ಬ್ರೇಕಿಂಗ್ ನ್ಯೂಸ್
ಕ್ರೀಡೆ

ಬಿಗ್ ಬಾಸ್ ಫಿನಾಲೆ,ರಕ್ಷಿತಾ ಶೆಟ್ಟಿ,ದ್ರುವಂತ್ ತುಳುವರು ಮೆಚ್ಚುತ್ತಿರುವ ಸ್ಪರ್ಧಿ ಯಾರು?

ತುಳುಟೈಮ್ಸ್ | ಈ ಬಾರಿಯ ಬಿಗ್ ಬಾಸ್ ಫಿನಾಲೆಗೆ ಭರ್ಜರಿ ಸಿದ್ದತೆ ನಡೀತಿದೆ.ಬಿಗ್ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಯಾರು ಗೆಲ್ಲುತ್ತಾರೆ.ಅನ್ನೋ ಚರ್ಚೆಯ ಕಾವು ದಿನೇ ದಿನೇ ಜೋರಾಗ್ತಿದೆ.ನೆಚ್ಚಿನ ಸ್ಪರ್ಧಿಯ ಬಗ್ಗೆ ಅಭಿಮಾನಿಗಳು ತಮ್ಮದೇ ಯೋಚನೆಯ ಮೂಲಕ ಗೆಲ್ತಾರೆ ಅನ್ನೋ ಭರವಸೆ ಇಟ್ಟುಕೊಂಡಿದ್ದಾರೆ.ವೋಟಿಂಗ್ ಮೂಲಕ ಗಿಲ್ಲಿ ಗೆಲ್ಬೋದು,ಅಶ್ವಿನಿ ಗೆಲ್ಬೋದು.ರಕ್ಷಿತಾ ಗೆಲ್ಪೋದು ದ್ರುವಂತ್ ವಿನ್ ಆಗ್ತಾರೆ ಹೀಗಂತ ಬಿಗ್ ಬಾಸ್ ಅಭಿಮಾನಿಗಳು ಮಾತಾಡ್ಕೊಳ್ತಿದ್ದಾರೆ.ಮನೆಯಲ್ಲಿ ಬಿಗ್ ಬಾಸ್ ನಿಂದ ಮನರಂಜನೆ ಅನುಭವಿಸ್ತಿರೋರು ತಮ್ಮದೇ ಆದ ಲೆಕ್ಕಾಚಾರಗಳನ್ನು ವ್ಯಕ್ತಪಡಿಸ್ತಿದ್ದಾರೆ.
ತುಳುನಾಡಿನ ಇಬ್ಬರೂ ಸ್ಪರ್ಧಿಗಳು
ಈ ಬಾರಿ ತುಳುನಾಡಿನಿಂದ ಇಬ್ಬರೂ ಸ್ಪರ್ದಿಗಳು ಬಿಗ್ ಬಾಸ್ ಮನೆಯಲ್ಲಿದ್ದಾರೆ.ದ್ರುವಂತ್ ತಂದೆ ತಾಯಿಯ ಬಂಟ್ವಾಳ ಸಮೀಪದವ್ರು.ಇನ್ನೋರ್ವ ಲೇಡಿ ಪಟಾಕಿ ಅಂತಾನೆ ಫೇಮಸ್ಸಾಗ್ತಿರೋ ರಕ್ಷಿತಾ ಶೆಟ್ಟಿ ಮಂಗಳೂರಿನವ್ರು.ಇವ್ರಿಬ್ರೂ ಬಿಗ್ ಬಾಸ್ ನ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದಾರೆ.ಇವರಿಬ್ಬರು ತುಳುನಾಡಿವರಾಗಿದ್ದರು ಯಾರನ್ನು ಇಲ್ಲಿನ ಜನ ಇಷ್ಟಪಡುತ್ತಿದ್ದಾರೆ.ಅನ್ನೋದು ಕೂಡ ಇದೀಗ ಮೇಲ್ನೋಟಕ್ಕೆ ಗೊತ್ತಾಗೋದಿಕ್ಕೆ ಶುರುವಾಗಿದೆ.
ತುಳುವರಿಗೆ ಯಾರ ಮೇಲಿದೆ ಹೆಚ್ಚಿನ ಒಲವು
ರಕ್ಷಿತಾ ಶೆಟ್ಟಿ ವಿಭಿನ್ನ ವ್ಲಾಗ್ ಮೂಲಕ ಫೇಮಸ್ಸಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಾಕೆ ಈಕೆ ಬಿಗ್ ಬಾಸ್ ಮನೆಯಲ್ಲಿದ್ದಂತಹ ಸಂದರ್ಭದಲ್ಲಿ ತಮ್ಮ ಜೀವನಶೈಲಿಯನ್ನು ವಿಶೇಷವಾಗಿ ಬದಲಾಯಿಸಿಕೊಂಡಂತೆ ಕಂಡುಬಂದಿಲ್ಲ.ಸಾಮಾನ್ಯ ಹುಡುಗಿಯಂತೆ ತುಳುನಾಡಿಗರಿಗೆ ಅಪ್ತವಾಗಿದ್ದಾಳೆ.