ಬ್ರೇಕಿಂಗ್ ನ್ಯೂಸ್
ಕರ್ನಾಟಕಪುತ್ತೂರು

ಪುತ್ತೂರು: ಆಟೋ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಪುತ್ತೂರು: Tulu Times | ಆರ್ಯಾಪು ಗ್ರಾಮದ ಪಿಲಿಗುಂಡ ಎಂಬಲ್ಲಿ ಆಟೋ ಚಾಲಕ ಗೋಪಾಲ ನಾಯ್ಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೋಪಾಲ ನಾಯ್ಕ (55) ಮೃತ ದುರ್ದೈವಿ. ಮನೆಯಲ್ಲಿಯೇ  ರಾತ್ರಿ ಮಲಗಿದ್ದಅವರು ಬೆಳಗ್ಗೆ ಮನೆ ಮುಂದಿರುವ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಸಾಲದ ಕಂತು ಹಾಗೂ ರಿಕ್ಷಾದ ಇನ್ಸೂರೆನ್ಸ್ ಬಾಕಿಯಾಗಿದ್ದ ಕಾರಣ ಆಟೋವನ್ನು ಸೀಝ್ ಮಾಡಲಾಗಿತ್ತು. ಪುತ್ತೂರಿನ ಸಹಕಾರಿ ಸಂಘವೊಂದರಲ್ಲಿ ಗೋಪಾಲ  ರಿಕ್ಷಾ ಖರೀದಿಗಾಗಿ ಸಾಲ ಪಡೆದಿದ್ದರು.  ಇದರಿಂದ ನೊಂದು ಆತ್ಮಹತ್ಯೆಗೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಗೋಪಾಲ ನಾಯ್ಕ ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಆಗಲಿದ್ದಾರೆ.

ಇದನ್ನೂ ಓದಿ:‌ ಗರ್ಭಿಣಿ ಸ್ತ್ರೀಯರಲ್ಲಿ ಮೂತ್ರ ಸೋಂಕಿನ ಅಪಾಯ ಏಕೆ ಹೆಚ್ಚುತ್ತದೆ?

ಬೆಳ್ತಂಗಡಿ: ಕವಚಿಬಿದ್ದ ಸ್ಥಿತಿಯಲ್ಲಿ ವ್ಯಕ್ತಿ ನಿಗೂಢ ಸಾವು!

ಬೆಳ್ತಂಗಡಿ: ಪ್ರತ್ಯೇಕ ಪ್ರಕರಣದಲ್ಲಿ,ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಯರ್ಡೂರು ಎಂಬಲ್ಲಿ ಯುವಕನೋರ್ವ ಮನೆಯೊಳಗಡೆ ಕವಚಿ ಬಿದ್ದ ಸ್ಥಿತಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಯಾರ್ಡೂರು ನಿವಾಸಿ ದಿ. ಶ್ರೀಧರ ಭಟ್ ಮತ್ತು ಶ್ರೀ ಮತಿ ಗೀತಾ ದಂಪತಿ ಪುತ್ರ ಮುರಳೀಧರ ಭಟ್ (35) ಎಂಬವರು ಜ.15 ರಂದು ಬೆಳಗ್ಗೆ ಮನೆಯೊಳಗೆ ಕವಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇನ್ನು ಅವರ ತಲೆಯಿಂದ ರಕ್ತ ಹರಿದು ನೆಲದಲ್ಲಿ ಹರಿದಿದೆ. ಇದರಿಂದ ಇದು ಕೊಲೆಯೋ ಅಥವಾ ಕುಸಿದು ಬಿದ್ದು ಸಾವನ್ನಪ್ಪಿದ್ದಾರೋ ಎಂಬುವುದು ಇನ್ನೂ ತಿಳಿದುಬಂದಿಲ್ಲ.

ಮುರಳೀಧರ ಭಟ್ ತಾಯಿ ಗೀತಾ ಭಟ್ ಅವರು ಕಾಲಿನ ಆಪರೇಷನ್ ಆಗಿ ತಮ್ಮ ಮಗಳ ಮನೆಗೆ ವಿಶ್ರಾಂತಿ ಪಡೆಯಲು ತೆರಳಿದ್ದರು ಎನ್ನಲಾಗಿದೆ. ಹೀಗಾಗಿ ಮನೆಯಲ್ಲಿ ಮುರಳೀಧರ ಭಟ್ ಒಬ್ಬರೇ ಇದ್ದರು. ಇನ್ನು ಮನೆಯ ಒಳಗಿನಿಂದ ಲಾಕ್ ಮಾಡಲಾಗಿದ್ದು ಮನೆಯೊಳಗೆ ಫ್ಯಾನ್ ತಿರುಗುತ್ತಿತ್ತು. ಮುರಳೀಧರ ಭಟ್ ಒಬ್ಬರೇ ರಾತ್ರಿ ಮನೆಯಲ್ಲಿ ಇದ್ದುದರಿಂದ ಘಟನೆ ಏನಾಗಿದೆ ಎಂಬುವುದು ನಿಗೂಢವಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

puttur: Auto driver commits suicide by hanging himself- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 130

You cannot copy content of this page