ಬ್ರೇಕಿಂಗ್ ನ್ಯೂಸ್
ಕರ್ನಾಟಕಬಂಟ್ವಾಳ

ಬಂಟ್ವಾಳ: ಚೂಡಿದಾರ್ ಬುಕ್ ಮಾಡಿ 87 ಸಾವಿರ ಕಳೆದುಕೊಂಡ ಮಹಿಳೆ!

ಬಂಟ್ವಾಳ:Tulu Times | ಫೇಸ್ ಬುಕ್ ಜಾಹೀರಾತು ನಂಬಿ ಚೂಡಿದಾರ್ ಬುಕ್ ಮಾಡಿ ಮಹಿಳೆಯೊಬ್ಬರು  87 ಸಾವಿರ ಕಳೆದುಕೊಂಡ ಘಟನೆ ಬಂಟ್ವಾಲದಲ್ಲಿ ನಡೆದಿದೆ.

ಇದನ್ನೂ ಓದಿ: ಸಣ್ಣ ಉದ್ಯಮಗಳು ಹೊಸ ಜಾಗತಿಕ ಮಾರುಕಟ್ಟೆಗಳಿಗೆ ಪ್ರವೇಶಿಸಲು ಉತ್ತೇಜನ

35 ವರ್ಷದ ಮಹಿಳೆ  ಫೇಸ್‌ಬುಕ್‌ನಲ್ಲಿ  ಜಾಹೀರಾತು ನೋಡಿ, ಚೂಡಿದಾರ್ ಬುಕ್ ಮಾಡಲು Aramya App ನಲ್ಲಿ 03-01-2026 ರಂದು ಸಲ್ವಾರ್ ಚೂಡಿದಾರ್ ಬಟ್ಟೆಯನ್ನು ಆರ್ಡರ್‌ ಮಾಡಿ ಪಾವತಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

05-01-2026 ಮತ್ತು 06-01-2026 ರಂದು ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ಕರೆ/ವಾಟ್ಸ್ಆಪ್ ಮಾಡಿ, ಪಾವತಿ stuck ಆಗಿದೆ ಎಂದು ಹೇಳಿ ಸ್ಕ್ಯಾನರ್, Refund Code ಮತ್ತು ಬ್ಯಾಂಕ್ ಖಾತೆ ಮೂಲಕ ಮರು ಹಣ ಪಾವತಿಸಿಸಿಕೊಂಡಿದ್ದಾರೆ. ಈ ರೀತಿಯಾಗಿ ಒಟ್ಟು ರೂ.87,524/- ಹಣವನ್ನು ಸೈಬ‌ರ್ ವಂಚನೆ ಮೂಲಕ ಕಳೆದುಕೊಂಡಿದ್ದಾರೆ. BNS 2023 ಮತ್ತು 66(ಸಿ)66(ಡಿ) ಐಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇದನ್ನೂ ಓದಿ: ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಐಷಾರಾಮಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರ

ಉಡುಪಿ: ತಾಯಿ ಮನೆಗೆ ಹೋಗ್ತಿನಿ ಅಂತ ಹೇಳಿದ ಯುವತಿ ನಾಪತ್ತೆ


ಉಡುಪಿ:
ಪ್ರತ್ಯೇಕ ಪ್ರಕರಣದಲ್ಲಿ,ತಾಲೂಕು ನಾಲು ಗ್ರಾಮದ ನಡ್ಯಾಲು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಲ್ಲಿಕಾ (34) ಎಂಬ ಮಹಿಳೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ತಾಯಿ ಮನೆಗೆ ಹೋಗೋದಾಗಿ ಹೇಳಿ ಹೋದ ಮಹಿಳೆ ಮತ್ತೆ ಮನೆಗೆ ಹಿಂದಿರುಗಲೇ ಇಲ್ಲ. ಮಲ್ಲಿಕಾ ಜನವರಿ 05 ರಂದು ತನ್ನ ತಾಯಿ ಮನೆ ರಾಮನಗರಕ್ಕೆ ಹೋಗುವುದಾಗಿ ಹೇಳಿ ಅತ್ತ ತಾಯಿಯ ಮನೆಗೂ ಹೋಗದೇ, ವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ. ಮಲ್ಲಿಕಾ 5 ಅಡಿ ಎತ್ತರ, ಬಿಳಿ ಮೈಬಣ್ಣ ಸಪೂರ ಶರೀರ ಹೊಂದಿದ್ದು, ಕನ್ನಡ, ತುಳು, ಮರಾಠ ಹಾಗೂ ಮಲಯಾಳಂ ಭಾಷೆ ಮಾತನಾಡುತ್ತಾರೆ.

ಇದನ್ನೂ ಓದಿ: ಗರ್ಭಿಣಿ ಸ್ತ್ರೀಯರಲ್ಲಿ ಮೂತ್ರ ಸೋಂಕಿನ ಅಪಾಯ ಏಕೆ ಹೆಚ್ಚುತ್ತದೆ?

ಈಕೆ ಎಲ್ಲಿಯಾದರೂ ಕಂಡುಬಂದರೆ, ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ರೀಕ್ಷಕರು ಮೊ.ನಂ: 0820-2555452, .: 9480805450,.: 0820-2552133, .: 9480805431 ಸಂಪರ್ಕಿಸಬಹುದಾಗಿದೆ ಎಂದು ಪಡುಬಿದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರ ಕಚೇರಿ ತಿಳಿಸಿದೆ.

Bantwala: Woman loses Rs 87,000 by booking chudidar- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 157

You cannot copy content of this page