ಮಂಗಳೂರು : Tulu Times | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಘೋಷಿಸಲಾದ ಸರ್ಕಾರಿ ರಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಜನವರಿ 15ರಂದು (ಗುರುವಾರ) ರಜೆಯನ್ನು ನೀಡಲಾಗುವುದು ಎಂದು ಜಿಲ್ಲಾ ಆಡಳಿತ ಸ್ಪಷ್ಟಪಡಿಸಿದೆ. ಆದರೆ, ಈ ನಡುವೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಕಚೇರಿಗಳು ಬುಧವಾರ ರಜೆ ಘೋಷಿಸಿವೆ. ಸರ್ಕಾರಿ ಶಾಲೆಗಳು, ಕಾಲೇಜುಗಳು ಹಾಗೂ ಕಚೇರಿಗಳು ಗುರುವಾರ ರಜೆಯನ್ನು ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ.
ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಜನವರಿ 14ರಂದು ಆಚರಿಸಲ್ಪಡುತ್ತಿದ್ದರೂ, ಸರ್ಕಾರಿ ರಜೆಯನ್ನು ಜನವರಿ 15ಕ್ಕೆ ನಿಗದಿಪಡಿಸಿರುವುದಕ್ಕೆ ಸಾರ್ವಜನಿಕ ವಲಯದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಜನವರಿ 14ರಂದು ರಜೆ ಘೋಷಿಸುವಂತೆ ಮನವಿ ಮಾಡಿದ್ದರು.
ಜನವರಿ 14ರಂದು ರಜೆ ನೀಡುವಂತೆ ಯಾವುದೇ ಅಧಿಕೃತ ಮನವಿ ಬಂದಿರಲಿಲ್ಲ ;
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧಿಕೃತ ಮನವಿ ಬಂದರೆ ಅದನ್ನು ಸರ್ಕಾರಕ್ಕೆ ರವಾನಿಸಲಾಗುವುದು ಎಂದು ತಿಳಿಸಿದ್ದರೂ, ಜನವರಿ 14ರಂದು ರಜೆ ನೀಡುವಂತೆ ಯಾವುದೇ ಅಧಿಕೃತ ಮನವಿ ಬಂದಿರಲಿಲ್ಲ ಎಂದು ಹೇಳಿದರು. ಅಂತಹ ಮನವಿ ಬಂದಿದ್ದರೆ ಆಡಳಿತ ಪರಿಶೀಲನೆ ನಡೆಸುತ್ತಿತ್ತು. ಆದರೆ ಯಾವುದೇ ಮನವಿ ಸಲ್ಲಿಕೆಯಾಗದ ಕಾರಣ ರಜೆಯನ್ನು ಬದಲಾಯಿಸುವ ಸಂದರ್ಭ ಉಂಟಾಗಲಿಲ್ಲ. ಹೀಗಾಗಿ ಸರ್ಕಾರಿ ರಜೆ ಜನವರಿ 15ರಂದೇ ಇರಲಿದೆ ಎಂದು ಅವರು ಹೇಳಿದರು.
Sankranti Govt Holiday Continued on January 15 : Dakshina Kannada District – ತುಳು ಟೈಮ್ಸ್
ಇದನ್ನೂ ಓದಿ : ಉಡುಪಿ: ತಾಯಿ ಮನೆಗೆ ಹೋಗ್ತೀನಿ ಅಂತ ಹೇಳಿದ ಯುವತಿ ನಾಪತ್ತೆ
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=Q70DkCb0LK5SRual











