ಉತ್ತರಕನ್ನಡ: Tulu Times | ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಸ್ಸಗದ್ದೆ ಗ್ರಾಮದಲ್ಲಿ ಪೌರೋಹಿತ್ಯ ಮಾಡುತ್ತಿದ್ದ ಪವನ್ ಭಟ್ (24)ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮದುವೆಯಾಗು ಎಂದು ಯುವತಿಗೆ ಒತ್ತಾಯಿಸಿದ್ದ ಯುವಕ!
ತಾನು ಪ್ರೀತಿಸುತ್ತಿದ್ದ ಯುವತಿ ಮದುವೆ ನಿರಾಕರಣೆ ಮಾಡಿದ್ದಾಳೆ ಎಂದು ಮನನೊಂದು ಜೀವ ಕಳೆದುಕೊಂಡಿದ್ದಾರೆ. ಮೃತ ಯುವಕ ಪವನ್ ಭಟ್ ವೃತ್ತಿಯಲ್ಲಿ ಪೌರೋಹಿತ್ಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇದೇ ಊರಿನ ಯುವತಿಯನ್ನು ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಆಕೆಯನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಆದರೆ ಯುವತಿ ನಾನು ನಿಮ್ಮನ್ನು ಮದುವೆಯಾಗಲ್ಲ ಎಂದು ಹೇಳಿ, ಪ್ರೀತಿ ನಿರಾಕರಿಸಿದ್ದಾಳೆ. ಇದರಿಂದ ಮನನೊಂದ ಪವನ್ ಭಟ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಕುರಿತು ಮಾಹಿತಿ ಪಡೆದ ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.
ಮಹಿಳಾ ಉದ್ಯಮಿಗಳಿಗೆ ಸರ್ಕಾರ ಸಿಹಿ ಸುದ್ದಿ!
ಕರ್ನಾಟಕ: ಮಹಿಳಾ ಉದ್ಯಮಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಸ್ವಂತ ಉದ್ಯಮ ಆರಂಭಿಸಲು ಗರಿಷ್ಠ 5 ಕೋಟಿ ರೂ.ವರೆಗೆ 4% ಬಡ್ಡಿಯಲ್ಲಿ ಸಾಲ ಸೌಲಭ್ಯ ನೀಡಲಿದೆ ಕೇವಲ ಶೇ. 4ರಷ್ಟು ಬಡ್ಡಿದರದಲ್ಲಿ ಸಾಲ ಪಡೆಯುವ ಅವಕಾಶ. ಹೊಸ ಉದ್ಯಮ ಸ್ಥಾಪನೆಗೆ ಅಥವಾ ವಿಸ್ತರಣೆಗೆ ರೂ. 5 ಲಕ್ಷದಿಂದ ರೂ.5 ಕೋಟಿವರೆಗೆ ಸಾಲ ಲಭ್ಯವಿರುತ್ತದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಬಡ್ಡಿ ವ್ಯತ್ಯಾಸವನ್ನು ಭರಿಸುತ್ತದೆ.
ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ವಿವರಗಳು ಏನು..?
ಮಹಿಳಾ ಉದ್ಯಮಿಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡುತ್ತಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಇದು ಉತ್ತೇಜನ ನೀಡುತ್ತದೆ. ಈ ಯೋಜನೆಯಡಿ ಮಹಿಳಾ ಉದ್ಯಮಿಗಳು ಕೇವಲ ಶೇ. 4ರಷ್ಟು ನಿವ್ವಳ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಪಡೆಯಬಹುದು. ಇದು ಬಿಡ್ಡಿ ಸಹಾಯಧನ ಯೋಜನೆಯು ಮಹಿಳಾ ಉದ್ಯಮಿಗಳಿಗೆ ವರದಾನವಾಗಿದೆ. ಹಳೆಯ ಉದ್ಯಮವನ್ನು ವಿಸ್ತರಿಸಲು, ರೂ. 5 ಲಕ್ಷದಿಂದ ರೂ. 2 ಕೋಟಿ ರೂ.ವರೆಗೆ ಸಾಲ ನೀಡುತ್ತದೆ. ಇಲ್ಲಿ ಕೇವಲ ಶೇ. 4ರಷ್ಟು ಪರಿಣಾಮಕಾರಿ ಬಡ್ಡಿದರವನ್ನು ಮಾತ್ರ ಪಾವತಿಸಬೇಕು. ಸಾಲವನ್ನು ಕನಿಷ್ಠ ರೂ. 5.00 ಲಕ್ಷದಿಂದ ಗರಿಷ್ಠ ರೂ. 5.00 ಕೋಟಿ (500 ಲಕ್ಷ) ವರೆಗೆ ಪಡೆಯಬಹುದು. ಮಹಿಳಾ ಉದ್ಯಮಿಗಳು ಪಾವತಿಸಬೇಕಾದ ಅಂತಿಮ ಬಡ್ಡಿ ದರ ವಾರ್ಷಿಕ ಶೇ. 4 ಮಾತ್ರ ಆಗಿರುತ್ತದೆ. ಸಾಮಾನ್ಯ ಬಡ್ಡಿದರ ಮತ್ತು ಶೇ. 4ರ ನಡುವಿನ ವ್ಯತ್ಯಾಸದ ಮೊತ್ತವನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿನಿಗಮವು ಸಹಾಯಧನದ ರೂಪದಲ್ಲಿ ಸಂಸ್ಥೆಗೆ ಭರಿಸುತ್ತದೆ. ಸಹಾಯಧನ ಸಾಲ ವಿತರಣೆಯಾದ ದಿನಾಂಕದಿಂದ ಗರಿಷ್ಠ 5 ವರ್ಷಗಳವರೆಗೆ ಮಾತ್ರ ಲಭ್ಯವಿರುತ್ತದೆ. ಈ ಯೋಜನೆಯು ಮೇ 12, 2017ರ ನಂತರ ಮಂಜೂರಾದ ಸಾಲಗಳಿಗೆ ಅನ್ವಯಿಸುತ್ತದೆ.
ಅರ್ಹ ಚಟುವಟಿಕೆಗಳು ಏನು ಅಂತ ನೋಡೋದಾದ್ರೆ, ಆಸ್ಪತ್ರೆಗಳು, ನರ್ಸಿಂಗ್ ಹೋಮ್, ಕಣ್ಣಿನ ಆಸ್ಪತ್ರೆ, ದಂತ ಚಿಕಿತ್ಸಾಲಯಗಳು, ಡಯಾಗ್ನಾಸ್ಟಿಕ್ ಕೇಂದ್ರಗಳು (ಎಕ್ಸರೇ, ಸ್ಕ್ಯಾನಿಂಗ್, ಲ್ಯಾಬ್). ಪ್ರವಾಸೋದ್ಯಮ: ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಕೇಟರಿಂಗ್ ಸೇವೆಗಳು, ತಂತ್ರಜ್ಞಾನ: ಮಾಹಿತಿ ತಂತ್ರಜ್ಞಾನ ಸೇವಾ ಕೇಂದ್ರಗಳು. ಇನ್ನಿತರ ಸೇರಿವೆ.
young-man-who-was-a-priest-commits-suicide-after-being-rejected-by-his-girlfriend- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











