ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಖಾಕಿಯಲ್ಲಿ ಧೀರೆನ್ ರಾಮ್ ಕುಮಾರ್ ಖದರ್..ಹೇಗಿದೆ ಪಬ್ಬಾರ್ ಕ್ಯಾರೆಕ್ಟರ್ ಇಂಟ್ರೂಡಕ್ಷನ್ ಝಲಕ್?

ಸಿನಿಮಾ: Tulu Times | ಶಾಖಾಹಾರಿ’ ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್ ಹಾಗೂ‌ ದೊಡ್ಮನೆ ಕುಡಿ ಧೀರೆನ್ ರಾಮ್ ಕುಮಾರ್ ಕಾಂಬಿನೇಷನ್‌ನ ಬಹು ನಿರೀಕ್ಷಿತ ಸಿನಿಮಾ ಪಬ್ಬಾರ್.

ಟೈಟಲ್ ಮೂಲಕ ಕುತೂಹಲ ಹೆಚ್ಚಿಸಿರುವ ಪಬ್ಬಾರ್ ಚಿತ್ರದ ಕ್ಯಾರೆಕ್ಟರ್ ಇಂಟ್ರೂಡಕ್ಷನ್ ಟೀಸರ್ ನ್ನು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ. ವಿಭಿನ್ನವಾಗಿ‌ ಸಂದೀಪ್ ಅವರು ಹೀರೋ ಕ್ಯಾರೆಕ್ಟರ್ ಇಂಟ್ರೂವನ್ನು ಪರಿಚಯಿಸಿದ್ದಾರೆ. 4 ನಿಮಿಷ 19 ಸೆಕೆಂಡ್ ಇರುವ ಝಲಕ್ ಬಹಳ ಕ್ಯೂರಿಯಾಸಿಟಿ ಹೆಚ್ಚುವಂತೆ ಮಾಡಿದೆ. ಟೀಸರ್ ಕೊನೆಯಲ್ಲಿ ಧೀರೆನ್ ಅವರು ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪಬ್ಬಾರ್ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ನಟಿಸಿದ್ದಾರೆ.

ಇದೊಂದು ಕ್ರೈಂ, ಅಡ್ವೆಂಚರಸ್ ಥ್ರಿಲ್ಲರ್ ಸಿನಿಮಾ. ಹಿಮಾಚಲ ಪ್ರದೇಶದ ಶಿಮ್ಲಾ ಬಳಿಯ ಪಬ್ಬಾರ್ ನದಿ ಈ ಚಿತ್ರದ ಕಥೆಯ ಕೇಂದ್ರಬಿಂದು. ಹಾಗಾಗಿ ಚಿತ್ರಕ್ಕೆ ‘ಪಬ್ಬಾರ್’ ಎಂಬ ಟೈಟಲ್ ಫಿಕ್ಸ್ ಮಾಡಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ ಹಾಗೂ ಮಯೂರ್ ಅಂಬೆಕಲ್ಲು ಸಂಗೀತ ‘ಪಬ್ಬಾರ್’ ಚಿತ್ರಕ್ಕಿದೆ. ಧೀರೇನ್ ಹಾಗೂ ಅಮೃತಾ ಪ್ರೇಮ್ ಪಾತ್ರಗಳ ಸುತ್ತಾ ಇಡೀ ಸಿನಿಮಾ ಕಥೆ ಸಾಗಲಿದೆ. ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಹಿರಿಯ ನಟ ರಾಮಕೃಷ್ಣ, ಸಕುಟುಂಬ ಖ್ಯಾತಿಯ ಭರತ್ ಜಿಬಿ, ಶ್ರೀಹರ್ಷ ಗೋಭಟ್ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಐಷಾರಾಮಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರ

