ಕಡಬ: Tulu Times | ಕಡಬ ತಾಲೂಕಿನ ಕುಟ್ರುಪ್ಪಾಡಿಯಲ್ಲಿ ಕೆಲವು ತಿಂಗಳ ಹಿಂದೆ ರಿಜಿಸ್ಟರ್ ಮದುವೆಯಾಗಿ ಗಂಡನ ಮನೆಗೆ ಹೋದ ಯುವತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಹುಡುಗಿ ಶಿಲ್ಪಾ (28 ವರ್ಷ) ಕುಟ್ರುಪ್ಪಾಡಿ ಗ್ರಾಮದ ನಿವಾಸಿ ಶಿವಪ್ರಸಾದ್ ಎಂಬವರ ಪುತ್ರಿ. ಈಕೆ ಕೆಲವು ತಿಂಗಳ ಹಿಂದೆ ಮನೋಜ್ ಎಂಬವರನ್ನು ರಿಜಿಸ್ಟರ್ ಮದುವೆಯಾಗಿದ್ದಳು. ಮದುವೆಯಾದ ಬಳಿಕ ಇಬ್ಬರೂ ದಂಪತಿಗಳು ರಾಮಕುಂಜದಲ್ಲಿ ವಾಸ್ತವ್ಯ ಹೂಡಿದ್ದರು.
ಏನಿದು ಪ್ರಕರಣ ಅನ್ನೋದನ್ನು ನೋಡೋದಾದ್ರೆ, ಜನವರಿ 8ರಂದು ಸಂಜೆ ಶಿಲ್ಪಾ ಅವರು ತಮ್ಮ ತಂದೆಯ ಮನೆಯಲ್ಲಿದ್ದಾಗ ವಿಷ ಸೇವಿಸಿದ್ದಾರೆ. ಶಿಲ್ಪಾ ಅವರು ರಾಮಕುಂಜದಿಂದ ಕಡಬಕ್ಕೆ ಕೆಲಸಕ್ಕೆಂದು ಹೋಗಿ ಬರುತ್ತಿದ್ದರು. ಇನ್ನು ಇವರನ್ನು ತಕ್ಷಣವೇ ಮಂಗಳೂರಿನ ವೆನ್ಸಾಕ್ ಹಾಗೂ ನಂತರ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಜನವರಿ 9ರಂದು ಮಧ್ಯಾಹ್ನ ಶಿಲ್ಪಾ ಕೊನೆಯುಸಿರೆಳೆದಿದ್ದಾರೆ. ಇನ್ನು ಮಗಳ ಸಾವಿನ ಬಗ್ಗೆ ತಂದೆ ಶಿವಪ್ರಸಾದ್ ನೀಡಿದ ದೂರಿನ ಅನ್ವಯ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಲ್ಪಾ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಅನ್ನೋದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
34 ವರ್ಷದ ಮಹಿಳಾ ಟೆಕ್ಕಿ ಕೊಲೆ ಟ್ವಿಸ್ಟ್.ನೆರೆಮನೆಯ ಯುವಕ ಮಾಡಿದ್ದೇನು ಗೊತ್ತಾ.?
ಕರ್ನಾಟಕ: ಇತ್ತೀಚೆಗೆ ಬೆಂಗಳೂರಿನಲ್ಲಿ 34 ವರ್ಷದ ಮಹಿಳಾ ಟೆಕ್ಕಿ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ನೆರೆಮನೆಯ ಯುವಕನೇ ಶರ್ಮಿಳಾ ಸಾವಿಗೆ ಕಾರಣ ಎನ್ನುವುದು ತಿಳಿದುಬಂದಿದೆ.
ಆ ರಾತ್ರಿ ಶರ್ಮಿಳಾ ರೂಂನಲ್ಲಿ ಆಗಿದ್ದೇನು..?
