ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪುನೀತ್ ರಾಜ್‌ಕುಮಾರ್ ಅವರ ಜೀವನವನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಸಿದ್ಧತೆ

ಪಠ್ಯಪುಸ್ತಕ : Tulu Times| ಕನ್ನಡದ ಜನಪ್ರಿಯ ನಟ ಪುನೀತ್ ರಾಜ್‌ಕುಮಾರ್ ಅವರ ಜೀವನ ಮತ್ತು ಮೌಲ್ಯಗಳು ಇದೀಗ ಹೊಸ ರೀತಿಯಲ್ಲಿ ಮಕ್ಕಳ ಮನಸ್ಸುಗಳಿಗೆ ತಲುಪಲಿವೆ. ಬಾಲನಟನಾಗಿ ಸಿನಿ ಜೀವನ ಆರಂಭಿಸಿ, ಸಾಮಾಜಿಕ ಜವಾಬ್ದಾರಿ ಹೊಂದಿದ್ದು, ನಟನಾಗುವವರೆಗಿನ ಅವರ ಪ್ರೇರಣಾದಾಯಕ ಪಯಣ ಕರ್ನಾಟಕದ ಶಾಲಾ ಪಠ್ಯಪುಸ್ತಕಗಳಲ್ಲಿ ಸ್ಥಾನ ಪಡೆಯಲಿದೆ.

ಕರ್ನಾಟಕ ಪಠ್ಯಪುಸ್ತಕ ಸಂಘವು ಈ ಪ್ರಸ್ತಾವನೆಯನ್ನು ಪಠ್ಯಪುಸ್ತಕಗಳ ತಯಾರಿ ಅಥವಾ ಪರಿಷ್ಕರಣೆ ಸಂದರ್ಭದಲ್ಲಿ ಸಂಘದ ಅಧ್ಯಕ್ಷರ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದೆ. ಮುಂದಿನ ಆವೃತ್ತಿಗಳಲ್ಲಿ ಪುನೀತ್ ಅವರ ಜೀವನ ಮತ್ತು ಸಾಧನೆಗಳ ಕುರಿತು ಪಾಠ ಸೇರಿಸುವ ಮೂಲಕ, ಅವರು ಕೇವಲ ಸಿನಿ ತಾರೆಯಲ್ಲದೆ ತರಗತಿಯಲ್ಲಿ ಮಕ್ಕಳಿಗೆ ಆದರ್ಶ ವ್ಯಕ್ತಿಯಾಗಲಿದ್ದಾರೆ.

ಪಠ್ಯಕ್ರಮದಲ್ಲಿ ನೆನಪಿಸಿಕೊಳ್ಳುವುದು ವಿಶೇಷ ಗೌರವ ;

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸಂತಸ ಮತ್ತು ಕೃತಜ್ಞತೆ ವ್ಯಕ್ತಪಡಿಸಿರುತ್ತಾರೆ. “ನನಗೆ ತುಂಬಾ ಸಂತೋಷವಾಗುತ್ತಿದೆ. ಸಿನಿಮಾ ಕ್ಷೇತ್ರದಲ್ಲಿ ಎಲ್ಲರಿಗೂ ಇಂತಹ ಗೌರವ ಸಿಗುವುದಿಲ್ಲ,” ಎಂದು ಅವರು ಹೇಳಿದರು. ಈ ವಿಷಯವನ್ನು ಮಕ್ಕಳಿಗೆ ತಿಳಿಸಿದ ಕ್ಷಣ ಭಾವನಾತ್ಮಕವಾಗಿತ್ತು ಎಂದು ಅವರು ಹೇಳಿದರು. “ನಮ್ಮ ಮಕ್ಕಳಿಗೆ ಇದು ಅವರ ತಂದೆಗೆ ಸಿಕ್ಕಿರುವ ದೊಡ್ಡ ಗೌರವ ಎಂಬುದು ಅರ್ಥವಾಗಿದೆ. ಸಿನಿಮಾರಂಗದಲ್ಲಿ ಅನೇಕ ಜನರಿದ್ದಾರೆ, ಆದರೆ ಪಠ್ಯಕ್ರಮದಲ್ಲಿ ನೆನಪಿಸಿಕೊಳ್ಳುವುದು ವಿಶೇಷ ಗೌರವ,” ಎಂದು ಅಶ್ವಿನಿ ಹೇಳಿದರು.

