ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

ಗಾಂಧೀಜಿಯವರು ರಾಜಕಾರಣಿಯಲ್ಲ, ಅವರು ರಾಜಋಷಿಗಳು: ಬಿಜೆಪಿ ವಿರುದ್ಧ ರೊಚ್ಚಿಗೆದ್ದ ಉಗ್ರಪ್ಪ!

ಕರ್ನಾಟಕ: Tulu Times | ಕೆಪಿಸಿಸಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮ ವಿಭಾಗದ ವತಿಯಿಂದ ವಕ್ತಾರರ ಸಭೆ ನಡೆಸಲಾಯಿತು ಈ ಸಭೆಯಲ್ಲಿ ಪಕ್ಷದ ಕೆಳಕಂಡ ಪ್ರಮುಖರು ಮಾತನಾಡಿದರು.

ಗಾಂಧೀಜಿಯವರು ರಾಜಕಾರಣಿಯಲ್ಲ, ಅವರು ರಾಜಋಷಿಗಳು. ಆದರೆ ಇಂದು ಗೋಡ್ಸೆವಾದಿಗಳ ಬಲ ಹೆಚ್ಚುತ್ತಿದೆ ಎಂದು ಉಗ್ರಪ್ಪ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ವಕ್ತಾರರ ಆಯ್ಕೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಕ್ತಾರರು ಕೇವಲ ಪಕ್ಷದ ಬಗ್ಗೆ ತಿಳಿದ್ದಿದರೆ ಸಾಲದು, ವಿರೋಧಿಗಳ ಬಗ್ಗೆ ತಿಳಿದಿರಬೇಕು. ಅವರ ಸಿದ್ಧಾಂತ, ಅವರ ದೌರ್ಬಲ್ಯಗಳ ಬಗ್ಗೆ ತಿಳಿದಿರಬೇಕು.

ಇದನ್ನೂ ಓದಿ: ಸರಳ ಭಾರತೀಯ ಹಳ್ಳಿಯ ಅಡುಗೆ ಮತ್ತೆ ಟ್ರೆಂಡ್ ಆಗುತ್ತಿರುವುದೇಕೆ?

ಇಂದು ಬಿಜೆಪಿಯು ಗಾಂಧೀಜಿಯವರ ಹೆಸರನ್ನು ಅಳಿಸಿ ಹಾಕಿ ವಿಬಿಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿದೆ. ಇದರ ಬಗ್ಗೆ ಎಲ್ಲರೂ ದ್ವನಿ ಎತ್ತಬೇಕು. ಸಂವಿಧಾನದಲ್ಲಿರುವ ಆರ್ಟಿಕಲ್ 51A ಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಲೆ, ಗೌರವ ಕೊಡಬೇಕು ಎಂಬುದು ಉಲ್ಲೇಖಿಸಲಾಗಿದೆ. ಆದರೆ ಬಿಜೆಪಿಯವರು ಮಾತ್ರ ಇದನ್ನು ಕಡೆಗಣಿಸಿ ಸಂವಿಧಾನ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ಅಪಮಾನ ಮಾಡುತ್ತಿದ್ದಾರೆ.
ಇದರ ಬಗ್ಗೆ ಎಲ್ಲಾ ವಕ್ತಾರರು ನಿಜ ಸತ್ಯ ಬಯಲು ಮಾಡಬೇಕೆಂದರು.

