ಸಿನಿಮಾ: Tulu Times | ಪೆಪೆ ಸಿನಿಮಾ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಬೆನ್ನಿ ಸಿನಿಮಾ ಮೂಲಕ ಮಹಿಳಾ ಪ್ರಧಾನ ಕಥೆಯನ್ನು ಹೇಳೋದಿಕ್ಕೆ ಹೊರಟಿದ್ದಾರೆ. ಬಹುಭಾಷಾ ನಟಿ, ಕನ್ನಡದ ಜಿಂಕೆ ಮರಿ ಖ್ಯಾತಿಯ ನಂದಿತಾ ಶ್ವೇತಾ ಈ ಚಿತ್ರದ ನಾಯಕಿ.
ಇದನ್ನೂ ಓದಿ: ಈ ಪ್ರಮುಖ ಪ್ರದೇಶಗಳಲ್ಲಿನ ಚಾರಣಕ್ಕೆ ನಿರ್ಬಂಧ ಹೇರಲಾಯಿತೇ ?
ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬೆನ್ನಿ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಶ್ವೇತಾ ಕಂಪ್ಲೀಟ್ ವೈಲೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ನಿಯ ಹೊಸ ಅವತಾರ ರೂಪ ಕಂಡು ಇವ್ರೇನಾ ಜಿಂಕೆಮರಿ ನಂದಿತಾ ಎನ್ನುತ್ತಿದ್ದಾರೆ ಅಭಿಮಾನಿಗಳು. ಬೆನ್ನಿ ಚಿತ್ರದಲ್ಲಿ ದಕ್ಷಿಣದ ಭಾರತದ ಪ್ರಮುಖ ನಟರು ಅಭಿನಯಿಸಲಿದ್ದಾರೆ. ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಈ ಚಿತ್ರ ಮೂಡಿ ಬರುತ್ತಿದೆ. ಸಂಡೇ ಸಿನಿಮಾಸ್ ಬ್ಯಾನರ್‌ನಡಿ ರಾಮೇನಹಳ್ಳಿ ಜಗನ್ನಾಥ್ ಚಿತ್ರವನ್ನು ನಿರ್ಮಿಸಿ ಪ್ರೆಸೆಂಟ್ ಮಾಡುತ್ತಿದ್ದಾರೆ. ಸಚಿನ್ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ಗುರುಪ್ರಸಾದ್ ನಾರ್ನಾಡ್ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಮನು ಶೇಡ್ಗಾರ್ ಹಾಗೂ ರಂಜನ್ ನರಸಿಂಹಮೂರ್ತಿ ಸಂಕಲನ ಈ ಚಿತ್ರಕ್ಕೆ ಇದೆ.
ಇದನ್ನೂ ಓದಿ: ದುರ್ವಾಸನೆಯಿಂದ ತುಂಬಿದ ರಸ್ತೆಗಳು : ಬೆಂಗಳೂರು ನಾಗರಿಕರ ಆಕ್ರೋಶ
ನಟಿ ನಂದಿತಾ ಶ್ವೇತಾ ನಟಿಸಿರುವ ಚಿತ್ರಗಳು..?
ಕನ್ನಡ ಚಿತ್ರರಂಗದಲ್ಲಿ ‘ಜಿಂಕೆ ಮರಿ’ ಎಂದೇ ಪ್ರಖ್ಯಾತರಾದವರು ನಟಿ ನಂದಿತಾ ಶ್ವೇತಾ. ನಂದಿತಾ ಶ್ವೇತಾ ಮೂಲತಃ ಬೆಂಗಳೂರಿನವರು. ಅವರು ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.2013 ರಲ್ಲಿ ಬಿಡುಗಡೆಯಾದ ‘ಜಿಂಕೆ ಮರಿ’ ಎಂಬ ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ನಂತರ ಅವರಿಗೆ ಈ ಹೆಸರು ಜನಪ್ರಿಯವಾಯಿತು. ಇವರು ಮೊದಲು 2008 ರಲ್ಲಿ ‘ನಂದ ಲವ್ಸ್ ನಂದಿತಾ’ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ತಮಿಳಿನ ‘ಅಟ್ಟಕತ್ತಿ’ ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡರು. ಕನ್ನಡದಲ್ಲಿ ‘ಮಂಡ್ಯ ಟು ಮುಂಬೈ’, ಇತ್ತೀಚೆಗೆ ಬಂದ ‘ಅಕಲ್ಪಿತ್’, ಹಾಗೂ ತಮಿಳು ಮತ್ತು ತೆಲುಗಿನ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.
Deer Shweta is now fully violent…how about the Benny motion poster?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











