Belthanady;ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕಾರಿಂಜ ಎಂಬಲ್ಲಿ ದೇವಸ್ಥಾನವೊಂದು ನಿರ್ಮಾಣಗೊಳ್ಳುತ್ತಿದ್ದು.ಜೀರ್ಣೋದ್ದಾರದ ಕೆಲಸಗಳು ನಡೆಯುತ್ತಿದೆ.
ಶ್ರಿ ವನ ಶಾಸ್ತಾರ ವೀರಭದ್ರ ದೇವಸ್ಥಾನದ ಸಾನಿಧ್ಯ ಪತ್ತೆಯಾದ ಹಿನ್ನೆಲೆಯಲ್ಲಿ,ದೇವಸ್ಥಾನ ನಿರ್ಮಾಣಕ್ಕೆ ಸ್ಥಳೀಯರು ಮುಂದಾಗಿದ್ದಾರೆ.ದೇವಸ್ಥಾನ ನಿರ್ಮಾಣದ ಕೆಲಸ ಕಾರ್ಯಗಳು ಬಿಡುವಿಲ್ಲದೆ ನಡೆಯುತ್ತಿದೆ.
ಹಿಂದೆ ಇಲ್ಲಿ ವೀರಭದ್ರ ದೈವಸ್ಥಾನವಿತ್ತು.ನಂತರದಲ್ಲಿ ಪ್ರಶ್ನಾಚಿಂತನೆಯಲ್ಲಿ ಶ್ರೀ ವನ ಶಾಸ್ತಾರ ವೀರಭದ್ರ ದೇವರ ಸಾನಿಧ್ಯವಿರುವುದು ಪತ್ತೆಯಾಯಿತು,ಜ್ಯೋತಿಷಿಗಳ ಮಾರ್ಗದರ್ಶನದಂತೆ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು.ಕೆಲಸ ಕಾರ್ಯಗಳು ನಡೆಯುತ್ತಿದೆ.ಸಂಪೂರ್ಣ ಕಲ್ಲಿನಿಂದ ಈ ದೇವಸ್ಥಾನವನ್ನು ನಿರ್ಮಿಸಲಾಗ್ತಿದೆ.
ಉರುವಾಲು ಗ್ರಾಮದ ಕಾರಿಂಜದ ಎತ್ತರದ ಪ್ರದೇಶದಲ್ಲಿ ಈ ದೇವಸ್ಥಾನ ನಿರ್ಮಾಣವಾಗುತ್ತಿದೆ.ನುರಿತ ಕಾರ್ಮಿಕರು ವಿಶೇಷ ಶೈಲಿಯ ದೇವಸ್ಥಾನದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ದೇವಸ್ಥಾನದ ಜೀರ್ಣೊದ್ದಾರದ ಕೆಲಸ ಕಾರ್ಯಗಳು ಪ್ರಗತಿಯಲ್ಲಿ ಇದ್ದು ಮುಂದಿನ ಕೆಲಸ ಕಾರ್ಯಗಳ ಬಗ್ಗೆ ವಿಮರ್ಶೆ ಮಾಡಲು ಕೊರಿಂಜ ಶ್ರೀ ಪಂಚ ಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಯೋಗೀಶ್ ಪೂಜಾರಿ ಕಡ್ತಿಲ ರವರ ನೇತೃತ್ವದಲ್ಲಿ ಸ್ಥಳೀಯ ಮುಖ್ಯಸ್ಥರ ಸಭೆಯನ್ನು ಇತ್ತೀಚೆಗೆ ಕರೆಯಲಾಗಿತ್ತು.
ಜೀರ್ಣೋದ್ದಾರದ ಕೆಲಸ ಕಾರ್ಯಗಳನ್ನು ಆದಷ್ಟು ಬೇಗ ಮುಗಿಸುವುದು ಮತ್ತು ಕೆಲಸ ಕಾರ್ಯಗಳಿಗೆ ಅನೂಕೂಲವಾಗಲುಊರವರನ್ನು ಮತ್ತು ಸ್ಥಳೀಯರನ್ನು ಸೇರಿಸಿ ಸಮಿತಿ ರಚಿಸುವ ಕುರಿತಂತೆ ಚರ್ಚಿಸಲಾಯಿತು.ಶ್ರೀ ವನ ಶಾಸ್ತಾರ ವೀರಭದ್ರ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಟ್ರಸ್ಟ್ ರಚಿಸಲಾಯಿತು
ಶ್ರೀ ವನ ಶಾಸ್ತಾರ ವೀರಭದ್ರ ದೇವಸ್ಥಾನ ಟ್ರಸ್ಟ್ ನಲ್ಲಿ ಅಧ್ಯಕ್ಷರು;ಶ್ರೀ ಕೊರಗಪ್ಪ ಪೂಜಾರಿ. ಕಾರಿಂಜ. ಉಪಾದ್ಯಕ್ಷರು:ಶ್ರೀ ದಾಸಪ್ಪ ಗೌಡ ಕೊಡಿಯಡ್ಕ.ಕಾರ್ಯದರ್ಶಿ:ಶ್ರೀ ಧರ್ನಪ್ಪ ನಾಯ್ಕ. ಆನಡ್ಕ ಕೋಶಾಧಿಕಾರಿ,ಶ್ರೀ ವಿಜಯ ಕುಮಾರ್. ಕಲ್ಲಳಿಕೆ ಆಯ್ಕೆಯಾಗಿದ್ದಾರೆ.
ಟ್ರಸ್ಟ್ ನ ಸದಸ್ಯರಾಗಿ ಶ್ರೀ ಲಕ್ಷ್ಮಿ ನಾರಾಯಣ ರಾವ್ ಅಲೈಮಾರು,ಶ್ರೀ ಗೋಪಾಲಕೃಷ್ಣ ಗೌಡ ನೀನಿ ಮನೆ ಶ್ರೀ ಪ್ರಸಾದ್ ಶೆಟ್ಟಿ,ಕೆರ್ಪುಣಿ ಮನೆ,ಶ್ರೀ ಓಬಯ್ಯ ಪೂಜಾರಿ. ಕಾರಿಂಜ ಮನೆ, ಶ್ರೀಮತಿ ಉಮಾವತಿ.ಕಾರಿಂಜ ಮನೆ ಆಯ್ಕೆಯಾಗಿದ್ದಾರೆ.
ಪೆಬ್ರವರಿ ತಿಂಗಳಿನಲ್ಲಿ ಬ್ರಹ್ಮಕಲಶೋತ್ಸವ ನೆರವೇರಿಸುವ ಸಂಬಂಧ ದೇವಸ್ಥಾನ ನಿರ್ಮಾಣದ ಕೆಲಸ ಕಾರ್ಯಗಳು ವೇಗವಾಗಿ ಸಾಗುತ್ತಿದೆ.

ಇದನ್ನೂ ಓದಿ:Shabarimala ಚಿನ್ನ ಕಳ್ಳತನ ಪ್ರಕರಣ: ಬೆಂಗಳೂರು ಮೂಲದ ಉದ್ಯಮಿ ಬಂಧನ
…………………………………………………………………………………………………………………….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