ಮೂಲತಃ ಮಂಗಳೂರಿನ ಹುಡುಗಿ ಶರ್ಮಿಳಾ ಕೊಲೆ ಕೇಸ್ ಹೊಸ ತಿರುವು ಪಡೆದುಕೊಂಡಿದೆ. ಹೌದು, ಪೊಲೀಸರ ನಿರಂತರ ತನಿಖೆಯಿಂದ ರೋಚಕ ವಿಚಾರ ತಿಳಿದುಬಂದಿದೆ. ರಾಮಮೂರ್ತಿ ನಗರದಲ್ಲಿ ಮಹಿಳಾ ಟೆಕ್ಕಿ ಶರ್ಮಿಳಾ ಸಾವಿಗೆ ನೆರೆ ಮನೆಯ ಪಿಯುಸಿ ವಿದ್ಯಾರ್ಥಿ ಆಕೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಹಲ್ಲೆ ನಡೆಸಿ ಬಳಿಕ ಬೆಂಕಿ ಹಚ್ಚಿ ಪರಾರಿಯಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ. ಕೊಡಗು ಜಿಲ್ಲೆ ವಿರಾಜಪೇಟೆಯ ಕರ್ನಾಲ್ ಕುರೈ(18) ಎಂಬ ಯುವಕ ಈ ಕೃತ್ಯ ಎಸಗಿದ್ದಾನೆ ಅನ್ನೋದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.ಈತ ಶರ್ಮಿಳಾ ಮೇಲೆ ಹಲ್ಲೆ ನಡೆಸಿ, ಸಾಕ್ಷ್ಯನಾಶ ಪಡಿಸುವ ಉದ್ದೇಶದಿಂದ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ
ಗೆಳತಿ ಇಲ್ಲದ ಸಮಯಲ್ಲಿ ಕಿಟಕಿ ಪ್ರೈಡ್ ಮೂಲಕ ನುಗ್ಗಿದ್ದ!
ಇನ್ನು ಮೃತ ಶರ್ಮಿಳಾ ಮಂಗಳೂರಿನ ಕಾವೂರು ಮೂಲದವರಾಗಿದ್ದು, ಸುಬ್ರಹ್ಮಣ್ಯಲೇಔಟ್ನ ಅಪಾರ್ಟ್ಮೆಂಟ್ನಲ್ಲಿ ಸ್ನೇಹಿತೆ ಜತೆ ವಾಸವಾಗಿದ್ದರು. ಸಮೀಪದ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ತನ್ನ ಗೆಳತಿಯೂ ಇಲ್ಲದ ಕಾರಣ, ಮನೆಯಲ್ಲಿ ಒಬ್ಬರೇ ಇದ್ದರು. ಆರೋಪಿ ಆಕೆಯನ್ನು ಮಾತನಾಡಿಸಲು ಕಿಟಕಿ ಮೂಲಕ ಬಂದಿದ್ದ ಗೆಳತಿ ಇಲ್ಲದ ಕಾರಣ, ಈ ಆರೋಪಿ ಸೈಡ್ ಕಿಟಕಿ ಮೂಲಕ ಮನೆ ಪ್ರವೇಶಿಸಿ ಶರ್ಮಿಳಾರನ್ನು ತಬ್ಬಿಕೊಂಡಿದ್ದಾನೆ. ಇದನ್ನು ಶರ್ಮಿಳಾ ದೂರ ತಲ್ಲಿದ್ದಾಳೆ. ದೈಹಿಕವಾಗಿ ತನಗೆ ಸಹಕಾರ ನೀಡುವಂತೆ ಪೀಡಿಸಿದ್ದ ಆಗ ಶರ್ಮಿಳಾ ಮನೆಯಿಂದ ಹೊರಗಡೆ ಹೋಗುವಂತೆ ಎಚ್ಚರಿಕೆ ನೀಡಿದ್ದರು. ಇದರಿಂದ ಕೋಪಗೊಂಡ ಯುವಕ ಆಕೆಯ ಮೂಗು ಮತ್ತು ಬಾಯಿ ಮುಚ್ಚಿದ್ದ ಆಕೆಯ ಮೂಗಿನಿಂದ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದರು. ನಂತರ ಗಾಬರಿಗೊಂಡ ಆರೋಪಿ, ರಕ್ತವಾಗಿದ್ದ ಬಟ್ಟೆ ಹಾಗೂ ಇತರೆ ಬಟ್ಟೆಗಳನ್ನು ಹಾಸಿಗೆ ಮೇಲೆ ಹಾಕಿ ಬೆಂಕಿ ಹಚ್ಚಿ, ಸೈಡ್ ಕಿಟಕಿ ಮೂಲಕ ಪರಾರಿಯಾಗಿದ್ದಎಂದು ತನಿಖೆಯಲ್ಲಿ ಗೊತ್ತಾಗಿದೆ. ತನಿಖೆ ವೇಳೆ ನನಗೆ ಆಕೆಯ ಮೇಲೆ ಪ್ರೇಮಾಂಕುರವಾಗಿತ್ತು. ಆಕೆ ನಿರಾಕರಿಸಿದಳು ಎಂದು ಹೇಳಿದ್ದಾನೆ.
Kadaba: A girl who had a registered marriage committed suicide by consuming poison!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











