ಕಡಬ: Tulu Times | ಶಿರಾಡಿಯಲ್ಲಿ ಪತ್ನಿ ಮನೆಗೆ ಬಂದು ಪತಿಯೊಬ್ಬರು ಆತ್ಮಹ*ತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಶಿರಾಡಿ ನಿವಾಸಿ ಮಂಜು ನಾಯ್ಕ (49) ಎಂದು ಗುರುತಿಸಲಾಗಿದೆ.
ಆತ್ಮಹ*ತ್ಯೆ ಮಾಡಿಕೊಳ್ಳಲು ಕಾರಣ ಏನು..?
ಮೃತ ಮಂಜು ನಾಯ್ಕ (49) ವಿಪರೀತ ಕುಡಿಯುವ ಚಟ ಹೊಂದಿದ್ದರು. ಹೀಗಾಗಿ ಅವರ ಹೆಂಡತಿ ಬಹಳ ನೊಂದಿದ್ದರು. ಕುಡಿದ ಅಮಲಿನಲ್ಲಿ ಮನೆಯಲ್ಲಿ ನೀಡುತ್ತಿದ್ದ ಕಿರುಕುಳ ಹಿನ್ನೆಲೆಯಲ್ಲಿ, ಅವರ ಪತ್ನಿ ಸುಶೀಲ ಅವರು ತನ್ನ ತಂದೆ ತನಿಯಪ್ಪ ಅವರ ಮನೆಗೆ ತೆರಳಿ ಅಲ್ಲಿಯೇ ವಾಸವಿದ್ದರು. ಹೀಗಾಗಿ ಪತ್ನಿಯ ತವರು ಮನೆಯಾದ ಶಿರಾಡಿ ಗ್ರಾಮದ ಬರಮೇಲು ಎಂಬಲ್ಲಿ ಮಂಜು ನಾಯ್ಕ ಅವರು ಕೂಡ ನೆಲೆಸಿದ್ದರು ಎನ್ನಲಾಗಿದೆ. ಮಂಜು ನಾಯ್ಕ ಶುಕ್ರವಾರ ಸಂಜೆ ಬರಮೇಲು ಎಂಬಲ್ಲಿನ ತಾರಸಿ ಕಟ್ಟಡದ ಮೇಲ್ಭಾಗದ ಸಿಮೆಂಟ್ ಕಿಟಕಿಯ ತೂತಿಗೆ ಪ್ಲಾಸ್ಟಿಕ್ ಬೆಲ್ಟ್ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪತ್ನಿ ಸುಶೀಲ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ: ಶಬರಿಮಲೆ ವೃತದಾರಿಗೆ ಲಾರಿ ಡಿಕ್ಕಿಯಾಗಿ ಬಾಲಕ ಸಾವು
ಬಂಟ್ವಾಳ: ಪ್ರತ್ಯೇಕ ಪ್ರಕರಣದಲ್ಲಿ, ಕೇರಳ ರಾಜ್ಯದ ಕ್ಯಾಲಿಕಟ್ ಸಮೀಪದ ಕೋಟೆಕಲ್ ಬಳಿಯಲ್ಲಿ ಲಾರಿ ಢಿಕ್ಕಿಯಾಗಿ ಶಬರಿಮಲೆ ಯಾತ್ರೆ ಕೈಗೊಂಡ ಬಂಟ್ವಾಳದ ಬಾಲಕನೋರ್ವ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ದೇವರ ದರ್ಶನ ಮುಗಿಸಿ ವಾಪಸು ಮನೆಗೆ ಬರುವ ವೇಳೆ ಈ ಘಟನೆ ಶುಕ್ರವಾರ ತಡರಾತ್ರಿ ವೇಳೆ ನಡೆದಿದೆ. ಲಕ್ಷ್ಮೀಶ ಪೂಜಾರಿ( 15) ಎಂಬಾತ ಲಾರಿ ಅಪಘಾತದಲ್ಲಿ ಮೃತಪಟ್ಟ ಬಾಲಕ ಎಂದು ತಿಳಿದುಬಂದಿದೆ.
ಹಿಂಬದಿಯಿಂದ ಬಂದು ಗುದ್ದಿದ ಲಾರಿ!
ಸಿದ್ದಕಟ್ಟೆಯ ಶಾಲೆಯ 9 ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಲಕ್ಷ್ಮೀಶ ಪೂಜಾರಿ, ಕುರಿಯಾಳ ಗ್ರಾಮದ ದುರ್ಗಾನಗರ ಸಮೀಪದ ಕೊಪ್ಪಳ ನಿವಾಸಿ ಅಶೋಕ್ ಪೂಜಾರಿ ಅವರ ಪುತ್ರ ಸಂತೋಷ್ ಪೂಜಾರಿ, ಸಚಿನ್, ಗೋಪಾಲಪೂಜಾರಿ, ಲಕ್ಷ್ಮೀಶ ಪೂಜಾರಿ, ಕಿರಣ್, ವರದ್ ರಾಜ್ ಜೊತೆಗೂಡಿ ಇನ್ನೋವಾ ಕಾರಿನಲ್ಲಿ ಶಬರಿಮಲೆಗೆ ತೆರಳಿದ್ದರು. ಜ.7 ರಂದು ಒಟ್ಟು 7 ಮಂದಿ ಕುರಿಯಾಳದಿಂದ ದೇವರ ದರ್ಶನ ಮುಗಿಸಿ ಬರುತ್ತಿದ್ದ ವೇಳೆ ಕೊಟೆಕಲ್ ಎಂಬಲ್ಲಿ ಕಾರು ಕೆಟ್ಟುಹೋಗಿದೆ, ಎಂದು ಅಶೋಕ್ ಪೂಜಾರಿ ಒಬ್ಬರು ಕಾರಿನೊಳಗೆ ಕುಳಿತು ಕೊಂಡು ಉಳಿದಂತೆ ಚಾಲಕ ಸೇರಿ ಏಳು ಮಂದಿ ಕೂಡ ಕಾರಿನ ಎದುರು ಬೊನೆಟ್ ಓಪನ್ ಮಾಡಿ ಕಾರು ರಿಪೇರಿಯಲ್ಲಿ ತೊಡಗಿದ್ದರು. ಈ ವೇಳೆ ಯಮಸ್ವರೂಪಿ ಲಾರಿಯೊಂದು ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
Husband commits suicide after coming to his wife’s house in Shiradi!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











