ಬ್ರೇಕಿಂಗ್ ನ್ಯೂಸ್
ಕರ್ನಾಟಕಮಂಗಳೂರು

ಮಂಗಳೂರು: ಅಂಗಡಿಗೆ ಹಸು ಹಣ್ಣು ತಿನ್ನಲು ಬಂತು ಎಂದು ಚೂರಿ ತಾಗಿಸಿದ ಮಾಲಿಕ!

ಮಂಗಳೂರು: Tulu Times | ಅಂಗಡಿಗೆ ತರಕಾರಿ ತಿನ್ನಲು ಬಂದ ಹಸುವನ್ನು ಓಡಿಸುವ ಸಲುವಾಗಿ ಚೂರಿ ತಾಗಿಸಿದ ಘಟನೆ ಬಸ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಎಂಬಲ್ಲಿ ನಡೆದಿದೆ.

ಈ ವೇಳೆ ಹಸುವಿಗೆ ಚೂರಿ ತಾಗಿ ಗಾಯವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ದನದ ಮಾಲೀಕ ಹಾಗೂ ಅಂಗಡಿ ಮಾಲೀಕನ ವಿರುದ್ಧ ಸುಮೋಟೋ ಕೇಸ್ ದಾಖಲಿಸಲಾಗಿದೆ.

ಅಯ್ಯಪ್ಪ ಮಾಲಾಧಾರಿಗಳು ಸಾಮಗ್ರಿ ಖರೀದಿಸಲು ಬಂದ ವೇಳೆ, ಅಂಗಡಿಗೆ ದನವೂ ಬಂದಿತ್ತು. ಹಣ್ಣುಗಳನ್ನು ತಿನ್ನಲು ಪ್ರಯತ್ನಿಸುತ್ತಿತ್ತು. ತಕ್ಷಣ ಅಂಗಡಿ ಮಾಲಕ ತನ್ನ ಕೈಯಲ್ಲಿದ್ದ ತರಕಾರಿ ಕತ್ತರಿಸಲು ಬಳಸುವ ಚಾಕು ತೋರಿಸಿ ದನವನ್ನು ಓಡಿಸಲು ಯತ್ನಿಸಿದ. ಈ ವೇಳೆ ದನದ ಮುಖಕ್ಕೆ ಇರಿಯಲ್ಪಟ್ಟು ಗಾಯವಾಗಿದೆ. ಈ ಘಟನೆ ಎಡಪದವು ಬಳಿ ಬೀದಿ ಬದಿಯ ಅಂಗಡಿಯೊಂದರಲ್ಲಿ ನಡೆದಿದೆ.

ಈ ಘಟನೆಯನ್ನು ಮನಗಂಡ ಪೊಲೀಸ್ ಆಯುಕ್ತರು, ಸುಮೋಟೋ ಕೇಸ್ ದಾಖಲಿಸಿದ್ದಾರೆ. ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿ ನೋಡಿ ಕೊಳ್ಳುವುದು ಅದರ ಮಾಲೀಕರ ಕರ್ತವ್ಯವಾಗಿದೆ.  ಜಾನುವಾರುಗಳ ಮೇಲೆ ಕ್ರೌರ್ಯವನ್ನು ಎಸಗುವುದು  ದಂಡನಾರ್ಹ ಅಪರಾಧ. ಹಾಗಾಗಿ ದನಕ್ಕೆ ಆಹಾರ ನೀಡದೆ ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಓಡಾಡಲು ಬಿಟ್ಟಿದ್ದ ದನದ ಮಾಲಕ ಮತ್ತು ದನಕ್ಕೆ ಇರಿದ ಆರೋಪದ ಮೇಲೆ ಪ್ರಾಣಿಹಿಂಸೆ ತಡೆ ಕಾಯ್ದೆಯಡಿ ಬೀದಿಬದಿ ಅಂಗಡಿಯ ಮಾಲೀಕನ ವಿರುದ್ಧ ಬಗ್ಗೆ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.

