ಬ್ರೇಕಿಂಗ್ ನ್ಯೂಸ್
ಕರ್ನಾಟಕಸುಳ್ಯ

ಸುಳ್ಯದಲ್ಲಿ ವಾರ್ಷಿಕ ಜಾತ್ರೋತ್ಸವ..ಅದ್ದೂರಿ ಬ್ರಹ್ಮರಥೋತ್ಸವ !

ಸುಳ್ಯ: Tulu Times | ಚೆನ್ನಕೇಶವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ನಿನ್ನೆ ಅದ್ದೂರಿ ಬ್ರಹ್ಮರಥೋತ್ಸವ ನಡೆಯಿತು. ಭಕ್ತಿ ಸಂಭ್ರಮದಲ್ಲಿ ನಡೆದ ವೈಭವದ ರಥೋತ್ಸವವನ್ನು ನೆರೆದ ಭಕ್ತ ಸಮೂಹ ಭಕ್ತಿ ಭಾವದಿಂದ ಕಣ್ಣುಂಬಿಕೊಂಡರು.

ವಿಶೇಷ ಪೂಜೆ ಮತ್ತು ಉತ್ಸವ ಬಲಿಗೆ ಜನಸಾಗರ!

ರಥದಲ್ಲಿ ವಿಶೇಷ ಪೂಜೆಯ ಬಳಿಕ ರಥವು ರಥಬೀದಿಯಲ್ಲಿ ಸಾಗಿತು. ಕಲ್ಕುಡ ದೈವ ಮತ್ತು ಕಾನತ್ತಿಲ ದೈವಗಳೂ ರಥದ ಜೊತೆಯಲ್ಲಿ ಆಗಮಿಸಿದವು. ಚೆನ್ನಕೇಶವನಿಗೆ ಗೋವಿಂದ.. ಗೋವಿಂದ.. ಜಯ ಘೋಷದ ಮಧ್ಯೆ ಬ್ರಹ್ಮ ರಥೋತ್ಸವ ಸಂಪನ್ನಗೊಂಡಿತು. ದೇವಸ್ಥಾನಕ್ಕೆ ಕಲ್ಕುಡ ಭಂಡಾರ ಆಗಮಿಸಿದ ಬಳಿಕ ವಿಶೇಷ ಪೂಜೆ ಮತ್ತು ಉತ್ಸವ ಬಲಿ ನಡೆದು ಚೆನ್ನಕೇಶವ ದೇವರನ್ನು ರಥದಲ್ಲಿ ಕುಳ್ಳಿರಿಸಲಾಯಿತು.

ರಥ ಮುಖ್ಯ ರಸ್ತೆಯ ದ್ವಾರದ ಬಳಿಯ ರಥೋತ್ಸವ ಕಟ್ಟೆಯ ಬಳಿಗೆ ಆಗಮಿಸಿತು. ಚೆನ್ನಕೇಶವ ದೇವರನ್ನು ರಥದಿಂದ ಇಳಿಸಿ ಶೃಂಗರಿಸಿದ್ದ ಕಟ್ಟೆಯಲ್ಲಿ ಕುಳ್ಳಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸುಳ್ಯದ ಒಡೆಯ ಶ್ರೀ ಚೆನ್ನಕೇಶವನ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ನಡೆದ ವರ್ಣ ವೈಭವದ ರಥೋತ್ಸವವನ್ನು ಊರ ಹಾಗೂ ಪರವೂರಿನಿಂದ ಆಗಮಿಸಿದ ಸಹಸ್ರಾಸರು ಮಂದಿ ಕಣ್ಣುಂಬಿಕೊಂಡರು.

