ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪ್ರಯಾಣ ಮಾಡುವಾಗ ನಿಮಗೆ ಸುಸ್ತು, ವಾಂತಿ ಆಗೋದಕ್ಕೆ ಮುಖ್ಯ ಕಾರಣ ಇಲ್ಲಿವೆ

ಆರೋಗ್ಯ : Tulu Times | ಪ್ರಯಾಣ ಮಾಡೋದಂದ್ರೆ ಎಲ್ಲರಿಗೂ ಇಷ್ಟ. ಅದ್ರಲ್ಲೂ ಕೆಲವರು ದೂರ ಪ್ರಯಾಣ ಮಾಡೋದಕ್ಕೆ ತುಂಬಾನೇ ಇಷ್ಟ ಪಡುತ್ತಾರೆ. ಹೌದು…. ಪ್ರಯಾಣವು ಸಂತೋಷ ಮತ್ತು ಅನುಭವಗಳೊಂದಿಗೆ ಬರುತ್ತದೆ. ಆದರೆ ಹಲವರಿಗೆ ಪ್ರಯಾಣದ ವೇಳೆ ಆಯಾಸ, ತಲೆಸುತ್ತು, ವಾಂತಿ ಇತ್ಯಾದಿ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಮೇಲೆ‌ ತಿಳಿಸಿದ ಸಮಸ್ಯೆಗಳು ಎಲ್ಲರಲ್ಲಿ ಕಾಣ್ಸೋದಿಲ್ಲ. ಆದ್ರೆ ಇದಕ್ಕೆ ವಯಸ್ಸಿನ ಅಂತರವಿರೋದಿಲ್ಲ. ಯಾರಲ್ಲಿ ಬೇಕಾದರೂ ಈ ಸಮಸ್ಯೆ ಉಲ್ಬಣಿಸಬಹುದು. ಇದಕ್ಕೆ ಮುಖ್ಯ ಕಾರಣ, ನಮ್ಮ ಕಣ್ಣುಗಳು, ಒಳ ಕಿವಿಯ ಸಮತೋಲನ ವ್ಯವಸ್ಥೆ ಮತ್ತು ಮೆದುಳು. ಈ ಮೂವರ ನಡುವೆ ಹೊಂದಾಣಿಕೆ ತಪ್ಪಿದಾಗ ಈ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಉದಾಹರಣೆಗೆ: ಕಾರು ಚಲಿಸುತ್ತಿದ್ದರೂ ಪುಸ್ತಕ ಓದುವಾಗ ಕಣ್ಣುಗಳು ಸ್ಥಿರತೆಯನ್ನು ನೋಡುತ್ತವೆ, ಆದರೆ ಒಳ ಕಿವಿಗೆ ಚಲನೆ ಅನುಭವವಾಗುತ್ತದೆ. ಈ ಭಿನ್ನ ಮಾಹಿತಿ ಮೆದುಳಿಗೆ ಗೊಂದಲ ಉಂಟುಮಾಡಿ ವಾಂತಿ, ತಲೆಸುತ್ತು ತರಬಹುದು.

ಸಾಮಾನ್ಯ ಲಕ್ಷಣಗಳು ;
ತಲೆಸುತ್ತು, ಹೊಟ್ಟೆ ಮಲಬದ್ಧತೆ ಅಥವಾ ಬೇಸರ, ವಾಂತಿ ಅಥವಾ ವಾಂತಿಯ ಭಾವನೆ, ಚಳಿ ಬೆವರು,‌ ಅತಿಯಾದ ಆಯಾಸ, ಗಮನ ಕೇಂದ್ರೀಕರಣದ ಕೊರತೆ ಇತ್ಯಾದಿಗಳು.

ಈ ಸಮಸ್ಯೆಯು ಮುಖ್ಯವಾಗಿ, ಮಕ್ಕಳಲ್ಲಿ, ಗರ್ಭಿಣಿ ಸ್ತ್ರೀಯರಲ್ಲಿ, ಮೈಗ್ರೇನ್ ಇರುವವರಿಗೆ, ಮೊದಲ ಬಾರಿ ದೂರ ಪ್ರಯಾಣ ಮಾಡುವವರಿಗೆ, ದುರ್ಬಲ ಆರೋಗ್ಯ ಹೊಂದಿರುವವರಿಗೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ, ಇದನ್ನು ಆದಷ್ಟು ಅವಾಯ್ಡ್ ಮಾಡ್ಬೇಕು ಅಂತಂದ್ರೆ, ನೀವು ಪ್ರಯಾಣದ ಮೊದಲು ಹಗುರವಾದ ಆಹಾರ ಸೇವಿಸಿ, ಅತಿಯಾದ ಎಣ್ಣೆ ಅಥವಾ ಮಸಾಲೆ ಆಹಾರ ತಪ್ಪಿಸಿ, ಹೊಟ್ಟೆ ತುಂಬಾ ಅಥವಾ ಸಂಪೂರ್ಣ ಖಾಲಿ ಇರದಂತೆ ನೋಡಿಕೊಳ್ಳಿ, ನಿದ್ರೆ ಪೂರ್ತಿಯಾಗಿ ಮಾಡಿ. ಇನ್ನು ಪ್ರಯಾಣದ ವೇಳೆ ಮುಂದೆ ನೋಡುತ್ತಾ ಕುಳಿತುಕೊಳ್ಳಿ, ಸಾಧ್ಯವಾದರೆ ಕಿಟಕಿಯ ಬಳಿ ಕುಳಿತು ಹೊರ ದೃಶ್ಯ ನೋಡಿ, ಪುಸ್ತಕ ಓದುವುದು, ಮೊಬೈಲ್ ಹೆಚ್ಚು ನೋಡುವುದು ತಪ್ಪಿಸಿ, ತಾಜಾ ಗಾಳಿ ಬರುವಂತೆ ಕಿಟಕಿ ತೆರೆದುಕೊಳ್ಳಿ, ಸಣ್ಣ ಸಿಪ್‌ಗಳಲ್ಲಿ ನೀರು ಕುಡಿಯಿರಿ, ಶುಂಠಿ, ಪುದೀನ ಎಲೆ ಅಥವಾ ಲವಂಗ ಚಪ್ಪರಿಸುವುದು ಉಪಕಾರಿಯಾಗಬಹುದು.

ಇನ್ನು ಈ ಸಮಸ್ಯೆ ಉಲ್ಬಣವಾಗಿ, ವಾಂತಿ ನಿರಂತರವಾಗಿ ಆಗುತ್ತಿದ್ದರೆ, ದೇಹದಲ್ಲಿ ನೀರಿನ ಕೊರತೆ ಲಕ್ಷಣಗಳು ಕಂಡುಬಂದರೆ,‌ ತೀವ್ರ ತಲೆನೋವು ಅಥವಾ ದೃಷ್ಟಿ ಸಮಸ್ಯೆಯಾದರೆ, ಪ್ರತಿಯೊಂದು ಪ್ರಯಾಣದಲ್ಲೂ ಗಂಭೀರ ಸಮಸ್ಯೆ ಎದುರಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ‌.

Here are the main reasons why you feel tired and nauseous while traveling. – ತುಳು ಟೈಮ್ಸ್

ಇದನ್ನೂ ಓದಿ : ಉರುವಾಲು ಗ್ರಾಮದ ಕಾರಿಂಜ-ಬಾಕಿಮಾರು ಗ್ರಾಮ ದೈವಗಳ ನೇಮೋತ್ಸವ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=805wapMf0eOAJadz

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page