ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕೊಲ್ಹಾಪುರಿ ನಂತರ ಮತ್ತೆ ‘ದೇಶಿ’ ಪ್ರೇರಣೆಗೆ ತಿರುಗಿದ ಪ್ರದಾ‌ ! ಏಲಕ್ಕಿ ಚಹಾ ಪರಿಮಳದ ಬೆಲೆ ಎಷ್ಟು ಗೊತ್ತಾ?

ಪ್ರದಾ : Tulu Times | ಇಟಾಲಿಯನ್ ಲಕ್ಸುರಿ ಫ್ಯಾಷನ್ ಬ್ರ್ಯಾಂಡ್ ಪ್ರದಾ ಮತ್ತೊಮ್ಮೆ ಭಾರತದ ಸಂಸ್ಕೃತಿ ಮತ್ತು ದಿನನಿತ್ಯದ ಅಭ್ಯಾಸಗಳಿಂದ ಪ್ರೇರಣೆ ಪಡೆದಿದೆ. ಕಳೆದ ವರ್ಷ ಕೊಲ್ಹಾಪುರಿ ಚಪ್ಪಲಿಗೆ ಸಂಬಂಧಿಸಿದ ವಿವಾದದ ಬಳಿಕ, ಈ ಬಾರಿ ಭಾರತದಲ್ಲಿ ಅತಿ ಜನಪ್ರಿಯವಾದ ಚಹಾ ಸಂಸ್ಕೃತಿಯಿಂದ ಪ್ರೇರಿತವಾದ ಪರಿಮಳವನ್ನು ಬಿಡುಗಡೆ ಮಾಡಿದೆ. ಪ್ರದಾದ Les Infusions ಸಂಗ್ರಹದ ಭಾಗವಾಗಿರುವ ಈ ಯುನಿಸೆಕ್ಸ್ ಪರಿಮಳಕ್ಕೆ “Infusion de Santal Chai Eau de Parfum” ಎಂದು ಹೆಸರಿಡಲಾಗಿದೆ. ಈ ಪರಿಮಳದಲ್ಲಿ ಕ್ರೀಮಿ ಚಂದನ ಸುವಾಸನೆಯ ಜೊತೆಗೆ, ಮಸಾಲೆ ವಾಸನೆ, ಸಿಟ್ರಸ್ ಸ್ಪರ್ಶ ಮತ್ತು ಏಲಕ್ಕಿಯ ಸುಗಂಧ ಮಿಶ್ರಣವಾಗಿದೆ.

ಭಾರತೀಯ ಪರಂಪರೆಗಳಿಗೆ ಜಾಗತಿಕ ಮಟ್ಟದಲ್ಲಿ ಸಿಗುತ್ತಿರುವ ಮನ್ನಣೆ ;

ಪ್ರದಾದ ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ಪರಿಮಳದ ಬೆಲೆ ಸುಮಾರು 190 ಡಾಲರ್, ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು ₹17,000.‌ ಈಪರಿಮಳದ ಬಾಟಲ್ ವಿನ್ಯಾಸವೂ ಗಮನ ಸೆಳೆಯುತ್ತಿದ್ದು, ಬ್ರೌನ್ ಬಣ್ಣದ ಗಾಜಿನ ಬಾಟಲ್, ಅದರ ಮೇಲೆ ಕ್ಯಾಮೆಲ್ ಬಣ್ಣದ ಸಾಫಿಯಾನೊ ಲೆದರ್ ಕ್ಯಾಪ್ , ಇದು ಒಮ್ಮೆ ಬಿಸಿ ಚಹಾ ಕಪ್‌ನ ಆರಾಮದ ಭಾವನೆ ನೀಡುವಂತೆ ರೂಪಿಸಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಬಿಡುಗಡೆ ಘೋಷಿಸಿದ ಪ್ರದಾ, “A new Infusion, stirred differently. Meet Infusion de Santal Chai” ಎಂದು ಬರೆದಿತ್ತು.
ಈ ಘೋಷಣೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು, “OMG, try ಮಾಡಬೇಕು… ಚಹಾ ವಾಸನೆ ಅಂದ್ರೆ ಸೂಪರ್!” ಎಂದು ಉತ್ಸಾಹ ತೋರಿಸಿದರೆ, ಇನ್ನೂ ಕೆಲವರು ಭಾರತೀಯ ಪರಂಪರೆಗಳಿಗೆ ಜಾಗತಿಕ ಮಟ್ಟದಲ್ಲಿ ಸಿಗುತ್ತಿರುವ ಮನ್ನಣೆಯನ್ನು ಉಲ್ಲೇಖಿಸಿದರು. “ಕೊಲ್ಹಾಪುರಿ ಚಪ್ಪಲಿ, ಪೈಠಣಿ, ಆಹಾರ ಪದಾರ್ಥಗಳು, ಚಹಾ  ಭಾರತೀಯ ಉತ್ಪನ್ನಗಳು ಜಗತ್ತಿಗೆ ಉಪಯುಕ್ತ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ಕೈಗಾರರೊಂದಿಗೆ ಸಂವಾದ ;

ಪ್ರದಾದ ಕೊಲ್ಹಾಪುರಿ ಚಪ್ಪಲಿ ವಿವಾದವನ್ನು ಮತ್ತೆ ನೆನಪಿಗೆ ಬರುತ್ತಿದೆ. 2025ರಲ್ಲಿ, ಪ್ರದಾ ತನ್ನ ಸಮ್ಮರ್ ಕಲೆಕ್ಷನ್‌ನಲ್ಲಿ ಪರಂಪರಾ ಕೊಲ್ಹಾಪುರಿ ವಿನ್ಯಾಸಗಳನ್ನು ನಕಲು ಮಾಡಿದೆ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ವಿವಾದದ ಬಳಿಕ, ಪ್ರದಾ ಭಾರತೀಯ ಕೈಗಾರರೊಂದಿಗೆ ಸಂವಾದ ನಡೆಸಿ, ಡಿಸೆಂಬರ್‌ನಲ್ಲಿ ಮಹಾರಾಷ್ಟ್ರದ LIDCOM ಮತ್ತು ಕರ್ನಾಟಕದ LIDKAR ಜೊತೆ “Prada Made in India – Inspired by Kolhapuri Chappals” ಯೋಜನೆಯಡಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿತು. ಈ ಯೋಜನೆಯ ಉದ್ದೇಶ ಕೈಗಾರಿಕೆಯನ್ನು ಆಧುನಿಕ ವಿನ್ಯಾಸದೊಂದಿಗೆ ಸಂಯೋಜಿಸುವುದಾಗಿತ್ತು.

After Kolhapuri, Prada turns to ‘desi’ inspiration again! Do you know how much the cardamom tea fragrance costs? – ತುಳು ಟೈಮ್ಸ್

ಇದನ್ನೂ ಓದಿ :Bangalore : ಬೆಂಗಳೂರಿನಲ್ಲಿ ಹೀಗೊಂದು ಅಮಾನವೀಯ ಹಲ್ಲೆ : ಕೇಸ್ ದಾಖಲು

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Md1OEd9glA4?si=vaCnFWTwlhJXIHLB

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page