ಬೆಳ್ತಂಗಡಿ: Tulu Times | ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಲಾರಿಯೊಂದು ಸುಟ್ಟು ಕರಕಲಾದ ಘಟನೆ ನಡೆದಿದೆ.
ಲಾರಿ ಚಾಲಕ ಸಹಿತ ಲಾರಿಯಲ್ಲಿದ್ದ ಮೂರು ಮಂದಿ ಅದೃಷ್ಟಪಶಾತ್ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಇನ್ನು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಜಾವಗಲ್ ನಿಂದ ಕುಂದಾಪುರದ ಕಡೆಗೆ ಮೆಕ್ಕೆಜೋಳದ ಲೋಡ್ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಇನ್ನು ಲಾರಿ ಹೊತ್ತಿ ಉರಿದು ಮೂವರು ಪಾರಾಗಿದ್ದಾರೆ. ಬೆಂಕಿ ರಸ್ತೆ ಬದಿಯ ಅರಣ್ಯಕ್ಕೆ ವ್ಯಾಪಿಸಿದೆ. ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಕ್ರಮದಿಂದ ಹತೋಟಿಗೆ ತರಲಾಗಿದೆ.
ಇದನ್ನೂ ಓದಿ: ಇಡೀ ರಾಜ್ಯದ ಮಹಿಳೆಯರು ಮುಂದೇನು ಎಂದು ಚಿಂತೆ ಮಾಡುವ ದುಸ್ಥಿತಿ- ಬಿ.ಎಸ್.ಯಡಿಯೂರಪ್ಪ
ಚಾರ್ಮಾಡಿ ಘಾಟ್ ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಅತ್ಯಂತ ಸುಂದರವಾದ ಮತ್ತು ಪ್ರಮುಖವಾದ ಪರ್ವತ ಮಾರ್ಗಗಳಲ್ಲಿ ಒಂದಾಗಿದೆ. ಇಲ್ಲಿನ ರಸ್ತೆಯು ಒಟ್ಟು ೧೨ ಕಡಿದಾದ ತಿರುವುಗಳನ್ನು ಹೊಂದಿದೆ. ಮಳೆಗಾಲದಲ್ಲಿ ಈ ಪ್ರದೇಶವು ಮಂಜಿನಿಂದ ಆವೃತವಾಗಿದ್ದು, ಹಲವಾರು ಸಣ್ಣ ಜಲಪಾತಗಳು ನೋಡುಗರನ್ನು ಸೆಳೆಯುತ್ತವೆ. ಹೀಗಾಗಿ ಇಲ್ಲಿ ಪ್ರವಾಸ ತೆರಳುವ ಮಂದಿ ಮಾಹಿತಿ ಪಡೆದುಕೊಂಡು ತೆರಳುವುದು ಉತ್ತಮ.
ಬೆಳ್ಳಂ ಬೆಳಗ್ಗೆ ಬೆಂಕಿಗಾಹುತಿಯಾದ ಲಾರಿ : ಆಕಸ್ಮಿಕ ಅಗ್ನಿ ಅವಘಡ
ಕೊಡಗು: ಮೈಸೂರುನಿಂದ ಮಂಗಳೂರಿಗೆ ಹೋಗುತ್ತಿದ್ದ ಲಾರಿಯೊಂದು, ದೇವರಕೊಲ್ಲಿ ಬಳಿ ಇಂದು ಬೆಳಗ್ಗೆ 6 ಗಂಟೆಗೆ ಆಕಸ್ಮಿಕ ಅಗ್ನಿ ಅವಘಡಕ್ಕೆ ತುತ್ತಾದ ಘಟನೆ ನಡೆದಿದೆ ಹಾಗೂ ಈ ಘಟನೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಸುದ್ದಿ ತಿಳಿದು ಮಡಿಕೇರಿಯ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಇತರ ಯಾವುದೇ ವಾಹನಗಳಿಗೆ ಹಾನಿಯಾಗಿರುವುದಿಲ್ಲ!
ಕಾಫಿ ಹಸ್ಕ್ ತುಂಬಿಸಿಕೊಂಡು ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಗೋಚರಿಸಿ ಹೊತ್ತಿಕೊಂಡು ಸಂಪೂರ್ಣವಾಗಿ ಲಾರಿ ಆಹುತಿಯಾಗಿದೆ. ಚಾಲಕ ಅಪಾಯದಿಂದ ಪಾರಾಗಿರುವುದು ವರದಿಯಾಗಿದೆ. ಈ ಅಗ್ನಿ ಅವಘಡಕ್ಕೆ ಮೂಲ ಕಾರಣ ಇನ್ನೂ ತಿಳಿದು ಬಂದಿಲ್ಲ. ಅಲ್ಲದೇ ಈ ಅನಾಹುತದಿಂದ ಇತರ ಯಾವುದೇ ವಾಹನಗಳಿಗೆ ಹಾನಿಯಾಗಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
Bus catches fire at Charmadi Ghat- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











