ಬ್ರೇಕಿಂಗ್ ನ್ಯೂಸ್
ಕರಾವಳಿತುಳು ಟಾಕೀಸ್

BBK12 Update: ತಪ್ಪು ಮಾಡಿಯೂ ಜೋಡೆತ್ತುಗಳ ದರ್ಬಾರ್‌.! ಒಂಚೂರು ಹೆದ್ರಿಲ್ಲ ಶೆಟ್ರು

Biggboss Kannada: ಕನ್ನಡ ಬಿಗ್‌ಬಾಸ್‌ ಮನೆಯಲ್ಲಿ ದಿನಕ್ಕೊಂದರಂತೆ ಟ್ವಿಸ್ಟ್‌ಗಳು ಸಾಗ್ತಿದೆ. ಮುಂಬೈನಲ್ಲಿ ಹುಟ್ಟಿ ಬೆಳೆದ ತುಳುನಾಡಿನ ಹುಡುಗಿ ರಕ್ಷತಾ ಶೆಟ್ಟಿ ದೊಡ್ಮನೆಯಲ್ಲಿ ನಿರೀಕ್ಷೆಗೂ ಮೀರಿ ಆಟ ಆಡ್ತಿದ್ದಾರೆ. ಕ್ಯೂಟ್‌, ಲವ್ಲಿ, ರೆಬೆಲ್‌ ಆಗಿ ಕಾಣಿಸಿಕೊಳ್ಳುವ ಕೃಷ್ಣಸುಂದರಿ ಎಲ್ರಿಗೂ ಇಷ್ಟವಾಗ್ತಿದ್ದಾರೆ.

ಶೆಟ್ರು ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಆಟ ಆಡ್ತಿದ್ದಾರೆ. ಇದನ್ನು ನೋಡಿ ಅಶ್ವಿನಿ ಹಾಗೂ ಜಾನ್ವಿ ಹೊಟ್ಟೆ ಉರಿದುಕೊಳ್ತಿರೋದು ಸ್ಪಷ್ಟವಾಗುತ್ತಿದೆ. ಯಾರಿಗೂ ಡೋಂಟ್‌ ಕೇರ್‌ ಅನ್ನದ ರಕ್ಷಿತಾ ಅವರನ್ನು ತುಳಿಯಲು ಜಾನ್ವಿ, ಅಶ್ವಿನಿ ಪಣ ತೊಟ್ಟಂತೆ ಇದೆ.

ದೊಡ್ಮನೆಯ ಜೋಡೆತ್ತು ಅಶ್ವಿನಿ ಜಾನ್ವಿ
ಸದಾ ಜೋಡುತ್ತೆಗಳ ರೀತಿ ಇರೋ ಅಶ್ವಿನಿ ಜಾನ್ವಿ ರಕ್ಷಿತಾ ಅವರನ್ನು ಟೀಕಿಸೋದೆ ಆಟ ಅಂದ್ಕೊಂಡಂತಿದೆ. ರಕ್ಷಿತಾ ಶೆಟ್ಟಿ ಹೇಗೇಗೋ ಆಡುತ್ತಿದ್ದಾರೆ ಕಥೆ ಕಟ್ಟಲು ಮುಂದಾಗಿದ್ದಾರೆ ಅಶ್ವಿನಿ. ಕೆಲದಿನಗಳ ಹಿಂದೆ ಈ ಜೋಡೆತ್ತುಗಳು ರಕ್ಷಿತಾ ಅವರು ಟಾಯ್ಲೆಟ್‌ ಬಾತ್‌ರೂಮ್‌ನಲ್ಲಿ ಹೇಗೇಗೋ ಆಡ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು. ಅದ್ರ ಮುಂದುವರಿದ ಭಾಗವಾಗಿ ಬೆಡ್‌ರೂಮ್‌ನಲ್ಲಿ ಗೆಜ್ಜೆ ಸದ್ದು ಕೇಳಿಸಿದೆ.

