ಮಕ್ಕಳ ಕಥೆ : Tulu Times | ಒಂದು ದಿನ, ಚಿಕ್ಕ ಇಲಿ ಕಾಡಿನಲ್ಲಿ ಆಟ ಆಡುತ್ತಿತ್ತು. ಹೀಗೆ ಆಡುತ್ತಿರುವಾಗ ಅದಕ್ಕೆ ತಿಳಿಯದೇ, ನಿದ್ರಿಸುತ್ತಿದ್ದ ಸಿಂಹದ ಮೇಲೆ ಓಡಿತು. ತಕ್ಷಣ ಸಿಂಹ ಎಚ್ಚರಗೊಂಡಿತು ಮತ್ತು ಇಲಿಯನ್ನು ಹಿಡಿಯಿತು. ಇಲಿ ಕೂಗುತ್ತಾ “ದಯವಿಟ್ಟು ನನ್ನನ್ನು ಬಿಡಿ, ಗೊತ್ತಿಲ್ಲದೆ ನಿಮ್ಮ ಮೇಲೆ ಹೋಗಿಬಿಟ್ಟೆ. ನೀವೀಗ ನನ್ನನ್ನು ಬಿಟ್ಟರೆ ಒಂದು ದಿನ ನಾನು ನಿಮಗೆ ಸಹಾಯ ಮಾಡುತ್ತೇನೆ” ಎಂದು. ಆಗ ಸಿಂಹ ನಗುತ್ತಾ “ನೀನು ಇಷ್ಟು ಚಿಕ್ಕವನು! ನೀನು ನನಗೆ ಹೇಗೆ ಸಹಾಯ ಮಾಡುತ್ತೀಯ?” ಎಂದಿತು. ಆದರೂ ಅದು ಇಷ್ಟು ಚಿಕ್ಕ ಪ್ರಾಣಿಯನ್ನು ತಿಂದರೆ ಹೊಟ್ಟೆ ಹಸಿವು ಕೂಡಾ ಕಡಿಮೆ ಆಗೋದಿಲ್ಲ ಅಂತ ತಿಳಿದು ಇಲಿಯನ್ನು ಬಿಟ್ಟುಬಿಟ್ಟಿತು.
ಕೆಲವು ದಿನಗಳ ನಂತರ, ಕಾಡಿನಲ್ಲಿ ಸಿಂಹ ಬೇಟೆಗಾರರ ಬಲೆಗೆ ಸಿಕ್ಕಿಬಿಡುತ್ತದೆ. ಅದು ಜೋರಾಗಿ ಗರ್ಜಿಸಿತು. ಏನು ಮಾಡಿದರೂ ಹೊರಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಆಗ ತಕ್ಷಣ ಎಲ್ಲಿಂದಲೋ ಬಂದ ಚಿಕ್ಕ ಇಲಿಯು ಓಡಿ ಬಂದು ತನ್ನ ತೀಕ್ಷ್ಣ ಹಲ್ಲಿನಿಂದ ಬಲೆಯನ್ನು ಕಚ್ಚಿತು. ಸ್ವಲ್ಪ ಸಮಯದಲ್ಲಿ ಸಿಂಹ ಮುಕ್ತವಾಯಿತು. ಸಿಂಹ ಹೇಳಿತು, “ಧನ್ಯವಾದಗಳು ನನ್ನ ಚಿಕ್ಕ ಸ್ನೇಹಿತನೇ. ನೀನು ನನ್ನ ಜೀವ ಉಳಿಸಿದೆ” ಎಂದು ಆಗ ಇಲಿ ನಗುತ್ತಾ ಮುಂದೆ ಹೋಗುತ್ತದೆ.
ಕಥೆಯ ಪಾಠ:
ದಯೆ ಎಂದಿಗೂ ವ್ಯರ್ಥವಾಗುವುದಿಲ್ಲ. ಚಿಕ್ಕವರು ಕೂಡ ದೊಡ್ಡ ಸಹಾಯ ಮಾಡಬಹುದು.
ಹೌದು… ಯಾರಾದರೂ ದುಃಖದಲ್ಲಿದ್ದಾಗ ಅವರಿಗೆ ಸಹಾಯ ಮಾಡುವುದು, ನೋವಿನಲ್ಲಿ ಇದ್ದವರಿಗೆ ಸಾಂತ್ವನ ನೀಡುವುದು, ಹಸಿದವರಿಗೆ ಆಹಾರ ಕೊಡುವುದು, ಅಳುತ್ತಿರುವವರಿಗೆ ಒಂದು ನಗು ಕೊಡುವುದು. ಈ ಎಲ್ಲವೂ ಚಿಕ್ಕ ಕೆಲಸಗಳಂತೆ ಕಾಣಬಹುದು. ಆದರೆ ಇದರ ಪರಿಣಾಮ ಬಹಳ ದೊಡ್ಡದು. ಚಿಕ್ಕ ಮಕ್ಕಳು ಆಗಿರಲಿ, ದುರ್ಬಲರು ಆಗಿರಲಿ…ಅವರಿಗೆ ಶಕ್ತಿ ಕಡಿಮೆ ಇರಬಹುದು. ಆದರೆ, ಅವರ ಮನಸ್ಸಿನಲ್ಲಿರುವ ದಯೆ ದೊಡ್ಡದಾಗಿರುತ್ತದೆ. ಒಂದು ಚಿಕ್ಕ ಸಹಾಯ ಯಾರಿಗಾದರೂ ಹೊಸ ಆಶೆಯನ್ನು ಕೊಡಬಹುದು. ಒಂದು ಒಳ್ಳೆಯ ಮಾತು ಯಾರಾದರೂ ಮನಸ್ಸನ್ನು ಹಗುರ ಮಾಡಬಹುದು. ಒಂದು ನಗು ಒಂದು ದಿನವನ್ನೇ ಚೆನ್ನಾಗಿಸಬಹುದು.
Children Story: The story of the lion and the little mouse! – ತುಳು ಟೈಮ್ಸ್
ಇದನ್ನೂ ಓದಿ :ತೆಲಂಗಾಣದಲ್ಲಿ 300 ಬೀದಿ ನಾಯಿಗಳ ಸಾಮೂಹಿಕ ಹತ್ಯೆ : ಮಾನವೀಯತೆ ಮರೆತರೇ ?
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=YzNNNOhaMB2P0rSo











