ದಕ್ಷಿಣ ಕನ್ನಡ: Tulu Times | ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಾದ ಸುಳ್ಯ, ಪುತ್ತೂರು, ಕಡಬ ಸೇರಿದಂತೆ ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ನಿನ್ನೆ ಜೋರು ಮಳೆಯಾಗಿದೆ. ಇದರ ಜೊತೆಗೆ ಇಂದು ಕೂಡ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.ಸುಮಾರು ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು.
ಇದನ್ನೂ ಓದಿ: ಡ್ರಗ್ಸ್ ಜಾಲ ಖಂಡಿಸಿ ಮೈಸೂರಿನಲ್ಲಿ ಹೋರಾಟ: ವಿಜಯೇಂದ್ರ
ನಿನ್ನೆ ಸುರಿದ ಭಾರೀ ಮಳೆಗೆ ದಕ್ಷಿಣ ಕನ್ನಡ ಸೇರಿದಂತೆ ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಸಂಜೆ ಗುಡುಗು ಸಹಿತ ಮಳೆಯಾಗಿದೆ ಅಕಾಲಿಕ ಮಳೆಗೆ ಒಣಹಾಕಿದ್ದ ಅಡಿಕೆ, ಕಾಫಿ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಚಿಕ್ಕಮಗಳೂರಲ್ಲಿ ಈ ವರ್ಷದ ಮೊದಲ ಮಳೆಯಾಗಿದೆ. ಚಿಕ್ಕಮಗಳೂರು, ಕೊಪ್ಪ ಮೂಡಿಗೆರೆ, ಕಳಸ, ಶೃಂಗೇರಿ, NR ಪುರ ಭಾಗದಲ್ಲಿ ಮಳೆ ಜೋರಾಗಿದ್ದು, ದಿಢೀರ್ ಮಳೆಗೆ ಜನರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಮಕರ ಸಂಕ್ರಾಂತಿ 2026 : ಧಾರ್ಮಿಕ ನಂಬಿಕೆಯ ಜೊತೆ ಬೆಸೆದುಕೊಂಡ ಆಚರಣೆ
ಕಳೆದ ವಾರ ಭಾರೀ ಮಳೆಯಾಗಿತ್ತು. ಚಳಿ, ಶೀತ ಗಾಳಿಗೆ ಜಿಲ್ಲೆಯ ಜನರು ಹೈರಾಣಾಗಿರುವ ನಡುವೆ ಧಾರಾಕಾರವಾಗಿ ಮಳೆ ಸುರಿದು ಕಾಫಿ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ. ಜಿಲ್ಲೆಯಲ್ಲಿ ಒಣ ಹಾಕಿದ ಕಾಫಿ ಮಳೆಯಿಂದ ಸಂಪೂರ್ಣ ನೆನೆದು ಹಾಳಾಗಿದೆ. ಕೆಲವೆಡೆ ಬೆಳೆ ನೀರಲ್ಲಿ ಕೊಚ್ಚಿ ಹೋಗಿದೆ.
ಇದನ್ನೂ ಓದಿ: Children Story : ಸಿಂಹ ಮತ್ತು ಚಿಕ್ಕ ಇಲಿಯ ಕಥೆ !
ಬೆಳಗಾವಿಯಲ್ಲಿಯೂ ಧಾರಾಕಾರ ಮಳೆಯಾಗಿದೆ. ವರ್ಷದ ಮೊದಲ ಅಕಾಲಿಕ ಮಳೆಗೆ ಬೆಳಗಾವಿಯ ಜನರು ಪರದಾಟ ಮಾಡಬೇಕಾಯಿತು. ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಮತ್ತು ಮಿಂಚು ಸಹಿತ ಮಳೆ ಸುರಿದಿದೆ. ದ.ಕ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಹಾಗೂ ಸುಳ್ಯ ತಾಲೂಕಿನಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಿದೆ. ಒಣ ಹಾಕಿದ್ದ ಅಡಿಕೆ ಮಳೆಗೆ ಒದ್ದೆಯಾಗಿದ್ದು, ಕೃಷಿಕರು ಬವಣೆ ಪಡುವಂತಾಯಿತು.
ಇದನ್ನೂ ಓದಿ: ಬೆಂಗಳೂರು: ಮನರೇಗಾ ಉಳಿಸಿ ಆಂದೋಲನ ಆಯೋಜನೆ
Heavy rains lashed many places in Sullia and Kadaba taluks! Areca coffee washed away- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











