ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಈ ಪ್ರಮುಖ ಪ್ರದೇಶಗಳಲ್ಲಿನ ಚಾರಣಕ್ಕೆ ನಿರ್ಬಂಧ ಹೇರಲಾಯಿತೇ ?

ಚಾರಣ : Tulu Times | ಪ್ರತಿಯೊಬ್ಬರ ಇಂದಿನ ವೇಗದ ಜೀವನದಲ್ಲಿ ಒತ್ತಡ, ಆತಂಕ ಮತ್ತು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಚಾರಣವು ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುವ ಅತ್ಯುತ್ತಮ ಮಾರ್ಗವಾಗಿದೆ. ಶುದ್ಧ ಗಾಳಿ, ಹಸಿರು ಪರಿಸರ ಮತ್ತು ನೈಸರ್ಗಿಕ ನಿಶ್ಶಬ್ದತೆ ಮನಸ್ಸಿಗೆ ಹೊಸ ಉತ್ಸಾಹ ನೀಡುತ್ತದೆ. ಹಾಗಾಗಿ, ಹೆಚ್ಚಿನ ಜನರು ಚಾರಣ ಹೋಗಲು ಇಷ್ಟಪಡುತ್ತಾರೆ. ಆದ್ರೆ, ಚಾರಣಪ್ರಿಯರಿಗೆ ಈ ಸಮಯದಲ್ಲಿ ಬಿಗ್ ಶಾಕ್ ಒಂದು ಎದುರಾಗಿದೆ.

ಹೌದು….! ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದೊಳಗಿನ ಚಾರಣಗಳಿಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಕಾರ್ಕಳದ ಕುದುರೆಮುಖ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜ.14ರಿಂದ ಮುಂದಿನ ಆದೇಶದವರೆಗೆ ಈ ಚಾರಣ ಮಾರ್ಗಗಳಿಗೆ ಪ್ರವೇಶವನ್ನು ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರು ಮತ್ತು ಸಾಹಸ ಪ್ರಿಯರು ಅರಣ್ಯ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಮತ್ತು ಅಗ್ನಿ ದುರಂತದ ಸಮಯದಲ್ಲಿ ನಿರ್ಬಂಧಿತ ಪ್ರದೇಶಗಳಿಗೆ ಪ್ರವೇಶಿಸದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಡ್ಗಿಚ್ಚಿನ ಸೀಸನ್ ಸಮೀಪಿಸುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರು, ಪ್ರವಾಸಿಗರು ಮತ್ತು ಚಾರಣಿಗರ ಸುರಕ್ಷತೆ ದೃಷ್ಟಿಯಿಂದ ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯ ಹಲವಾರು ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಲ್ಲಿ ಚಾರಣವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ನಿರ್ಬಂಧದ ಬಗ್ಗೆ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು ಮತ್ತು ಎಲ್ಲಾ ಅಧಿಸೂಚಿತ ಚಾರಣ ವಲಯಗಳಲ್ಲಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ.

Are there any restrictions on trekking in these key areas? – ತುಳು ಟೈಮ್ಸ್

ಇದನ್ನೂ ಓದಿ :ಉಡುಪಿ: ಭಾರೀ ಬೂತಾಯಿ ಮೀನುಗಳ ಬೇಟೆ – ಹೆಜಮಾಡಿ ಕಡಲತೀರದಲ್ಲಿ ಜನಸಂದಣಿ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=Q70DkCb0LK5SRual

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page