ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಇದೇನಿದು ಫ್ರಾಂಚೈಸಿ ಯೋಜನೆ 2.0 ? ಅಂಚೆ ಇಲಾಖೆಯ ಈ ಹೊಸ ಅವಕಾಶದ ಬಗ್ಗೆ ತಿಳಿದಿರಲಿ

ಅಂಚೆ ಇಲಾಖೆ : Tulu Times | ಭಾರತೀಯ ಅಂಚೆ ಇಲಾಖೆ ತನ್ನ ಸೇವೆಗಳನ್ನು ಜನರಿಗೆ ಇನ್ನಷ್ಟು ಸುಲಭವಾಗಿ, ವೇಗವಾಗಿ ಮತ್ತು ವ್ಯಾಪಕವಾಗಿ ತಲುಪಿಸುವ ಉದ್ದೇಶದಿಂದ ‘ಫ್ರಾಂಚೈಸಿ ಯೋಜನೆ 2.0’ ಅನ್ನು ಜಾರಿಗೆ ತಂದಿದೆ. ಈ ಹೊಸ ಯೋಜನೆ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವುದರ ಜೊತೆಗೆ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಅಂಚೆ ಸೇವೆಗಳ ವಿಸ್ತರಣೆಗೆ ಸಹಕಾರಿಯಾಗಲಿದೆ.

ಸ್ವಯಂ ಉದ್ಯೋಗದ ಅವಕಾಶಗಳನ್ನು ಕಲ್ಪಿಸುತ್ತದೆ ;

ಇದು ‘ಆತ್ಮನಿರ್ಭರ ಭಾರತ’ ಮತ್ತು ‘ಡಿಜಿಟಲ್ ಇಂಡಿಯಾ’ ಅಭಿಯಾನದ ಅಡಿಯಲ್ಲಿ ಅಂಚೆ ಸೇವೆಗಳಿಲ್ಲದ ಪ್ರದೇಶಗಳಲ್ಲಿ ಜನಸಾಮಾನ್ಯರಿಗೆ ಸ್ವಯಂ ಉದ್ಯೋಗದ ಅವಕಾಶಗಳನ್ನು ಕಲ್ಪಿಸುತ್ತದೆ. ಅತ್ಯಂತ ಕಡಿಮೆ ಹೂಡಿಕೆಯೊಂದಿಗೆ ಸಣ್ಣ ಉದ್ಯಮಿಗಳು ಅಥವಾ ವ್ಯಕ್ತಿಗಳು ಅಂಚೆ ಚೀಟಿಗಳ ಮಾರಾಟ, ಸ್ಪೀಡ್ ಪೋಸ್ಟ್ ಬುಕಿಂಗ್, ಇ-ಕಾಮರ್ಸ್ ಪಾರ್ಸೆಲ್ ಮತ್ತು ಹಣಕಾಸು ಸೇವೆಗಳನ್ನು ಒದಗಿಸುವ ಮೂಲಕ ಆಕರ್ಷಕ ಕಮಿಷನ್ ಗಳಿಸಬಹುದಾಗಿದೆ.

ಅರ್ಜಿದಾರರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ;

ಸಾಂಪ್ರದಾಯಿಕ ಅಂಚೆ ಸೇವೆಗಳ ಜೊತೆಗೆ ಇ-ಕಾಮರ್ಸ್ ಡೆಲಿವರಿ ಮತ್ತು ಇತರ ಆಧುನಿಕ ಸೇವೆಗಳನ್ನು ಸೇರ್ಪಡೆಗೊಳಿಸಿರುವುದರಿಂದ, ಫ್ರಾಂಚೈಸಿ ಮಾಲೀಕರು ಹೆಚ್ಚಿನ ಆದಾಯವನ್ನು ಗಳಿಸಲು ಉತ್ತಮ ಅವಕಾಶವಿದೆ. ಈ ಫ್ರಾಂಚೈಸಿ ಪಡೆಯಲು ಅರ್ಜಿದಾರರು ಕನಿಷ್ಠ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಅವರಿಗೆ ಕಂಪ್ಯೂಟರ್ ಜ್ಞಾನ ಮತ್ತು ಸ್ಥಳೀಯ ಭಾಷೆಯ ಮೇಲೆ ಉತ್ತಮ ಹಿಡಿತವಿರಬೇಕು. ಇದಕ್ಕಾಗಿ ಸಣ್ಣ ಕಿರಾಣಿ ಅಂಗಡಿ ಅಥವಾ ಟೀ ಅಂಗಡಿ ಮಾಲೀಕರೂ ಸಹ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿದಾರರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು, ಆದರೆ ಈ ಯೋಜನೆಗೆ ಯಾವುದೇ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿಲ್ಲ. ಈ ಯೋಜನೆಯು ಎಪಿಟಿ 2.0 ಎಂಬ ಸುಧಾರಿತ ತಾಂತ್ರಿಕ ವೇದಿಕೆಯನ್ನು ಬಳಸಿಕೊಂಡು ಡಿಜಿಟಲ್ ಪಾವತಿ, ರಿಯಲ್-ಟೈಮ್ ಟ್ರ್ಯಾಕಿಂಗ್ ಮತ್ತು ಸ್ಮಾರ್ಟ್ ಲಾಕರ್‌ಗಳಂತಹ ಆಧುನಿಕ ಸೌಲಭ್ಯಗಳನ್ನು ನೀಡುತ್ತದಲ್ಲದೆ, ಸರ್ಕಾರದ ಮಾನ್ಯತೆಯೊಂದಿಗೆ ಉದ್ಯೋಗಾಕಾಂಕ್ಷಿಗಳಿಗೆ ಸುಸ್ಥಿರ ಆದಾಯವನ್ನು ಖಚಿತಪಡಿಸುತ್ತದೆ. ಸೇವೆಯ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ, ಈಗ ಹೊಸ ನಗರ ಪ್ರದೇಶಗಳು, ದೊಡ್ಡ ಟೌನ್‌ಶಿಪ್‌ಗಳು, ಕೈಗಾರಿಕಾ ವಲಯಗಳು ಮತ್ತು ಶೈಕ್ಷಣಿಕ ಕ್ಯಾಂಪಸ್‌ಗಳಲ್ಲಿಯೂ ಫ್ರಾಂಚೈಸಿ ಆರಂಭಿಸಲು ಅವಕಾಶ ನೀಡಲಾಗಿದೆ.

What is Franchise Scheme 2.0? Know about this new opportunity of the Postal Department – ತುಳು ಟೈಮ್ಸ್

ಇದನ್ನೂ ಓದಿ : ಪುತ್ತೂರು: ಮಗಳ ಮೇಲೆ ಅಪ್ಪನೇ ಅತ್ಯಾಚಾರ..ಪಾಪಿ ಅಪ್ಪ ಅರೆಸ್ಟ್‌ !

========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=LsSvXVhrSIMoXFUz

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page