ಜಾನ್ವಿ – ಅಶ್ವಿನಿ ಡ್ರಾಮಾ ಕ್ವೀನ್ಸ್‌
ಅಶ್ವಿನಿ ಹಾಗೂ ಜಾನ್ವಿ ಕುತಂತ್ರವನ್ನು ಬಯಲು ಮಾಡೋದಕ್ಕೆ ರಕ್ಷಿತಾ ಮುಂದಾಗಿದ್ದಾರೆ. ರಾತ್ರಿ ವೇಳೆ ಗೆಜ್ಜೆ ಸದ್ದು ಮಾಡಿ ಜಾನ್ವಿ ಹಾಗೂ ಅಶ್ವಿನಿ ಡ್ರಾಮಾ ಕ್ರಿಯೇಟ್‌ ಮಾಡಿದ್ದರು. ಆ ವೇಳೆ ಬುದ್ಧಿವಂತಿಕೆ ಮೆರೆದ ರಕ್ಷಿತಾ ಬೆಡ್‌ರೂಮ್‌ನಿಂದ ಎಲ್ರೂ ಹೊರಹೋಗುತ್ತಿದ್ದಂತೆ ಮೆಲ್ಲನೆ ಬಂದು ಅಶ್ವಿನಿ ಅವರ ಬೆಡ್‌ಶೀಟ್‌ ಕೆಳಗೆ ಹುಡುಕಾಡಿದ್ದಾರೆ. ಈ ವೇಳೆ ಗೆಜ್ಜೆ ಪತ್ತೆಯಾಗಿದೆ. ಗೆಜ್ಜೆಯನ್ನು ಎತ್ತಿಕೊಂಡು ಬಂದು ಗಿಲ್ಲಿ ಕೈಯಲ್ಲಿ ಕೊಟ್ಟು ಸತ್ಯವನ್ನು ವಿವರಿಸಿದ್ದಾರೆ.

ಈ ಗೆಜ್ಜೆ ಶಬ್ದ ಮಾಡಿದ್ದು ರಕ್ಷಿತಾ ಎಂದು ಗಿಲ್ಲಿ ಅಂದುಕೊಂಡಿದ್ರು. ಆದರೆ, ಈ ಕೆಲಸ ಮಾಡಿದ್ದು ಜಾನ್ವಿ ಎಂಬ ವಿಚಾರ ತಿಳಿದು ಅವರಿಗೆ ಶಾಕ್ ಆಗಿದೆ. ಆ ಬಳಿಕ ಜಾನ್ವಿ – ಅಶ್ವಿನಿ ಬೆಡ್​ಗೆ ತೆರಳಿ ಗೆಜ್ಜೆಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಅದು ಎಲ್ಲಿಯೂ ಸಿಗಲಿಲ್ಲ. ‘ಹೋದ್ರೆ ಹೋಯ್ತು ಬಿಡು. ನಾವಾಗೇ ಯಾರ ಬಳಿಯೂ ಅದನ್ನು ಕೇಳುವುದು ಬೇಡ’ ಎಂದು ಜಾನ್ವಿ ಬಳಿ ಅಶ್ವಿನಿ ಹೇಳಿದ್ದಾರೆ. ಈ ಮೂಲಕ ಇಬ್ಬರಿಗೂ ರಕ್ಷಿತಾ ಮಣ್ಣು ಮುಕ್ಕಿಸಿದ್ದಾರೆ.