ರಾಷ್ಟ್ರೀಯ ಯುವ ದಿನ – 2026: ಸ್ವಾಮಿ ವಿವೇಕಾನಂದರ ಚಿಂತನೆಗಳು ಮತ್ತು AI ಯುಗದ ಯುವಶಕ್ತಿಯ ಕುರಿತು ಸಂವಾದ

ಬೆಂಗಳೂರು: ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ರಾಷ್ಟ್ರೀಯ ಯುವ ದಿನ – 2026 ಕಾರ್ಯಕ್ರಮವನ್ನು ಜನವರಿ 12ರಂದು ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಆಯೋಜಿಸಲಾಯಿತು. ಸ್ವಾಮಿ ವಿವೇಕಾನಂದರ ಆದರ್ಶಗಳು ಯುವಜನತೆಗೆ ಶಾಶ್ವತ ಪ್ರೇರಣೆಯಾಗಿದ್ದು, ಇಂದಿನ ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ಸೃಜನಶೀಲತೆ, ವೃತ್ತಿಜೀವನ, ನಾಯಕತ್ವ ಮತ್ತು ವ್ಯಕ್ತಿತ್ವ ನಿರ್ಮಾಣದ ಕುರಿತು ಚರ್ಚೆ ಈ ಕಾರ್ಯಕ್ರಮದ ಕೇಂದ್ರಬಿಂದುವಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿಂತಕರು, ರಂಗಭೂಮಿ ಕಲಾವಿದರು, ನಟ, ನಿರ್ದೇಶಕ ಹಾಗೂ ಪತ್ರಕರ್ತರಾದ ಪ್ರಕಾಶ್ ಬೆಳವಾಡಿ ಪಾಲ್ಗೊಂಡು ಯುವಜನತೆಗೆ ಮಾರ್ಗದರ್ಶನ ನೀಡಿದರು. ಅವರು ಸಮಾಜಮುಖಿ ಚಿಂತನೆ, ಜವಾಬ್ದಾರಿಯುತ ನಾಗರಿಕತ್ವ ಮತ್ತು ವೈಯಕ್ತಿಕ ಮೌಲ್ಯಗಳ ಮಹತ್ವವನ್ನು ಒತ್ತಿಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಸಿ.ಎನ್. ಅಶ್ವಥನಾರಾಯಣ ಅವರು, ರಾಷ್ಟ್ರೀಯ ಯುವ ದಿನವು ಕೇವಲ ಆಚರಣೆಯ ದಿನವಲ್ಲದೆ ಯುವಶಕ್ತಿಯನ್ನು ಜಾಗೃತಗೊಳಿಸುವ ಮಹತ್ವದ ಸಂದರ್ಭವೆಂದು ಹೇಳಿದರು. ಯುವಕರು ತಮ್ಮ ಜೀವನದಲ್ಲಿ ಸ್ಪಷ್ಟ ಗುರಿಯನ್ನು ಹೊಂದಿ, ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ನ್ಯಾಯಸಮ್ಮತ ಮಾರ್ಗದಲ್ಲಿ ಸಾಧನೆ ಮಾಡಬೇಕು ಎಂದು ಅವರು ತಿಳಿಸಿದರು. ಅಕಾಡೆಮಿಕ್ ಸಾಧನೆಯ ಜೊತೆಗೆ ಆತ್ಮಾವಲೋಕನ, ವ್ಯಕ್ತಿತ್ವ ಅಭಿವೃದ್ಧಿ ಮತ್ತು ಸಮಾಜದ ಹೊಣೆಗಾರಿಕೆಯನ್ನು ಅರಿತುಕೊಳ್ಳುವುದು ಅಗತ್ಯವೆಂದು ಅವರು ಹೇಳಿದರು.

Mangaluru: Shop owner stabbed a cow after it came to his shop to eat fruit!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 157

You cannot copy content of this page