ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕಾಣೆಯಾಗಿದ್ದ ಬಾಲಕನನ್ನು ಸುರಕ್ಷಿತವಾಗಿ ಪತ್ತೆ ಹಚ್ಚಿದ ಗಂಗೊಳ್ಳಿ ಪೊಲೀಸರು

ಕುಂದಾಪುರ : Tulu Times | ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಜ್ಜಾಡಿ ಗ್ರಾಮದ ಬೆಂಗೆರೆ ಪ್ರದೇಶದಲ್ಲಿ ಕಾಣೆಯಾಗಿದ್ದ 10 ವರ್ಷದ ಬಾಲಕನನ್ನು ಗಂಗೊಳ್ಳಿ ಪೊಲೀಸರು ಸಾರ್ವಜನಿಕರ ಸಹಕಾರದೊಂದಿಗೆ ಸುರಕ್ಷಿತವಾಗಿ ಪತ್ತೆ ಹಚ್ಚಿದ್ದಾರೆ. ಕಾಣೆಯಾಗಿದ್ದ ಬಾಲಕನನ್ನು ಸಮೃದ್ಧ ಎಂದು ಗುರುತಿಸಲಾಗಿದ್ದು, ಆತ ಗುಜ್ಜಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿದ್ದ, ಜನವರಿ 7ರ ಸಂಜೆ ಬೆಂಗೆರೆ ನಾಗ ದೇವಸ್ಥಾನದ ಬಳಿ ಆಟವಾಡಲು ಹೋಗಿದ್ದ ಸಮೃದ್ಧ ಮನೆಗೆ ಮರಳದೇ ಇದ್ದುದರಿಂದ ಆತಂಕ ಉಂಟಾಗಿತ್ತು. ಬಾಲಕನೊಂದಿಗೆ ವಾಸವಾಗಿರುವ ಮಾವ ವಸಂತ ಪೂಜಾರಿ ಅವರು ತಡ ಸಂಜೆಗೂ ಬಾಲಕ ಪತ್ತೆಯಾಗದ ಹಿನ್ನೆಲೆಯಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ಸ್ವೀಕರಿಸಿದ ತಕ್ಷಣ ಗಂಗೊಳ್ಳಿ ಪೊಲೀಸ್ ಠಾಣಾ ನಿರೀಕ್ಷಕ ಪವನ್ ನಾಯಕ್ ಅವರು ಕುಂದಾಪುರ ಉಪ ವಿಭಾಗದ ಡಿವೈಎಸ್‌ಪಿ ಎಚ್.ಡಿ. ಕುಲಕರ್ಣಿ ಹಾಗೂ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಬಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ಆರಂಭಿಸಿದರು.

ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಿದ ಬಳಿಕ, ಬಾಲಕನು ತನ್ನ ಮನೆಯ ಸುಮಾರು 250 ಮೀಟರ್ ದೂರದಲ್ಲಿರುವ ಬಂಡೆಯೊಂದರ ಕೆಳಗಿನ ಗುಹೆಯಂತಿರುವ ಜಾಗದಲ್ಲಿ ಮಲಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಾಲಕನಿಗೆ ಯಾವುದೇ ಗಾಯವಾಗದೇ ಸುರಕ್ಷಿತವಾಗಿ ರಕ್ಷಿಸಿ, ಪಾಲಕರಿಗೆ ಹಸ್ತಾಂತರಿಸಲಾಗಿದೆ. ಗಂಗೊಳ್ಳಿ ಪೊಲೀಸರ ಸಮಯೋಚಿತ ಕ್ರಮ ಹಾಗೂ ಸಾರ್ವಜನಿಕರ ಸಹಕಾರದಿಂದ ಬಾಲಕನು ಸುರಕ್ಷಿತವಾಗಿ ಮನೆಗೆ ಮರಳಲು ಸಾಧ್ಯವಾಯಿತು ಎಂಬುವುದು ವರದಿಯಾಗಿದೆ.

Gangolli police safely locate missing boy – ತುಳು ಟೈಮ್ಸ್

ಇದನ್ನೂ ಓದಿ :ಬೀದಿನಾಯಿಗಳ ಹಾವಳಿ ಪ್ರಕರಣ ಬಗ್ಗೆ ಕೋರ್ಟ್ ಅಭಿಪ್ರಾಯಕ್ಕೆ ನಟಿ ರಮ್ಯಾ ಟಾಂಗ್!

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Md1OEd9glA4?si=vaCnFWTwlhJXIHLB

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page