ಉಡುಪು, ಪ್ರಸ್ತುತಿ, ವಿದ್ವತ್ ಈ ಮೂರು ವಿಷಯಗಳು ವಕ್ತಾರರಿಗೆ ಬಹು ಮುಖ್ಯ ಇದನ್ನು ಎಲ್ಲಾ ವಕ್ತಾರರು, ವಕ್ತಾರರು ಆಗಬೇಕೆನ್ನುವವರು ಅರ್ಥ ಮಾಡಿಕೊಳ್ಳಬೇಕು. ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಸುದರ್ಶನ್ ಅವರು ಮಾತನಾಡಿ ಒಂದು ಪಕ್ಷದ ವಕ್ತಾರರು, ಕಾರ್ಯಕರ್ತರು ನಿಜವಾದ ಶಕ್ತಿಗಳು. ಒಬ್ಬ ಒಳ್ಳೆಯ ವಕ್ತಾರರಾಗಬೇಕೆಂದಿದ್ದಾರೆ ಒಂದು ವಿಷಯದ ಬಗ್ಗೆ ತಿಳುವಳಿಕೆ ಅತಿ ಮುಖ್ಯ. ಅದಕ್ಕಾಗಿ ಸರಿಯಾದ ರಿಸರ್ಚ್ ಮಾಡಬೇಕು. ಅಲ್ಲದೆ ವಿರೋಧಿಗಳ ವೈಫಲ್ಯವನ್ನು ಮೊದಲ ನಾಗರಿಕರಿಗೆ ತಿಳಿ ಹೇಳಬೇಕು. ಕಾಂಗ್ರೆಸ್ ರಾಜ್ಯದಲ್ಲಿ ಮಾಡಿರುವ ಜನಪರ ಕೆಲಸಗಳು, ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು ಎಂದರು.

ಇದನ್ನೂ ಓದಿ: ರಾಷ್ಟ್ರೀಯ ಯುವ ದಿನ – 2026: ವಿವೇಕಾನಂದರ ಚಿಂತನೆಗಳು ಮತ್ತು AI ಯುಗದ ಕುರಿತು ಸಂವಾದ

ಕಾಂಗ್ರೆಸ್ ವಕ್ತಾರರು ಡೆಲ್ಟಾ ಫೋರ್ಸ್ ನಂತೆ ಕೆಲಸ ಮಾಡಬೇಕು. ಇಂದಿನ ಕಾಲದಲ್ಲಿ ಬಿಜೆಪಿಯವರು ಕೇವಲ AI ಮೂಲಕ ಜನರನ್ನು ದಿಕ್ಕುತಪ್ಪಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ. ನಾವು ಈ ತಂತ್ರಜ್ಞಾನವನ್ನು ನಮ್ಮ ಕೆಲಸಗಳ ಬಗ್ಗೆ ಪ್ರಚಾರ ಮಾಡಲು ಬಳಸಿಕೊಳ್ಳಬೇಕು. ಒಳ್ಳೆ ವಕ್ತಾರರಗಲು ವಿದ್ಯಾರ್ಹತೆ ಗಿಂತ ಬದ್ಧತೆ ಮುಖ್ಯ ಎಂದು ದೀಪಕ್ ತಿಮ್ಮಯ್ಯ ಅವರು ಹೇಳಿದರು. ಕೆಪಿಸಿಸಿಯ ಮಾಧ್ಯಮದ ವಿಭಾಗದ ಅಧ್ಯಕ್ಷರು, ವಿಧಾನಪರಿಷತ್ತಿನ ಸದಸ್ಯರಾದ ರಮೇಶ್ ಬಾಬು ಅವರು ಮಾತನಾಡಿ ವಕ್ತಾರರ ಆಯ್ಕೆ ಯಾವ ರೀತಿ ನಡೆಯಲಿದೆ ಎಂದು ವಿವರಿಸಿದರು. ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ದ್ವಾರಕಾನಾಥ್, ವಿಜಯ ಮುಳಗುಂದ್, ವಕ್ತಾರರಾದ ದರ್ಶನ್ ಅವರು ಉಪಸ್ಥಿತರಿದ್ದರು.

ಇದನ್ನೂ ಓದಿ: ವಿವಿಧ ಬೇಡಿಕೆ ಮುಂದಿಟ್ಟು ರಾಜ್ಯಪಾಲರಿಗೆ ಬಿಜೆಪಿ ಮನವಿ

Gandhiji is not a politician, he is a royal sage: Ugrappa furious against BJP!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page