ಸಿಂಗಾಪುರದಲ್ಲಿ ವಲಸೆ ಕಾರ್ಮಿಕರಿಗಾಗಿ ಪೊಂಗಲ್ ಹಬ್ಬ ಆಚರಣೆ : ಭಾರತೀಯ ಹೈಕಮಿಷನ್‌ ಆಯೋಜನೆ

ಸಿಂಗಾಪುರ: ಪೊಂಗಲ್ ತಮಿಳುನಾಡಿನ ಪ್ರಮುಖ ಕೊಯ್ದು ಹಬ್ಬವಾಗಿದೆ. ಸೂರ್ಯ ದೇವರಿಗೆ ಕೃತಜ್ಞತೆ ಸಲ್ಲಿಸುವ ಈ ಹಬ್ಬವನ್ನು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ಹೊಸ ಅಕ್ಕಿಯಿಂದ ತಯಾರಿಸಿದ “ಪೊಂಗಲ್” ಅನ್ನವೇ ಈ ಹಬ್ಬದ ವಿಶೇಷ ಕೃಷಿಕರ ಪರಿಶ್ರಮವನ್ನು ಗೌರವಿಸುವುದು ಇದರ ಮುಖ್ಯ ಉದ್ದೇಶ. ಹಾಗಾಗಿ, ಸಿಂಗಾಪುರದಲ್ಲಿನ ಭಾರತೀಯ ಹೈಕಮಿಷನ್, ಸುಮಾರು 1,500 ಭಾರತೀಯ ವಲಸೆ ಕಾರ್ಮಿಕರೊಂದಿಗೆ ಪ್ರಮುಖ ಕೊಯ್ದು ಹಬ್ಬವಾದ ಪೊಂಗಲ್ ಅನ್ನು ದಿನವಿಡೀ ಆಚರಿಸಿರುವುದು ತಿಳಿದುಬಂದಿದೆ.

ಭಾನುವಾರ (ಜನವರಿ 11) ನಡೆದ ಕಾರ್ಯಕ್ರಮದಲ್ಲಿ ಭಾರತದ ಹೈಕಮಿಷನರ್ ಡಾ. ಶಿಲ್ಪಕ್ ಅಂಬುಲೆ ಹಾಗೂ ಸಿಂಗಾಪುರ ಕಾರ್ಮಿಕ ಸಚಿವಾಲಯದ Assurance, Care and Engagement Group ಮುಖ್ಯಸ್ಥಟಿಂಗ್ ಯುಯಿ ಫೈಭಾಗವಹಿಸಿ, ಕಾರ್ಮಿಕರಿಗೆ ಹಬ್ಬಿದ ಶುಭಾಶಯಗಳನ್ನು ತಿಳಿಸಿದರು. ಈ ಕಾರ್ಯಕ್ರಮವು ಉತ್ತರ ಸಿಂಗಾಪುರದ ಕೈಗಾರಿಕಾ ಪ್ರದೇಶವಾದ ಸೆಂಬವಾಂಗ್ನಲ್ಲಿ ನಡೆಯಿತು. ಈ ಕಾರ್ಯಕ್ರಮವು ವಲಸೆ ಕಾರ್ಮಿಕರು, ಸಮುದಾಯದ ಸಹಭಾಗಿಗಳು ಮತ್ತು ಸ್ವಯಂಸೇವಕರನ್ನು ಒಟ್ಟುಗೂಡಿಸಿ, ಸಂಸ್ಕೃತಿಯ ಸಂಭ್ರಮವನ್ನು ಆಚರಿಸಲಾಗಿದೆ. 50ಕ್ಕೂ ಹೆಚ್ಚು ಸ್ಥಳೀಯ ಕಲಾವಿದರು ವಲಸೆ ಕಾರ್ಮಿಕರೊಂದಿಗೆ ವೇದಿಕೆ ಹಂಚಿಕೊಂಡು ನೃತ್ಯ-ಸಂಗೀತ ಪ್ರದರ್ಶನಗಳನ್ನು ನೀಡಿದರು.

Annual fair in Sullia..a grand Brahmarathotsava!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 126

You cannot copy content of this page