ಉಡುಪಿ: Tulu Times | ಉಡುಪಿಯ ಅಲೆವೂರಿನಲ್ಲಿ ಕುಟುಂಬದ ನೇಮೋತ್ಸವದಲ್ಲಿ ನಟ ರಕ್ಷಿತ್ ಶೆಟ್ಟಿ ಭಾಗಿಯಾಗಿ ದೈವದ ಕೃಪೆಗೆ ಪಾತ್ರರಾಗಿದ್ದಾರೆ. ಇವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕುಟುಂಬ ಸಮೇತ ನೇಮೋತ್ಸವದಲ್ಲಿ ಭಾಗಿ!
ಮೂಲತಃ ಮಂಗಳೂರಿನವರಾದ ರಕ್ಷಿತ್ ಊರಿನ ದೇವರು, ದೈವ ಅಂತ ಬಹಳ ನಂಬಿಕೆ ಉಳ್ಳವರಾಗಿದ್ದಾರೆ. ಉಡುಪಿಯ ಅಲೆವೂರಿನ ಕಲ್ಯಾಣ ನಗರದಲ್ಲಿ ನಡೆದ ಕುಟುಂಬದ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ. ತಮ್ಮದೇ ಆದ ಪ್ರೀತಿಯನ್ನು ಇಟ್ಟುಕೊಂಡು ಇರುತ್ತಾರೆ. ಇನ್ನು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರೋದು ತೀರಾ ಅಪರೂಪವಾಗಿವಾಗಿದ್ದಾರೆ. ಕಳೆದೆ ಶನಿವಾರ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವ ನಡೆಯಿತು. ಪ್ರತಿ ವರ್ಷ ನಡೆಯುವ ನೇಮೋತ್ಸವದಲ್ಲಿ ರಕ್ಷಿತ್ ಶೆಟ್ಟಿ ಕುಟುಂಬ ಭಾಗಿಯಾಗುತ್ತಾರೆ. ರಕ್ಷಿತ್ ಶೆಟ್ಟಿ ಸದ್ಯ ಸಿನಿಮಾವೊಂದರ ಸ್ಕ್ರಿಫ್ಟಿಂಗ್ ಕೆಲಸದಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ ಸಾರ್ವಜನಿಕ ಜೀವನದಿಂದ ದೂರು ಉಳಿದಿದ್ದಾರೆ.
ಯಾವುದೇ ಆಡಂಬರ ಇಲ್ಲದೆ ಸಿಂಪಲ್ ಆಗಿದ್ದ ರಕ್ಷಿತ್ ಶೆಟ್ಟಿ!
ಅಲೆವೂರು ದೊಡ್ಡಮನೆ ಕುಟುಂಬದ ಕುಡಿಯಾಗಿರುವ ರಕ್ಷಿತ್ ಶೆಟ್ಟಿ ಅವರು ತಮ್ಮ ತಂದೆ-ತಾಯಿ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಈ ಧಾರ್ಮಿಕ ವಿಧಿವಿಧಾನಗಳಲ್ಲಿ ಶ್ರದ್ಧಾಭಕ್ತಿಯಿಂದ ಭಾಗವಹಿಸಿದರು. ನೇಮೋತ್ಸವದ ಸಂದರ್ಭದಲ್ಲಿ ದೈವವು ರಕ್ಷಿತ್ ಶೆಟ್ಟಿಯವರಿಗೆ “ಚಿಂತೆ ಬೇಡ ನಾನು ನಿನ್ನ ಹಿಂದಿದ್ದೇನೆ” ಎಂದು ಅಭಯ ನೀಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಹಳ ದಿನಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ರಕ್ಷಿತ್ ಶೆಟ್ಟಿ, ಯಾವುದೇ ಆಡಂಬರವಿಲ್ಲದೆ ಸಾಮಾನ್ಯರಂತೆ ಕುಳಿತು ಪೂಜಾ ಕಾರ್ಯಗಳನ್ನು ವೀಕ್ಷಿಸಿದ್ದು ಅಭಿಮಾನಿಗಳ ಗಮನ ಸೆಳೆದಿದೆ. ದೈವದ ಭಂಡಾರ ಹೊರಡುವಾಗಲೂ ರಕ್ಷಿತ್ ಶೆಟ್ಟಿ, ತಂದೆ ತಾಯಿಯ ಜೊತೆ ಭಾಗವಹಿಸಿದ್ದರು. ಕುಟುಂಬದ ದೈವಕ್ಕೆ ವಿಶೇಷವಾಗಿ ನಡೆದುಕೊಳ್ಳುವ ನಟ, ಹೆಸರಿಗೆ ತಕ್ಕಂತೆ ಕುಟುಂಬ, ಪರಿಸರ, ಮನೆ ವಾತಾವರಣದಲ್ಲೂ ಸಿಂಪಲ್ಲಾಗಿದ್ದಾರೆ.
ಇದನ್ನೂ ಓದಿ: ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ: ಭಾಷಾ ಸ್ವಾತಂತ್ರ್ಯಕ್ಕೆ ಸವಾಲಾಗುತ್ತಾ?
Actor Rakshit Shetty attended the New Year celebrations in Udupi in a simple outfit!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