ಸಿನಿಮಾ ಜೀವನದ ಜೊತೆಗೆ ಸಮಾಜಸೇವೆಯ ಪಯಣವೂ ಮಕ್ಕಳಿಗೆ ತಿಳಿಯಬೇಕಾಗಿದೆ ;

ಪುನೀತ್ ರಾಜ್‌ಕುಮಾರ್ ಅವರ ಜೀವನವನ್ನು ಪಠ್ಯಪುಸ್ತಕದಲ್ಲಿ ಸೇರಿಸುವ ಪ್ರಸ್ತಾವನೆ 2022ರಲ್ಲಿ ಟಿ. ನರಸೀಪುರದ ಒಬ್ಬ ಅಭಿಮಾನಿಯು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಂತರ ಆರಂಭವಾಯಿತು. ಈಗ ಕರ್ನಾಟಕ ಪಠ್ಯಪುಸ್ತಕ ಸಂಘವು ಮುಂದಿನ ಪರಿಷ್ಕರಣೆ ವೇಳೆ ಇದನ್ನು ಪರಿಗಣಿಸುವುದಾಗಿ ದೃಢಪಡಿಸಿದೆ. ಇದೀಗ ಡಾ. ರಾಜ್‌ಕುಮಾರ್ ಅವರ ಜೀವನ ಮತ್ತು ಕೊಡುಗೆಗಳು 6ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ಸೇರಿವೆ. ಅಭಿಮಾನಿಗಳ ಅಭಿಪ್ರಾಯದಲ್ಲಿ, ಪುನೀತ್ ಅವರ ಸಿನಿಮಾ ಜೀವನದ ಜೊತೆಗೆ ಸಮಾಜಸೇವೆಯ ಪಯಣವೂ ಮಕ್ಕಳಿಗೆ ತಿಳಿಯಬೇಕಾಗಿದೆ. “ಮಕ್ಕಳು ಅವರು ನಟನಾಗಿದ್ದಷ್ಟೇ ಅಲ್ಲ, ಎಂತಹ ಉತ್ತಮ ವ್ಯಕ್ತಿಯಾಗಿದ್ದರು ಎಂಬುದನ್ನೂ ತಿಳಿಯಬೇಕು,” ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅಶ್ವಿನಿಯವರ ಮಾತಿನಲ್ಲಿ, ಪಠ್ಯಪುಸ್ತಕದಲ್ಲಿ ಅವರ ಕಥೆ ಸೇರಿಸುವುದು ಪುನೀತ್ ಅವರ ಮೌಲ್ಯಗಳು ಮತ್ತು ಸಮಾಜಪರ ಚಿಂತನೆ ಮುಂದಿನ ಪೀಳಿಗೆಗೂ ಜೀವಂತವಾಗಿರಲು ಸಹಾಯ ಮಾಡುತ್ತದೆ ಎಂಬುವುದಾಗಿದೆ.

Preparations to include Puneeth Rajkumar’s life in textbook – ತುಳು ಟೈಮ್ಸ್

ಇದನ್ನೂ ಓದಿ :ಸಿಂಗಾಪುರದಲ್ಲಿ ವಲಸೆ ಕಾರ್ಮಿಕರಿಗಾಗಿ ಪೊಂಗಲ್ ಹಬ್ಬ ಆಚರಣೆ : ಭಾರತೀಯ ಹೈ ಕಮಿಷನ್ ಆಯೋಜನೆ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SDL5CAMpIQ0?si=YzNNNOhaMB2P0rSo

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page