ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಉಡುಪಿ ಜಿಲ್ಲೆಯಲ್ಲಿ 7,900ಕ್ಕೂ ಹೆಚ್ಚು ಮಕ್ಕಳಿಗೆ ಇನ್ನೂ ಆಧಾರ್ ಕಾರ್ಡ್ ಇಲ್ಲ

ಉಡುಪಿ : Tulu Times | ಉಡುಪಿ ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಪಡೆಯುವ ಮಕ್ಕಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದ್ದು, ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ 7,904 ಮಕ್ಕಳು ಇನ್ನೂ ಆಧಾರ್ ನೋಂದಣಿಗೆ ಒಳಪಟ್ಟಿಲ್ಲ ಎಂದು ಲಭ್ಯವಿರುವ ಅಂಕಿಅಂಶಗಳು ತಿಳಿಸುತ್ತವೆ.
ಜಿಲ್ಲೆಯಲ್ಲಿ ಒಟ್ಟು 40,233 ಮಕ್ಕಳು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಇವರಲ್ಲಿ 32,329 ಮಕ್ಕಳಿಗೆ ಮಾತ್ರ ಆಧಾರ್ ಕಾರ್ಡ್ ಲಭ್ಯವಾಗಿದೆ. ಉಳಿದ 7,904 ಮಕ್ಕಳಿಗೆ ಆಧಾರ್ ಕಾರ್ಡ್ ಇನ್ನೂ ನೀಡಲಾಗಿಲ್ಲ ಎಂಬುವುದು ವರದಿಯಾಗಿದೆ.

ಮಕ್ಕಳಿಗಾಗಿ ವಿನ್ಯಾಸಗೊಳಿಸಿದ ವಿಶೇಷ ಗುರುತಿನ ಚೀಟಿ ;

ಬಾಲ ಆಧಾರ್ ಕಾರ್ಡ್ ನೀಲಿ ಬಣ್ಣದಲ್ಲಿರುತ್ತದೆ. ಮಗು ಐದು ವರ್ಷ ಪೂರೈಸಿದ ಬಳಿಕ ಕಾರ್ಡ್ ನವೀಕರಣ ಮಾಡುವುದು ಕಡ್ಡಾಯ. ಹಾಗೆಯೇ ಐದು ಮತ್ತು 15 ವರ್ಷ ವಯಸ್ಸಿನ ನಂತರ, ಮಕ್ಕಳು ತಮ್ಮ ಬಯೋಮೆಟ್ರಿಕ್ ವಿವರಗಳನ್ನು ನೀಡಿ ಆಧಾರ್ ಪುನಃ ದೃಢೀಕರಿಸಬೇಕಾಗುತ್ತದೆ.
ಬಾಲ ಆಧಾರ್ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಿದ ವಿಶೇಷ ಗುರುತಿನ ಚೀಟಿಯಾಗಿದ್ದು, ವಯಸ್ಕರಂತೆ ಬಯೋಮೆಟ್ರಿಕ್ ಮಾಹಿತಿ ಅಗತ್ಯವಿಲ್ಲ. ಈ ಕಾರ್ಡ್‌ನಲ್ಲಿ ಮಗುವಿನ ಫೋಟೋ, ಹೆಸರು, ಜನ್ಮ ದಿನಾಂಕ ಮತ್ತು ಪೋಷಕರಲ್ಲೊಬ್ಬರ ಮೂಲ ವಿವರಗಳು ಮಾತ್ರ ಇರುತ್ತವೆ.

ಪೋಷಕರು ಶಾಲಾ ಪ್ರವೇಶ ಸಮಯದಲ್ಲಿ ಆಧಾರ್ ಮಾಡಿಸಬಹುದು ಎಂಬ ಭಾವನೆ ;

ನವಜಾತ ಶಿಶುಗಳನ್ನು ಸೇರಿಸಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೂ ಬಾಲ ಆಧಾರ್ ಲಭ್ಯ. ಇದು ವಿವಿಧ ಸರ್ಕಾರಿ ಯೋಜನೆಗಳ ಲಾಭ ಪಡೆಯಲು, ಆರೋಗ್ಯ ಸೇವೆಗಳಿಗೆ ಪ್ರವೇಶ, ಮಗುವಿನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲು, ಪಾಸ್‌ಪೋರ್ಟ್ ಸೇರಿದಂತೆ ಇತರ ದಾಖಲೆಗಳಿಗಾಗಿ ಅತ್ಯಂತ ಅಗತ್ಯವಾಗಿದೆ. ಅಧಿಕಾರಿಗಳ ಪ್ರಕಾರ, ಕೆಲ ಪೋಷಕರು ಶಾಲಾ ಪ್ರವೇಶ ಸಮಯದಲ್ಲಿ ಆಧಾರ್ ಮಾಡಿಸಬಹುದು ಎಂಬ ಭಾವನೆಯಿಂದ ಅಥವಾ ಆರು ವರ್ಷ ವಯಸ್ಸಿನವರೆಗೆ ಬ್ಯಾಂಕ್ ಖಾತೆ, ಪಾಸ್‌ಪೋರ್ಟ್ ಅಗತ್ಯವಿಲ್ಲ ಎಂಬ ಕಾರಣದಿಂದ ಪ್ರಕ್ರಿಯೆಯನ್ನು ಮುಂದೂಡುತ್ತಿದ್ದಾರೆ ಎನ್ನಲಾಗಿದೆ. More than 7,900 children in Udupi district still do not have Aadhaar cards – ತುಳು ಟೈಮ್ಸ್

ಇದನ್ನೂ ಓದಿ : ಬೀದಿ ನಾಯಿಗಳ ಕುರಿತು ಮರು ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದೇನು ?

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/emwzylibjoc?si=Sca-qvxtKSUITymq

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page