ಕರ್ನಾಟಕ: Tulu Times | ಮಹಿಳಾ ಉದ್ಯಮಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಸ್ವಂತ ಉದ್ಯಮ ಆರಂಭಿಸಲು ಗರಿಷ್ಠ 5 ಕೋಟಿ ರೂ.ವರೆಗೆ 4% ಬಡ್ಡಿಯಲ್ಲಿ ಸಾಲ ಸೌಲಭ್ಯ ನೀಡಲಿದೆ.
ಕೇವಲ ಶೇ. 4ರಷ್ಟು ಬಡ್ಡಿದರದಲ್ಲಿ ಸಾಲ ಪಡೆಯುವ ಅವಕಾಶ. ಹೊಸ ಉದ್ಯಮ ಸ್ಥಾಪನೆಗೆ ಅಥವಾ ವಿಸ್ತರಣೆಗೆ ರೂ. 5 ಲಕ್ಷದಿಂದ ರೂ. 5 ಕೋಟಿವರೆಗೆ ಸಾಲ ಲಭ್ಯವಿರುತ್ತದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಬಡ್ಡಿ ವ್ಯತ್ಯಾಸವನ್ನು ಭರಿಸುತ್ತದೆ.
ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ವಿವರಗಳು ಏನು..?
ಮಹಿಳಾ ಉದ್ಯಮಿಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡುತ್ತಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಇದು ಉತ್ತೇಜನ ನೀಡುತ್ತದೆ. ಈ ಯೋಜನೆಯಡಿ ಮಹಿಳಾ ಉದ್ಯಮಿಗಳು ಕೇವಲ ಶೇ. 4ರಷ್ಟು ನಿವ್ವಳ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಪಡೆಯಬಹುದು. ಇದು ಬಡ್ಡಿ ಸಹಾಯಧನ ಯೋಜನೆಯು ಮಹಿಳಾ ಉದ್ಯಮಿಗಳಿಗೆ ವರದಾನವಾಗಿದೆ. ಹಳೆಯ ಉದ್ಯಮವನ್ನು ವಿಸ್ತರಿಸಲು, ರೂ. 5 ಲಕ್ಷದಿಂದ ರೂ. 2 ಕೋಟಿ ರೂ.ವರೆಗೆ ಸಾಲ ನೀಡುತ್ತದೆ. ಇಲ್ಲಿ ಕೇವಲ ಶೇ. 4ರಷ್ಟು ಪರಿಣಾಮಕಾರಿ ಬಡ್ಡಿದರವನ್ನು ಮಾತ್ರ ಪಾವತಿಸಬೇಕು. ಸಾಲವನ್ನು ಕನಿಷ್ಠ ರೂ. 5.00 ಲಕ್ಷದಿಂದ ಗರಿಷ್ಠ ರೂ. 5.00 ಕೋಟಿ (500 ಲಕ್ಷ) ವರೆಗೆ ಪಡೆಯಬಹುದು. ಮಹಿಳಾ ಉದ್ಯಮಿಗಳು ಪಾವತಿಸಬೇಕಾದ ಅಂತಿಮ ಬಡ್ಡಿ ದರ ವಾರ್ಷಿಕ ಶೇ. 4 ಮಾತ್ರ ಆಗಿರುತ್ತದೆ. ಸಾಮಾನ್ಯ ಬಡ್ಡಿದರ ಮತ್ತು ಶೇ. 4ರ ನಡುವಿನ ವ್ಯತ್ಯಾಸದ ಮೊತ್ತವನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಸಹಾಯಧನದ ರೂಪದಲ್ಲಿ ಸಂಸ್ಥೆಗೆ ಭರಿಸುತ್ತದೆ. ಸಹಾಯಧನ ಸಾಲ ವಿತರಣೆಯಾದ ದಿನಾಂಕದಿಂದ ಗರಿಷ್ಠ 5 ವರ್ಷಗಳವರೆಗೆ ಮಾತ್ರ ಲಭ್ಯವಿರುತ್ತದೆ. ಈ ಯೋಜನೆಯು ಮೇ 12, 2017ರ ನಂತರ ಮಂಜೂರಾದ ಸಾಲಗಳಿಗೆ ಅನ್ವಯಿಸುತ್ತದೆ.
ಅರ್ಹ ಚಟುವಟಿಕೆಗಳು ಏನು ಅಂತ ನೋಡೋದಾದ್ರೆ, ಆಸ್ಪತ್ರೆಗಳು, ನರ್ಸಿಂಗ್ ಹೋಮ್, ಕಣ್ಣಿನ ಆಸ್ಪತ್ರೆ, ದಂತ ಚಿಕಿತ್ಸಾಲಯಗಳು, ಡಯಾಗ್ನಾಸ್ಟಿಕ್ ಕೇಂದ್ರಗಳು (ಎಕ್ಸರೇ, ಸ್ಕ್ಯಾನಿಂಗ್, ಲ್ಯಾಬ್). ಪ್ರವಾಸೋದ್ಯಮ: ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಕೇಟರಿಂಗ್ ಸೇವೆಗಳು. ತಂತ್ರಜ್ಞಾನ: ಮಾಹಿತಿ ತಂತ್ರಜ್ಞಾನ ಸೇವಾ ಕೇಂದ್ರಗಳು. ಇನ್ನಿತರ ಸೇರಿವೆ.
ಅರ್ಜಿ ಸಲ್ಲಿಸುವುದು ಹೇಗೆ?
ಉದ್ಯಮದ ವಿವರವಾದ ಯೋಜನಾ ವರದಿ ಸಿದ್ಧಪಡಿಸಿಕೊಳ್ಳಿ. ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಜಿಲ್ಲೆಯ ಹತ್ತಿರದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಶಾಖೆಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಥವಾ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಚೇರಿಯನ್ನು ಸಂಪರ್ಕಿಸಬಹುದು.
ಅಗತ್ಯವಿರುವ ದಾಖಲೆಗಳು ನೋಡೋದಾದ್ರೆ, ಗುರುತಿನ ಚೀಟಿ: ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಪಾಸ್‌ಪೋರ್ಟ್.
ವಿಳಾಸದ ಪುರಾವೆ: ರೇಷನ್ ಕಾರ್ಡ್ ಅಥವಾ ಇತ್ತೀಚಿನ ವಿದ್ಯುತ್ ಬಿಲ್. ಪಾನ್ ಕಾರ್ಡ್: ಉದ್ಯಮಿ ಮತ್ತು ಉದ್ಯಮದ ಹೆಸರಿನಲ್ಲಿರುವುದು ಕಡ್ಡಾಯ. ಭಾವಚಿತ್ರ: ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳು. ಉದ್ಯಮ ನೋಂದಣಿ ಪ್ರಮಾಣಪತ್ರ/ ಜಿಎಸ್ ಟಿ ನೋಂದಣಿ ಪ್ರಮಾಣಪತ್ರ. ಇನ್ನು ಹೆಚ್ಚಿನ ಮಾಹಿತಿ ನೋಡೋದಾದ್ರೆ ಸಂಬಂಧಪಟ್ಟ ವೆಬ್ ಸೈಟ್ ನೋಡಿ ಮಾಹಿತಿ ಪಡೆದುಕೊಳ್ಳಿ.
Good news for women entrepreneurs from the Karnataka government! What is…?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











