ಬ್ರೇಕಿಂಗ್ ನ್ಯೂಸ್
ಬೆಳ್ತಂಗಡಿ

ಪಿಲಿಗೂಡು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 101 ಎಳನೀರು ಅಭಿಷೇಕ, ನವಕ ಕಲಶಾಭಿಷೇಕ, ಲಲಿತಾ ಸಹಸ್ರನಾಮ ಹೋಮ

ಬೆಳ್ತಂಗಡಿ : Tulu Times | ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಪಿಲಿಗೂಡು ಇಲ್ಲಿನ, ಪೌಷ ಕೃಷ್ಣ 12ಯು, ಜನವರಿ 15 ನೇ ಗುರುವಾರ, ಬೆಳಿಗ್ಗೆ 9.00ರಿಂದ ಶ್ರೀ ಕ್ಷೇತ್ರದಲ್ಲಿ, ವೇದಮೂರ್ತಿ ಕೆ.ಯಂ. ಸುಬ್ರಹ್ಮಣ್ಯ ಮುಚ್ಚಿನ್ನಾಯ ಕಣಿಯೂರು ಇವರ ವೈಧಿಕ ನೇತೃತ್ವದಲ್ಲಿ, 101 ಎಳನೀರು ಅಭಿಷೇಕ, ನವಕ ಕಲಶಾಭಿಷೇಕ, ಲಲಿತಾ ಸಹಸ್ರನಾಮ ಹೋಮ ನಡೆಯಲಿದೆ.

ಇಲ್ಲಿ ಪೂರ್ವಾಹ್ನ ಗಂಟೆ 10.30ರಿಂದ 11.30ರವರೆಗೆ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ, ಪಿಲಿಗೂಡು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 12.00ಕ್ಕೆ ಪೂರ್ಣಾಹುತಿ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು.

ರಾತ್ರಿ ಗಂಟೆ 7.00ರಿಂದ ಮಂಗಳೂರು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರಿಂದ ಕಂಚಿಲ್ದ ಪರಕೆ, ಎಂಬ ಯಕ್ಷಗಾನ ಬಯಲಾಟವನ್ನು ಆಡಿತೋರಿಸಲಿರುವರು. ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಪಿಲಿಗೂಡಿನ ಪದ್ಮನಾಭ ಹಾಗೂ ಅವರ ಪತ್ನಿ, ಸಹೋದರರು, ಮಕ್ಕಳು, ಶ್ರೀ ಚಾಮುಂಡೇಶ್ವರಿ ಮಿತ್ರಮಂಡಳಿ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಹಾಗೂ ಊರ ಸಮಸ್ತ ಜನರು ಪ್ರೀತಿಯ ಆಹ್ವಾನವನ್ನು ನೀಡುತ್ತಿದ್ದಾರೆ.

101 coconut water abhisheka, Navaka Kalashabhisheka, Lalita Sahasranama Homa at Piligudu Sri Chamundeshwari Temple – ತುಳು ಟೈಮ್ಸ್

ಇದನ್ನೂ ಓದಿ :Food : ಚರ್ಮದ ಆರೋಗ್ಯ ಮತ್ತು ದೃಷ್ಟಿಗೆ ಉತ್ತಮ : ಚಳಿಗಾಲಕ್ಕೆ ಆರೋಗ್ಯಕರ ಫುಡ್

======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=Sca-qvxtKSUITymq

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page