ಬೆಂಗಳೂರು: Tulu Times | ಹುಬ್ಬಳ್ಳಿ ಮಹಿಳೆಯ ವಿವಸ್ತ್ರಗೊಳಿಸಿದ ಘಟನೆಯಿಂದ ಇಡೀ ರಾಜ್ಯದ ಮಹಿಳೆಯರು ಮುಂದೇನು ಎಂದು ಚಿಂತೆ ಮಾಡುವ ದುಸ್ಥಿತಿಗೆ ಬಂದು ತಲುಪಿದೆ. ಈಗಲಾದರೂ ಸರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾನೂನಿನಂತೆ ಕ್ರಮ ಕೈಗೊಳ್ಳಲಿ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒತ್ತಾಯಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿದ ಘಟನೆ ಖಂಡನೀಯ. ಇದರ ಕುರಿತು ಸಮಗ್ರ ತನಿಖೆ ಆಗಲಿ ಎಂದು ಒತ್ತಾಯಿಸಿದರು. ಘಟನೆಗೆ ಕಾರಣಕರ್ತರಿಗೆ ಶಿಕ್ಷೆ ಆಗಬೇಕು ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಲಂಗು ಲಗಾಮು ಇಲ್ಲದೆ ನಡೆಯುತ್ತಿದೆ: ಬಸವರಾಜ ಬೊಮ್ಮಾಯಿ
ಬೆಂಗಳೂರು: ಹುಬ್ಬಳ್ಳಿಯಲ್ಲಿ ಒಬ್ಬ ದಲಿತ ಮಹಿಳೆಯ ವಿವಸ್ತ್ರ ಗೊಲಿಸಿರುವ ಪ್ರಕರಣ ಅತ್ಯಂತ ಕ್ರೂರ ಅಮಾನುಷವಾದ ಘಟನೆ ಹುಬ್ಬಳ್ಳಿ ಪೊಲೀಸ್ ಕಮಿಷನರ್ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಲಂಗು ಲಗಾಮು ಇಲ್ಲದೆ ಪೊಲಿಸ್ ಇಲಾಖೆ ನಡೆಯುತ್ತಿದೆ. ಕೂಡಲೆ ಹುಬ್ಬಳ್ಳಿ ಧಾರವಾಡ ಪೊಲಿಸ್ ಕಮಿಷನರ ಅವರನ್ನು ವರ್ಗಾವಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಯಲ್ಲಿ ಒಬ್ಬ ದಲಿತ ಮಹಿಳೆಯ ವಿವಸ್ತ್ರ ಗೊಲಿಸಿರುವ ಪ್ರಕರಣ ಅತ್ಯಂತ ಕ್ರೂರ ಅಮಾನುಷವಾದ ಘಟನೆ ಅದು ಪೊಲಿಸ್ ಇಲಾಖೆಯಿಂದ ನಡೆದಿರುವುದು ಈ ರಾಜ್ಯದಲ್ಲಿ ಗೃಹ ಇಲಾಖೆ ಸಂಪೂರ್ಣ ಹಿಡಿತ ಕಳೆದುಕೊಂಡಿದೆ ಗೃಹ ಇಲಾಖೆ ಹದಗೆಟ್ಟಿದೆ ಯಾರು ರಕ್ಷಕರಿದ್ದಾರೆ ಅವರು ಭಕ್ಷಕರಾಗಿದ್ದಾರೆ. ಬೆಲಿ ಎದ್ದು ಹೊಲ ಮೇಯ್ದಿದೆ ಒಬ್ಬ ಮಹಿಳೆಗೆ ರಕ್ಷಣೆ ಬದಲಿಗೆ ವಿವಸ್ತ್ರ ಗೊಳಿಸುವ ಕೆಲಸ ಮಾಡಿದ್ದವರು ಸಮಾಜದಲ್ಲಿ ತಲೆ ಎತ್ತಲು ನಾಲಾಯಕ್ ಇದ್ದಾರೆ. ಘಟನೆ ಹೊರ ಬಂದ ನಂತರ ಕಮಿಷನರ್ ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡಿದರು. ಕಾಂಗ್ರೆಸ್ ಕಾರ್ಪೊರೇಟ್ ರ ದೂರಿನ ಹಿನ್ನಲೆಯಲ್ಲಿ ಆರೆಸ್ಟ್ ಮಾಡಿದ್ದಾರೆ. ಏನಾದರೂ ಸಮಸ್ಯೆಯಾಗಿದ್ದತೆ ಬಿಎಲ್ ಒ ಕಂಪ್ಲೆಂಟ್ ಮಾಡಬೆಕಿತ್ತು. ಕಾಂಗ್ರೆಸ್ ಪಕ್ಷದ ಅಣತಿಯಂತೆ ಕಾನೂನು ಬಾಹಿರ ಬಂಧನ ನಡೆದಿದೆ. ಕಮಿಷನರ್ ಮುಚ್ಚಿ ಹಾಕಲು ಪ್ರಯತ್ಮಸಿರುವುದು ಕ್ರಿಮಿನಲ್ ಅಪರಾಧ, ಕಮಿಷನರ್ ತನ್ನನ್ನು ತಾನು ಬಹಳ ಬುದ್ದಿವಂತ ಅಂದುಕೊಂಡಿದ್ದಾನೆ. ತಾವು ಏನು ಬೇಕಾದರು ಮಾಡಿದರೂ ನಡೆಯುತ್ತೆ ಅಂತ ಅಂದುಕೊಂಡಿದ್ದಾರೆ. ಇವರಿಗೆ ಯಾರ ಬೆಂಬಲ ಇದೆ. ಈ ಪ್ರಕರಣದಲ್ಲಿ ಇನ್ಸಪೆಕ್ಟರ ವರ್ಗಾವಣೆ ಆಗಿದೆ. ಆದರೆ, ನೆರವಾಗಿ ಭಾಗಿಯಾಗಿರುವ ಕಾನ್ಸ್ ಟೇಬಲ್ ಮೇಲೆ ಯಾವುದೇ ಕ್ರಮ ಇಲ್ಲ. ಒಂದೆಡೆ ಆಗಿರುವ ಘಟನೆ ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಪ್ರಕರಣದಲ್ಲಿ ಭಾಗಿಯಾದವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
The plight of women across the state is worrying about what will happen next – B.S. Yediyurappa- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











