ಬ್ರೇಕಿಂಗ್ ನ್ಯೂಸ್
ಕರ್ನಾಟಕಪುತ್ತೂರುಸುಳ್ಯ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯಗೆ ಸಾಮಾಜಿಕ ಜಾಲತಾಣದಲ್ಲಿ ಶ್ರದ್ದಾಂಜಲಿ ಬರೆದು ಅವಮಾನ!

ಸುಳ್ಯ : Tulu Times | ಸುಳ್ಯ ಶಾಸಕಿಯಾದ  ಭಾಗೀರಥಿ ಮುರುಳ್ಯ ರವರನ್ನು ಬಿಲ್ಲವ ಸಂದೇಶ್ ಎನ್ನುವ ಫೇಸ್ಟುಕ್ ಖಾತೆಯಲ್ಲಿ
ಅವಮಾನ ಮಾಡಿ, ಶ್ರದ್ದಾಂಜಲಿ ಎಂದು ಬರೆದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖಂಡನೆ ವ್ಯಕ್ತವಾಗಿದೆ.

ಮಂಡಲ ಬಿಜೆಪಿ ಆಕ್ರೋಶ !

ಭಾಗೀರಥಿ ಮುರುಳ್ಯ  ಕಡು ಬಡ ಕುಟುಂಬದಿಂದ ಬಂದವರು. ತಮ್ಮ ಸಂಘಟನಾ ಬದ್ಧತೆ ಹಾಗೂ ಕ್ರಿಯಾಶೀಲತೆಯಿಂದ ತಾಲೂಕು ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿ ಜನಸೇವೆ ಸಲ್ಲಿಸಿ ಇದೀಗ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದೀಗ ಇವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ತೀರಾ ಅವಮಾನಕರವಾಗಿ ಬರೆದು ಶ್ರದ್ದಾಂಜಲಿ ಸಲ್ಲಿಸಿರುವುದನ್ನು ಸುಳ್ಯ ಮಂಡಲ ಬಿಜೆಪಿ  ಖಂಡನೆ ವ್ಯಕ್ತಪಡಿಸಿದೆ.
ಈ ಕುರಿತು ಕೂಡಲೇ ಜಿಲ್ಲೆಯ ಪೊಲೀಸ್ ಮುಖ್ಯಸ್ಥರು  ಕ್ರಮವಹಿಸಿ, ಸದ್ರಿ ವ್ಯಕ್ತಿಯ ಮೇಲೆ ಸುಮೊಟೊ ಪ್ರಕರಣ ದಾಖಲಿಸಬೇಕು. ಆತನನ್ನು ಬಂಧಿಸಿ ಜೈಲಿಗಟ್ಟುವ ಕೆಲಸ ಮಾಡಬೇಕು ಎಂದು ಮಂಡಲ ಬಿಜೆಪಿ ಆಗ್ರಹಿಸಿದೆ.

ಯಾರದೋ ವೈಯಕ್ತಿಕ ಖುಷಿಗಾಗಿ ನಿಂದನೆ!

ಭಾಗೀರಥಿ ಮುರುಳ್ಯ ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡುತ್ತಾ, ಬೆನ್ನು ಹಿಡಿದು ಓಡಾಡಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ನಿರಂತರ ಪ್ರಯತ್ನ ಪಡುತ್ತಿದ್ದಾರೆ. ದಲಿತರ ಸಮಸ್ಯೆಗಳಿಗೆ ನಿರಂತರ ಸ್ಪಂದಿಸುತ್ತಿದ್ದಾರೆ.   ಸುಳ್ಯದ ಅಂಬೇಡ್ಕರ್ ಭವನ ಪೂರ್ಣಗೊಳಿಸುವಲ್ಲಿಯೂ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಿರುವಾಗ ದಲಿತ ಶಾಸಕಿಯನ್ನು ಹಾಗೂ ನಮ್ಮ ಪಾರ್ಟಿಯನ್ನು ಅವಮಾನಿಸುವ ಹೀನ  ಪ್ರವೃತ್ತಿ ಯಿಂದ ಸಾಮಾಜಿಕ ಜಾಲತಾಣ ದಲ್ಲಿ ಈ ರೀತಿ ಬರೆದು ಅವಮಾನ ಮಾಡಲಾಗುತ್ತಿದೆ ಎಂದು ಮಂಡಲ ಬಿಜೆಪಿ ತಿಳಿಸಿದೆ.

ಭಾಗೀರಥಿ ಮುರುಳ್ಯ ಬಗ್ಗೆ ನಿಮಗೆ ಎಷ್ಟು ಗೊತ್ತು..?

2023ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ (BJP) ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ ಇವರು, ಕರಾವಳಿ ಕರ್ನಾಟಕದಿಂದ ವಿಧಾನಸಭೆ ಪ್ರವೇಶಿಸಿದ ಮೊದಲ ದಲಿತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜಕೀಯಕ್ಕೆ ಬರುವ ಮೊದಲು ಇವರು ಕೃಷಿ ಕಾರ್ಮಿಕರಾಗಿ ಮತ್ತು ಟೈಲರ್ ಆಗಿ ಕೆಲಸ ಮಾಡಿದ್ದರು. ಬಡತನದ ಹಿನ್ನೆಲೆಯಿಂದ ಬಂದ ಇವರು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು. ಇವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. 2023ರ ಚುನಾವಣೆಯಲ್ಲಿ ಇವರು ಕಾಂಗ್ರೆಸ್‌ನ ಕೃಷ್ಣಪ್ಪ ರಾಮಕುಂಜ ಅವರನ್ನು 30,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಜಯಗಳಿಸಿದ್ದರು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಬಗ್ಗೆ ಬಿಜೆಪಿ ಕಾರ್ಯಕರ್ತರು ಮತ್ತು ಮಹಿಳಾ ಮೋರ್ಚಾ ವತಿಯಿಂದ ದೂರು ದಾಖಲಿಸಲಾಗಿದೆ.

Sullia MLA Bhageerathi Murulya was insulted by a tribute she wrote on social media!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 164

You cannot copy content of this page