ಆರೋಗ್ಯ : Tulu Times | ಉಪಾಹಾರವು ದಿನದ ಅತ್ಯಂತ ಮುಖ್ಯ ಊಟ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಯಾವ ಸಮಯಕ್ಕೆ ಉಪಾಹಾರ ಸೇವಿಸುತ್ತೇವೆ ಎಂಬುವುದು ಅಷ್ಟೇ ಮಹತ್ವದ್ದು. ಆರೋಗ್ಯ ತಜ್ಞರ ಪ್ರಕಾರ, ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಆರೋಗ್ಯಕರ ಹಾಗೂ ಹೊಟ್ಟೆ ತುಂಬುವ ಉಪಾಹಾರವನ್ನು ಸರಿಯಾದ ಸಮಯಕ್ಕೆ ಸೇವಿಸುವುದು ದಿನಪೂರ್ತಿ ಶಕ್ತಿ, ಏಕಾಗ್ರತೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಉಪಾಹಾರವು ದೇಹದ ಮೆಟಾಬಾಲಿಸಂ ಆರಂಭಿಸುವ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಯಾವ ಸಮಯಕ್ಕೆ ತೆಗೆದುಕೊಳ್ಳುತ್ತೇವೆ ಎಂಬುದೂ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ.
ಹೃದಯ ರೋಗಗಳ ಅಪಾಯ ಹೆಚ್ಚು ;
ಅಧ್ಯಯನಗಳು ಹೇಳುವಂತೆ, ದಿನದ ಮೊದಲ ಊಟವನ್ನು ಯಾವ ಸಮಯಕ್ಕೆ ಸೇವಿಸುತ್ತೇವೆ ಎಂಬುದು ಹೃದಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತಜ್ಞರ ಅಭಿಪ್ರಾಯದಂತೆ, ಬೆಳಗ್ಗೆ ಬೇಗ ಉಪಾಹಾರ ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ. ರಾತ್ರಿಯ ಊಟಕ್ಕೂ ಸಮಯದ ಮಹತ್ವ ಇದೆ. ಪೌಷ್ಟಿಕ ತಜ್ಞರ ಪ್ರಕಾರ, ತಡವಾಗಿ ರಾತ್ರಿಯ ಊಟ ಮಾಡುವವರಲ್ಲಿ ಹೃದಯ ರೋಗಗಳ ಅಪಾಯ ಹೆಚ್ಚು. ಆದರೆ ಉಪಾಹಾರ ಇನ್ನಷ್ಟು ಮುಖ್ಯ, ಏಕೆಂದರೆ ಈ ಊಟದಲ್ಲಿ ನಾವು ಹೆಚ್ಚು ಆಹಾರ ಗುಂಪುಗಳನ್ನು ಸೇರಿಸಬೇಕಾಗುತ್ತದೆ.
ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಉಪಾಹಾರ ಸೇವಿಸುವುದು ದೇಹದ ಸರ್ಕೇಡಿಯನ್ ರಿದಮ್‌ಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಕೊರೊನರಿ ಹೃದಯ ರೋಗ, ರಕ್ತದೊತ್ತಡ (ಹೈಪರ್‌ಟೆನ್ಶನ್), ಹೃದಯ ವೈಫಲ್ಯ, ಹೃದಯ ಕವಾಟದ ಸಮಸ್ಯೆಗಳು, ಹೃದಯ ಬಡಿತದ ಅಸಮತೋಲನ, ಸ್ಟ್ರೋಕ್ ಇತ್ಯಾದಿಗಳು ನಿಯಂತ್ರಣದಲ್ಲಿ ಇರುತ್ತವೆ ಎಂದು ತಜ್ಞರು ಹೇಳಿದ್ದಾರೆ.
ದಿನಪೂರ್ತಿ ಶಕ್ತಿಯ ಮಟ್ಟವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಹಾಯ ;
ಹಿಂದಿನ ಅಧ್ಯಯನಗಳ ಪ್ರಕಾರ, ದಿನದ ಮೊದಲ ಊಟವನ್ನು ತಡವಾಗಿ ಮಾಡುವ ಪ್ರತಿಯೊಂದು ಗಂಟೆಗೂ ಹೃದಯ ರೋಗಗಳ ಅಪಾಯವು ಶೇ.6ರಷ್ಟು ಹೆಚ್ಚಾಗುತ್ತದೆ. ಇದು ತಡವಾಗಿ ಉಪಾಹಾರ ಸೇವಿಸುವವರಿಗೆ ಮಾತ್ರವಲ್ಲ, ಉಪಾಹಾರವನ್ನೇ ಬಿಟ್ಟುಬಿಡುವವರಿಗೂ ಅನ್ವಯಿಸುತ್ತದೆ.
ಉದಾಹರಣೆಗೆ: ಬೆಳಿಗ್ಗೆ 8 ಗಂಟೆಗೆ ಉಪಾಹಾರ ಮಾಡುವವರಿಗಿಂತ 9 ಗಂಟೆಗೆ ಉಪಾಹಾರ ಮಾಡುವವರಲ್ಲಿ ಹೃದಯ ಸಮಸ್ಯೆಗಳ ಅಪಾಯ ಶೇ.6 ಹೆಚ್ಚು ಇನ್ನಷ್ಟು ತಡವಾದರೆ ಅಪಾಯವೂ ಹಂತ ಹಂತವಾಗಿ ಹೆಚ್ಚುತ್ತದೆ. ಹಾಗಾಗಿ, ಆರೋಗ್ಯಕರ ಜೀವನಕ್ಕಾಗಿ ಏನು ತಿನ್ನುತ್ತೇವೆ ಎಂಬುದಷ್ಟೇ ಅಲ್ಲ, ಯಾವ ಸಮಯಕ್ಕೆ ತಿನ್ನುತ್ತೇವೆ ಎಂಬುದೂ ಮುಖ್ಯ. ಪ್ರತಿದಿನ ಬೆಳಿಗ್ಗೆ ಸುಮಾರು 8 ಗಂಟೆಗೆ ಪೌಷ್ಟಿಕ ಉಪಾಹಾರ ಸೇವಿಸುವುದು ಹೃದಯ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ದಿನಪೂರ್ತಿ ಶಕ್ತಿಯ ಮಟ್ಟವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
Why is breakfast at 8 am the best? Here are the health benefits you need to know – ತುಳು ಟೈಮ್ಸ್
ಇದನ್ನೂ ಓದಿ : Bangalore : ಬೆಂಗಳೂರಿನಲ್ಲಿ ಹೀಗೊಂದು ಅಮಾನವೀಯ ಹಲ್ಲೆ : ಕೇಸ್ ದಾಖಲು
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Md1OEd9glA4?si=vaCnFWTwlhJXIHLB











