ಬೆಳ್ತಂಗಡಿ: Tulu Times | ಬೆಳ್ತಂಗಡಿ ತಾಲೂಕು ವೇಣೂರಿನ ಇರ್ವತ್ತೂರು ಗ್ರಾಮದ ಸರಕಾರಿ ಜಾಗದಲ್ಲಿ ಸುಮಾರು 3 ರಿಂದ 4 ವರ್ಷದ ಹೆಣ್ಣು ಚಿರತೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸರಕಾರಿ ಜಾಗದಲ್ಲಿ ಜ.10 ರಂದು ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಹೆಣ್ಣು ಚಿರತೆಯ ಮೃತದೇಹ ಸ್ಥಳೀಯರಿಗೆ ಪತ್ತೆಯಾಗಿದೆ. ವೇಣೂರು ವಲಯ ಅರಣ್ಯಾಧಿಕಾರಿ ಭರತ್.ಯು.ಜಿ, ಡಿ.ಆರ್.ಎಫ್ ಅಶ್ವಿತ್, ಗಸ್ತು ಅರಣ್ಯ ಪಾಲಕ ಸುರೇಶ್ ಮತ್ತು ದಿವಕರ್ ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಂದು ಸರಕಾರಿ ಪಶು ವೈದ್ಯರು ಚಿರತೆಯ ಶವಪರೀಕ್ಷೆ ಮಾಡಲಿದ್ದಾರೆ. ನಂತರ ಈ ಬಗ್ಗೆ ಮಾಹಿತಿ ತಿಳಿಯಲಿದೆ.
ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಪ್ರತ್ಯಕ್ಷ..ಕೆಲ ಕಾಲ ಟ್ರಾಫಿಕ್ ಜಾಮ್ !
ಬೆಳ್ತಂಗಡಿ: ಪ್ರತ್ಯೇಕ ಪ್ರಕರಣದಲ್ಲಿ, ಚಾರ್ಮಾಡಿ ಘಾಟಿಯ 2ನೇ ಮತ್ತು 3ನೇ ತಿರುವಿನಲ್ಲಿ ಕಾಡಾನೆ ಕಾಣಿಸಿಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಜ.9 ರಂದು ರಾತ್ರಿ ಸುಮಾರು 9.45ರ ವೇಳೆಗೆ ಮರವನ್ನು ಮುರಿದು ರಸ್ತೆ ಮಧ್ಯೆ ಚಾರ್ಮಾಡಿಯ 2 ಮತ್ತು 3 ನೇ ತಿರುವಿನಲ್ಲಿ ನಿಂತ ಕಾಡಾನೆ, ಒಂದು ಗಂಟೆಗೂ ಹೆಚ್ಚು ಕಾಲ ಅಲ್ಲೇ ತಿರುಗಾಡುತಿತ್ತು.
ಹೀಗಾಗಿ, ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಟ್ರಾಫಿಕ್ ಜಾಮ್ ಉಂಟಾಗಿ, ವಾಹನಗಳು ಓಡಾಡಲು ಕಷ್ಟವಾಗಿತ್ತು.ವಾಹನ ಸವಾರರು ಭಯಭೀತರಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳದಲ್ಲಿ ಮೊಬೈಲ್ ನೆಟ್ವರ್ಕ್ ಕೂಡ ಇರಲಿಲ್ಲ. ಹೀಗಾಗಿ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಸಾರ್ವಜನಿಕರು ಪರದಾಡಿದ್ದಾರೆ. ದಕ್ಷಿಣ ಕನ್ನಡ – ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿರುವ ಕಾರಣ, ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಚಾರ್ಮಾಡಿ ಘಾಟಿಯಲ್ಲಿ ಧಗ ಧಗನೆ ಹೊತ್ತಿ ಉರಿದ ಲಾರಿ
ಬೆಳ್ತಂಗಡಿ: ಪ್ರತ್ಯೇಕ ಪ್ರಕರಣದಲ್ಲಿ, ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಲಾರಿಯೊಂದು ಸುಟ್ಟು ಕರಕಲಾದ ಘಟನೆ ನಡೆದಿದೆ. ಲಾರಿ ಚಾಲಕ ಸಹಿತ ಲಾರಿಯಲ್ಲಿದ್ದ ಮೂರು ಮಂದಿ ಅದೃಷ್ಟಪಶಾತ್ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಇನ್ನು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಜಾವಗಲ್ ನಿಂದ ಕುಂದಾಪುರದ ಕಡೆಗೆ ಮೆಕ್ಕೆಜೋಳದ ಲೋಡ್ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಇನ್ನು ಲಾರಿ ಹೊತ್ತಿ ಉರಿದು ಮೂವರು ಪಾರಾಗಿದ್ದಾರೆ. ಬೆಂಕಿ ರಸ್ತೆ ಬದಿಯ ಅರಣ್ಯಕ್ಕೆ ವ್ಯಾಪಿಸಿದೆ. ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಕ್ರಮದಿಂದ ಹತೋಟಿಗೆ ತರಲಾಗಿದೆ.
Dead body of female leopard found in Venur..!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











