ನೌಕಾಪಡೆ : Tulu Times l ಭಾರತದ ನೌಕಾ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸುವ ಹಾಗೂ “ಮೇಕ್ ಇನ್ ಇಂಡಿಯಾ ಅಥವಾ ಆತ್ಮನಿರ್ಭರ ಭಾರತ” ಯೋಜನೆಗೆ ಬಲ ನೀಡುವ ಹೆಜ್ಜೆಯಾಗಿ, ಭಾರತವು ಜರ್ಮನಿಯೊಂದಿಗೆ ಸುಮಾರು $8 ಬಿಲಿಯನ್ (ಸುಮಾರು ₹66,000 ಕೋಟಿ) ಮೌಲ್ಯದ ಆರು ಆಧುನಿಕ ಸಾಂಪ್ರದಾಯಿಕ (ಕನ್ವೆನ್ಶನಲ್) ಸಬ್ಮರಿನ್ಗಳ ನಿರ್ಮಾಣಕ್ಕೆ ಸಂಬಂಧಿಸಿದ ಮಹತ್ವದ ಒಪ್ಪಂದವನ್ನು ಅಂತಿಮಗೊಳಿಸುವ ಹಂತಕ್ಕೆ ತಲುಪಿದೆ.
ಇದು ಭಾರತದ ಇತಿಹಾಸದಲ್ಲಿನ ಅತಿದೊಡ್ಡ ಏಕೈಕ ರಕ್ಷಣಾ ಒಪ್ಪಂದಗಳಲ್ಲಿ ಒಂದಾಗಬಹುದು ಎನ್ನಲಾಗಿದೆ. 2016ರಲ್ಲಿ ನಡೆದಿದ್ದ ಸುಮಾರು $8.7 ಬಿಲಿಯನ್ ಮೌಲ್ಯದ ರಫೇಲ್ ಯುದ್ಧವಿಮಾನ ಒಪ್ಪಂದಕ್ಕೆ ಸಮಾನ ಅಥವಾ ಅದಕ್ಕಿಂತ ದೊಡ್ಡದಾಗಿರಬಹುದು ಎಂದು ಬ್ಲೂಂಬರ್ಗ್ ವರದಿ ತಿಳಿಸಿದೆ.
2026ರ ಆರಂಭಕ್ಕೆ ಮಾತುಕತೆಗಳು ಅಂತಿಮ ಹಂತದಲ್ಲಿದ್ದು, ಈ ಒಪ್ಪಂದವು ಭಾರತ–ಜರ್ಮನಿ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ದೇಶೀಯ ರಕ್ಷಣಾ ಉತ್ಪಾದನೆಗೆ ಉತ್ತೇಜನ ನೀಡಲಿದೆ.
ಇದನ್ನೂ ಓದಿ : SSLC : ಎಸ್.ಎಸ್.ಎಲ್.ಸಿ ಪ್ರಶ್ನೆಪತ್ರಿಕೆ ಸೋರಿಕೆ : ಎಚ್ಚೆತ್ತುಕೊಳ್ಳದ ಪರೀಕ್ಷಾ ಮಂಡಳಿ ಅಧಿಕಾರಿಗಳು
ಇದರಲ್ಲಿ ಪ್ರಾಜೆಕ್ಟ್ 75 (ಇಂಡಿಯಾ) ಅನ್ನು 1990ರ ದಶಕದ ಕೊನೆಯಲ್ಲಿ ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ (ಸಬ್ಮರಿನ್) ಶಕ್ತಿಯನ್ನು ಬಲಪಡಿಸುವ ಉದ್ದೇಶದಿಂದ ಆರಂಭಿಸಲಾಯಿತು. ಈ ಸಬ್ಮರಿನ್ಗಳು, ಶತ್ರು ಹಡಗು ಮತ್ತು ಸಬ್ಮರಿನ್ಗಳ ವಿರುದ್ಧ ಯುದ್ಧ, ಗುಪ್ತಚರ ಮಾಹಿತಿ ಸಂಗ್ರಹ, ವಿಶೇಷ ಪಡೆಗಳ ಕಾರ್ಯಾಚರಣೆಗೆ ಬೆಂಬಲ, ಭೂಮಿಯ ಮೇಲಿನ ಗುರಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿರಲಿವೆ ಎನ್ನಲಾಗಿದೆ.
ಈ ಯೋಜನೆಯ ಪ್ರಮುಖ ಅಂಶ ಸಬ್ಮರಿನ್ಗಳನ್ನು ಭಾರತದಲ್ಲೇ ನಿರ್ಮಿಸಬೇಕು. ವಿದೇಶಿ ಕಂಪನಿಯಿಂದ ತಂತ್ರಜ್ಞಾನ ವರ್ಗಾವಣೆ (Technology Transfer) ಕಡ್ಡಾಯ ಹಾಗೂ ಇದು ಆತ್ಮನಿರ್ಭರ ಭಾರತ ನೀತಿಗೆ ಅನುಗುಣವಾಗಿರಬೇಕು ಎಂದಾಗಿದೆ. ಈ ಯೋಜನೆಗೆ 20 ವರ್ಷಕ್ಕೂ ಹೆಚ್ಚು ಕಾಲ ವಿಳಂಬವಾಯಿತು ಎನ್ನಲಾಗಿದೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=7w2dks89z8EgU5or