ಅಪ್ಪ-ಮಗನ ಬಾಂಧವ್ಯದ ಚೌಕಿದಾರ್ ಟ್ರೇಲರ್ ರಿಲೀಸ್..ಇದೇ ತಿಂಗಳ‌ 30ಕ್ಕೆ ಸಿನಿಮಾ ಬಿಡುಗಡೆ

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಪೃಥ್ವಿ ಅಂಬಾರ್‌ ಹಾಗೂ ದೊಡ್ಮನೆ ಕುಡಿ ಧನ್ಯಾ ರಾಮ್ ಕುಮಾರ್ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಚೌಕಿದಾರ್. ಈಗಾಗಲೇ ಟೈಟಲ್ ಹಾಗೂ ಕಂಟೆಂಟ್ ಮೂಲಕ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಿನ್ನೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಪೊಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಗೌಡ ಹಾಗೂ ಹೈಕೋರ್ಟ್ ವಕೀಲರಾದ ಪ್ರವೀಣ್ ವಿಶೇಷ ಅತಿಥಿಯಾಗಿ ಆಗಮಿಸಿ‌ ಇಡೀ ತಂಡಕ್ಕೆ ಶುಭಾ ಹಾರೈಸಿದರು

ಟ್ರೇಲರ್ ಬಿಡುಗಡೆ ಬಳಿಕ ಪೊಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಗೌಡ ಮಾತನಾಡಿ, ಗಡಿಯಲ್ಲಿ ದೇಶವನ್ನು ಸೈನಿಕರು ಕಾಯುತ್ತಾರೆ. ಅದೇ ರೀತಿ ಒಳ ಭಾಗದಲ್ಲಿ ಪೊಲೀಸರು ಕಾಯುತ್ತಾರೆ. ಕುಟುಂಬ ಅಂತಾ ಬಂದಾಗ ತಂದೆ ಎಂಬ ಚೌಕಿದಾರ್ ಕಾಯುತ್ತಾರೆ. ಅಂತಹ ಒಳ್ಳೆ ವಿಷಯ ಇಟ್ಕೊಂಡು ಮೂವೀ ಮಾಡಿದ್ದಾರೆ. ಟ್ರೇಲರ್ ನೋಡಿದಾಗ ತಂದೆ ತಾಯಿ ನೆನಪು ಬಂದರು. ನಾವು ಕೆಲಸ ಒತ್ತಡದಲ್ಲಿ ತಂದೆ ತಾಯಿ ಮರೆತುಬಿಟ್ಟಿದ್ದೇವು. ಅವರು ಇಲ್ಲದಾಗ ಅವರ ಪ್ರೀತಿ ಗೊತ್ತಾಗುತ್ತದೆ. ಚೌಕಿದಾರ್ ಇಡೀ ತಂಡಕ್ಕೆ ಒಳ್ಳೆದಾಗಲಿ‌. ಈ ಸಿನಿಮಾ ಶತ ದಿನ ಆಚರಿಸಲಿ ಎಂದರು.

ಹೈಕೋರ್ಟ್ ವಕೀಲರಾದ ಪ್ರವೀಣ್ ಮಾತನಾಡಿ, ಟ್ರೇಲರ್ ನೋಡಿದ್ರೆ ಟೀಂ ವರ್ಕ್ ಎಷ್ಟಿದೆ ಅನ್ನೋದು ಗೊತ್ತಾಗುತ್ತದೆ. ಒಂದು ಸಿನಿಮಾ‌ ನಿರ್ದೇಶಕನ ಕನಸಾದರೆ, ನಿರ್ಮಾಪಕನಿಗೆ ಅದು ಕೂಸು.‌ ಈ ಚಿತ್ರದ ನಿರ್ಮಾಪಕ ಕಲ್ಲಹಳ್ಳಿ ಚಂದ್ರಶೇಖರ್ ಎಲ್ಲ ಬೇಕುಗಳನ್ನು ಚಿತ್ರಕ್ಕೆ ನೀಡಿದ್ದಾರೆ. ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಬುದ್ದಿವಂತಿಕೆಯುಳ್ಳವರು. ಈ ಚಿತ್ರದ ಮೂಲಕ ಹೊಸದನ್ನು ಕೊಡಲು ಹೊರಟಿದ್ದಾರೆ‌. ಚೌಕಿದಾರ್ ಸಿನಿಮಾ ಶತದಿನ ಹಾರೈಸಲಿ ಎಂದರು.

Ram Kumar Khader is handsome in khaki..how is the character introduction of Pubbar?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page