ಅದರಲ್ಲೂ ವಿಶೇಷವಾಗಿ ರಕ್ಷಿತಾ ಕಂಬಳ ಬಗ್ಗೆ ಮಾತಾಡಿದ್ದು ವೈರಲ್ ಆಗಿತ್ತು.ಆಗಾಗ್ಗೆ ತುಳುಭಾಷೆಯನ್ನು ಹೆಚ್ಚಾಗಿ ರಕ್ಷಿತಾ ಬಿಗ್ ಬಾಸ್ ಮನೆಯಲ್ಲಿ ಬಳಸಿದ್ದರು,ಇದರಿಂದಾಗಿ ತುಳುನಾಡಿಗರಿ ಈಕೆ ನಮ್ಮನೆ ಹುಡುಗಿ ಎಂಬ ಭಾವನೆ ಬರುವುದಕ್ಕೆ ಶುರುವಾಗಿದೆ.ರಕ್ಷಿತಾ ಮಾತಿನ ಶೈಲಿಗಾಗಿ ತುಳುನಾಡಿನ ದೊಡ್ಡ ವರ್ಗ ಬಿಗ್ ಬಾಸ್ ಆನ್ ಮಾಡಿ ಟಿ.ವಿ ನೋಡಿ ಮನರಂಜನೆ ಪಡೆದಿತ್ತು.ರಕ್ಷಿತಾಳನ್ನು ತುಳುನಾಡಿನ ಜನರು ಇವಳು ನಮ್ಮ ಮನೆ ಹುಡುಗಿ ಎಂದು ಪ್ರೀತಿಯಿಂದ ಸ್ವೀಕರಿಸಿದ್ದಾರೆ.
ಇನ್ನೊಂದೆಡೆ ದ್ರುವಂತ್ ತುಳುನಾಡಿನವರೆ.ಬೆಳೆದದ್ದು ಕೂಡ್ಲಿಪೇಟೆಯಲ್ಲಾದರೂ ಇವರ ಮೂಲ ತುಳುನಾಡು.ಆದರೆ ದ್ರುವಂತ್ ಆಟ ತುಳುನಾಡಿಗರನ್ನು ಹೆಚ್ಚಾಗಿ ಸೆಳೆದಿಲ್ಲ.ವಿಶೇಷವಾಗಿ ಆರಂಭದಲ್ಲಿ ರಕ್ಷಿತಾಳನ್ನು ದ್ರುವಂತ್ ಟಾರ್ಗೆಟ್ ಮಾಡಿ ಆಟ ಆಡುತ್ತಿದ್ದರು.ಭಾಷೆಯ ವಿಚಾರದಲ್ಲಿ ರಕ್ಷಿತಾಳನ್ನು ದ್ರುವಂತ್ ಕೊಂಕು ಆಡಿದ್ದನ್ನು ಜನ ಗಮನಿಸಿದ್ದಾರೆ.ತುಳು ಭಾಷೆಯನ್ನು ದ್ರುವಂತ್ ಎಲ್ಲೂ ಕೂಡ ಬಳಸಿಲ್ಲ.ದ್ರುವಂತ್ ತಾನು ತುಳುನಾಡಿನ ಪ್ರತಿನಿಧಿ ಎಂಬಂತೆ ಎಲ್ಲೂ ವರ್ತಿಸಿಲ್ಲ ಹೀಗಾಗಿ ತುಳುನಾಡಿನ ಮಂದಿಗೆ ದ್ರುವಂತ್ ರನ್ನೂ ಇವ ನಮ್ಮವ ಎಂಬ ಭಾವದಿಂದ ನೋಡುವುದಕ್ಕೆ ಸಾಧ್ಯವಾಗುತ್ತಿಲ್ಲ.ರಕ್ಷಿತಾ ತುಳುನಾಡಿಗರ ಮನಸ್ಸಿನಲ್ಲಿ ವಿಶೇಷವಾದ ಜಾಗ ಪಡೆದಂತೆ ದ್ರುವಂತ್ ತುಳುವರ ಭಾವನೆ ಮುಟ್ಟುವಲ್ಲಿ ಎಡವಿದ್ದಾರೆ.
ಇವೆಲ್ಲಾ ಲೆಕ್ಕಾಚಾರ ಏನೇ ಇದ್ದರೂ ಕೈಯಲ್ಲಿ ಮೊಬೈಲ್ ಇಟ್ಕೊಂಡು ಯಾರು ಯಾರಿಗೆ ಓಟು ಹಾಕ್ತಾರೆ ಅನ್ನೋದ್ರ ಮೇಲೆ ಗೆಲುವಿನ ಬಾಕ್ಸ್ ನಿಂತಿರುತ್ತದೆ.ಅದಕ್ಕಾಗಿ ಸ್ವಲ್ಪ ದಿನ ಕಾಯೋಣ.

Bigg Boss Finale, who is the contestant that Rakshita Shetty and Druvanth Tulu are admiring?-tulutimes

ಇದನ್ನೂ ಓದಿ:ಬೆಂಗಳೂರು: ಮನರೇಗಾ ಉಳಿಸಿ ಆಂದೋಲನ ಆಯೋಜನೆ

 

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 5

You cannot copy content of this page