 

ರಕ್ಷಿತಾ ಮೇಲೆ ಮುಗಿಬಿದ್ದರು.!
ಈಗ ಅಶ್ವಿನಿ ಹಾಗೂ ರಕ್ಷಿತಾ ಮಧ್ಯೆ ಮತ್ತೆ ಕಿತ್ತಾಟ ಮುಂದುವರಿದಿದೆ. ರಕ್ಷಿತಾ ಅತಿಯಾಗಿ ಆಡುತ್ತಿದ್ದಾಳೆ ಎಂದು ಜಾನ್ವಿಗೆ ಅನಿಸಿದೆ. ನಾಮಿನೇಶನ್‌ ವಿಚಾರ ಕೂಡ ಚರ್ಚೆಯಾಗಿದೆ. ಈ ಬಗ್ಗೆ ಅಶ್ವಿನಿ ಹಾಗೂ ಜಾನ್ವಿ ಚರ್ಚೆ ಮಾಡಿ ರಕ್ಷಿತಾ ಮೇಲೆ ಇಬ್ಬರೂ ಮುಗಿ ಬೀಳಲು ಪ್ರಯತ್ನಿಸಿದ್ದಾರೆ. ಇಂದಿನ ಎಪಿಸೋಡ್‌ನ ಪ್ರೊಮೋವನ್ನು ಕಲರ್ಸ್‌ ಕನ್ನಡ ಪೋಸ್ಟ್‌ ಮಾಡಿದೆ.

‘ಮುಚ್ಕೊಂಡು ಹೋಗು’ ಎಂದು ಅಶ್ವಿನಿ
ಅಶ್ವಿನಿ-ಜಾನ್ವಿ ಕುತಂತ್ರಕ್ಕೆ ರಕ್ಷಿತಾ ಹೆದರಲೇ ಇಲ್ಲ. ‘ಮುಚ್ಕೊಂಡು ಹೋಗು’ ಎಂದು ಅಶ್ವಿನಿ ಹೇಳಿದಾಗ ‘ನೀವು ದೊಡ್ಡ ನಾಗವಲ್ಲಿ’ ಎಂದು ಜಾನ್ವಿಗೆ ರಕ್ಷಿತಾ ನೇರ ಮಾತುಗಳಲ್ಲಿ ಹೇಳಿದರು. ‘ಈ ನಾಟಕಗಳನ್ನು ಬಾತ್​ರೂಂನಲ್ಲಿ ಇಟ್ಟುಕೋ’ ಎಂದು ಅಶ್ವಿನಿ ರಕ್ಷಿತಾಗೆ ಹೇಳಿದ್ರು. ‘ನಾನು ನೂರು ಬಾರಿ ಹೋಗ್ತೀನಿ. ನಿಮ್ಮ ಮನೆಯ ವಾಶ್​​ರೂಮ್ ಆ’ ಎಂದು ರಕ್ಷಿತಾ ಪ್ರಶ್ನಿಸಿದ್ದಾರೆ. ರಕ್ಷಿತಾ ಗುಂಡಿಗೆ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನು ವಿಕೇಂಡ್‌ನಲ್ಲಿ ಕಿಚ್ಚ ಸುದೀಪ ಅವರು ಅಶ್ವಿನಿ ಮತ್ತು ಜಾನ್ವಿಗೆ ಕ್ಲಾಸ್‌ ತೆಗೆದುಕೊಳ್ಳಬೇಕೆಂದು ವೀಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಅಶ್ವಿನಿದ್ದು ಅತಿಯಾಯಿತು. ಪಾಪ ರಕ್ಷಿತಾ ಅವರನ್ನು ಟಾರ್ಗೆಟ್‌ ಮಾಡ್ತಿದ್ದಾರೆ. ಅಶ್ವಿನಿ ಜಾನ್ವಿಯನ್ನು ಮನೆಯಿಂದಲೇ ಓಡ್ಸಿ ಅಂತಿದ್ದಾರೆ. ರಕ್ಷಿತಾ ಅವರ ಧೈರ್ಯಕ್ಕೆ ನೆಟ್ಟಿಗರು ಭೇಷ್‌ ಅನ್ನುತ್ತಿದ್ದಾರೆ.

ಇದನ್ನೂ ಓದಿ: kanthara chapter1 ನೋಡಿದವರಿಗೆ ಪ್ರತಿಕ್ರಿಯಿಸುವ ಹಕ್ಕಿರುತ್ತದೆ-ರಿಷಬ್ ಶೆಟ್ಟಿ!


ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 31

You cannot copy content of this page