ಬ್ರೇಕಿಂಗ್ ನ್ಯೂಸ್
ಕರ್ನಾಟಕಬೆಳ್ತಂಗಡಿ

ಬೆಳ್ತಂಗಡಿ: 36 ವರ್ಷಗಳಿಂದ ಎಸ್ಕೇಪ್‌ ಆಗಿದ್ದ ಖದೀಮ ಅರೆಸ್ಟ್‌ !

ಬೆಳ್ತಂಗಡಿ: Tulu Times | ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಚಾರ್ಮಾಡಿ ಗೇಟ್ ಬಳಿ ಮೋಹನ್ ಎಂಬಾತನಿಗೆ 1989 ಇಸವಿಯಲ್ಲಿ ಆರೋಪಿಗಳಾದ ಕೊರಗಪ್ಪ ಗೌಡ ಮತ್ತು ರವೀಂದ್ರ ಸೇರಿ ಹಲ್ಲೆ ನಡೆಸಿ, ಆರೋಪಿಗಳು ನ್ಯಾಯಾಲಯಕ್ಕೆ ಬಾರದೆ ತಲೆಮರೆಸಿಕೊಂಡಿದ್ದರು. ಇದೀಗ ಈ ಆರೋಪಿ ಅರೆಸ್ಟ್‌ ಆಗಿದ್ದಾರೆ.

ಪೊಲೀಸರಿಗೆ ಸಿಗದೆ ನಾಪತ್ತೆಯಾಗಿದ್ದ ಆರೋಪಿ!

36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿ ಧರ್ಮಸ್ಥಳ ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೊಮ್ಮಣ್ಣ ಮಗನಾದ ರವೀಂದ್ರ (56) ಬಂಧಿತ ಆರೋಪಿ ಆಗಿದ್ದಾನೆ.  ಇನ್ನು ಸುಮಾರು ವರ್ಷಗಳ ಹಿಂದೆ ಈ  ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 68/1989 ರಂತೆ ಕಲಂ 341,323,326 ಜೊತೆಗೆ 44 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಹೀಗಾಗಿ, ಆರೋಪಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೊಮ್ಮಣ್ಣ ಮಗನಾದ ರವೀಂದ್ರ (56)ಎಂಬಾತ ಪೊಲೀಸರಿಗೆ ಹಾಗೂ ನ್ಯಾಯಾಲಯಕ್ಕೆ ಹಾಜರಾಗದೆ ಎಸ್ಕೇಪ್‌ ಆಗಿದ್ದ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯದಿಂದ ಆರೋಪಿ ಪತ್ತೆಗಾಗಿ ವಾರಂಟ್ ಜಾರಿ ಕೂಡ ಜಾರಿ ಮಾಡಿದ್ದರು.ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ತಂಡದ ಸಿಬ್ಬಂದಿ ಆರೋಪಿಗಾಗಿ ಬಗ್ಗೆ, ವಿವಿಧ ಕಡೆ ಹುಡುಕಾಟ ನಡೆಸುತ್ತಿದ್ದರು. ಆದರೆ ಆರೋಪಿಯ ಸುಳಿವೇ ಸಿಕ್ಕಿರಲಿಲ್ಲ. ಈ ಬಗ್ಗೆ ಮಾಹಿತಿ ಕಳೆಹಾಕಿದಾಗ, ಜ.6 ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರು ಎಂಬಲ್ಲಿ ಇರುವುದು ಗೊತ್ತಾಗಿದೆ. ಅದರಂತೆ ಆರೋಪಿಯನ್ನು ಬಂಧಿಸಿ, ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿಸಲಾಗಿದೆ.

ರವೀಂದ್ರ ಇಷ್ಟು ವರ್ಷ ಎಲ್ಲಿದ್ದ..?

ಆರೋಪಿ ರವೀಂದ್ರ,  12 ವರ್ಷಗಳ ಕಾಲ ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಅನಂತರ, 5 ವರ್ಷ ಬೆಳಗಾವಿಯಲ್ಲಿ ಕೆಲಸ ಮಾಡಿದ್ದಾನೆ. ನಂತರ ಯುವತಿಯೊಬ್ಬಳ ಜೊತೆ ಮದುವೆಯಾಗಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವನ್ನುನೀಡಿದ್ದ. ಮಗಳಿಗೆ ಮದುವೆಯಾಗಿದ್ದು, ಮಗ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.  ರವೀಂದ್ರ ಕೊನೆಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿಗೆ ಬಂದು ಮನೆ ಕಟ್ಟಿ ಡಿ.5 ಕ್ಕೆ ಗೃಹಪ್ರವೇಶ ಮಾಡಿ ವಾಸವಾಗಿದ್ದ. ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ಸಿ.ಕೆ.ರೋಹಿಣಿ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ರವಿ.ಬಿ.ಎಸ್ ನೇತೃತ್ವದಲ್ಲಿ ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ತಂಡದ ಸಿಬ್ಬಂದಿ ವೃಷಭ, ಚರಣ್ ರಾಜ್, ಯೋಗರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Belthangady: Thief who had been on the run for 36 years arrested!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 159

You cannot copy content of this page