ – 10ನೇ ಸ್ಥಾನ, ಸಾರಿಗೆ ವ್ಯವಸ್ಥೆ – 11ನೇ ಸ್ಥಾನ ಪಡೆದಿರುವುದಾಗಿ ಅವರು ವಿವರಿಸಿದರು.
ಈ ಸಾಧನೆಗೆ ವಿಶ್ವವಿದ್ಯಾಲಯದ ಎಲ್ಲಾ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ನಿರಂತರ ಸಹಕಾರ ಮತ್ತು ಶ್ರಮವೇ ಕಾರಣವಾಗಿದೆ ಎಂದು ಪ್ರೊ. ಧರ್ಮ ಅವರು ಅಭಿಪ್ರಾಯಪಟ್ಟರು.
Greenmetric University Rankings: Mangalore University ranked third in India – ತುಳು ಟೈಮ್ಸ್
ಇದನ್ನೂ ಓದಿ :ವಿಜಯ್ ಸೇತುಪತಿ ಬರ್ತ್ ಡೇಗೆ ಗುಡ್ ನ್ಯೂಸ್ ಕೊಟ್ಟ ಪುರಿ ಜಗನ್ನಾಥ್…!
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=lCY7AV2us-sH_sNs











