ಬಂಟ್ವಾಳ: Tulu Times | ಕೇರಳ ರಾಜ್ಯದ ಕ್ಯಾಲಿಕಟ್ ಸಮೀಪದ ಕೋಟೆಕಲ್ ಬಳಿಯಲ್ಲಿ ಲಾರಿ ಢಿಕ್ಕಿಯಾಗಿ ಶಬರಿಮಲೆ ಯಾತ್ರೆ ಕೈಗೊಂಡ ಬಂಟ್ವಾಳದ ಬಾಲಕನೋರ್ವ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ದೇವರ ದರ್ಶನ ಮುಗಿಸಿ ವಾಪಸು ಮನೆಗೆ ಬರುವ ವೇಳೆ ಈ ಘಟನೆ ಶುಕ್ರವಾರ ತಡರಾತ್ರಿ ವೇಳೆ ನಡೆದಿದೆ. ಲಕ್ಷ್ಮೀಶ ಪೂಜಾರಿ( 15) ಎಂಬಾತ ಲಾರಿ ಅಪಘಾತದಲ್ಲಿ ಮೃತಪಟ್ಟ ಬಾಲಕ ಎಂದು ತಿಳಿದುಬಂದಿದೆ.
ಹಿಂಬದಿಯಿಂದ ಬಂದು ಗುದ್ದಿದ ಲಾರಿ!
ಸಿದ್ದಕಟ್ಟೆಯ ಶಾಲೆಯ 9 ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಲಕ್ಷ್ಮೀಶ ಪೂಜಾರಿ, ಕುರಿಯಾಳ ಗ್ರಾಮದ ದುರ್ಗಾನಗರ ಸಮೀಪದ ಕೊಪ್ಪಳ ನಿವಾಸಿ ಅಶೋಕ್ ಪೂಜಾರಿ ಅವರ ಪುತ್ರ ಸಂತೋಷ್ ಪೂಜಾರಿ, ಸಚಿನ್, ಗೋಪಾಲಪೂಜಾರಿ, ಲಕ್ಷ್ಮೀಶ ಪೂಜಾರಿ, ಕಿರಣ್, ವರದ್ ರಾಜ್ ಜೊತೆಗೂಡಿ ಇನ್ನೋವಾ ಕಾರಿನಲ್ಲಿ ಶಬರಿಮಲೆಗೆ ತೆರಳಿದ್ದರು. ಜ.7 ರಂದು ಒಟ್ಟು 7 ಮಂದಿ ಕುರಿಯಾಳದಿಂದ ದೇವರ ದರ್ಶನ ಮುಗಿಸಿ ಬರುತ್ತಿದ್ದ ವೇಳೆ ಕೊಟೆಕಲ್ ಎಂಬಲ್ಲಿ ಕಾರು ಕೆಟ್ಟುಹೋಗಿದೆ, ಎಂದು ಅಶೋಕ್ ಪೂಜಾರಿ ಒಬ್ಬರು ಕಾರಿನೊಳಗೆ ಕುಳಿತು ಕೊಂಡು ಉಳಿದಂತೆ ಚಾಲಕ ಸೇರಿ ಏಳು ಮಂದಿ ಕೂಡ ಕಾರಿನ ಎದುರು ಬೊನೆಟ್ ಓಪನ್ ಮಾಡಿ ಕಾರು ರಿಪೇರಿಯಲ್ಲಿ ತೊಡಗಿದ್ದರು. ಈ ವೇಳೆ ಯಮಸ್ವರೂಪಿ ಲಾರಿಯೊಂದು ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ವೇಣೂರಿನಲ್ಲಿ ಹೆಣ್ಣು ಚಿರತೆಯ ಮೃತದೇಹ ಪತ್ತೆ…!
ಬೆಳ್ತಂಗಡಿ: ಪ್ರತ್ಯೇಕ ಪ್ರಕರಣದಲ್ಲಿ, ಬೆಳ್ತಂಗಡಿ ತಾಲೂಕು ವೇಣೂರಿನ ಇರ್ವತ್ತೂರು ಗ್ರಾಮದ ಸರಕಾರಿ ಜಾಗದಲ್ಲಿ ಸುಮಾರು 3 ರಿಂದ 4 ವರ್ಷದ ಹೆಣ್ಣು ಚಿರತೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸರಕಾರಿ ಜಾಗದಲ್ಲಿ ಜ.10 ರಂದು ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಹೆಣ್ಣು ಚಿರತೆಯ ಮೃತದೇಹ ಸ್ಥಳೀಯರಿಗೆ ಪತ್ತೆಯಾಗಿದೆ. ವೇಣೂರು ವಲಯ ಅರಣ್ಯಾಧಿಕಾರಿ ಭರತ್.ಯು.ಜಿ. ಡಿ.ಆರ್.ಎಫ್ ಅಶ್ವಿತ್, ಗಸ್ತು ಅರಣ್ಯ ಪಾಲಕ ಸುರೇಶ್ ಮತ್ತು ದಿವಕರ್ ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಂದು ಸರಕಾರಿ ಪಶು ವೈದ್ಯರು ಚಿರತೆಯ ಶವಪರೀಕ್ಷೆ ಮಾಡಲಿದ್ದಾರೆ. ನಂತರ ಈ ಬಗ್ಗೆ ಮಾಹಿತಿ ತಿಳಿಯಲಿದೆ.
Bantwal: Boy dies after being hit by lorry on Sabarimala road- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











