ಸುಳ್ಯ: Tulu Times | ಆಲೆಟ್ಟಿ ಗ್ರಾಮದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂಬೂರು ಎಂಬಲ್ಲಿ ರಸ್ತೆ ಬದಿಯ ತಡೆಗೋಡೆಗೆ ಬೈಕ್ ಡಿಕ್ಕಿಯಾದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆಯು ಡಿ.5ರ ಸೋಮವಾರ ನಡೆದಿದ್ದು, ಸಲ್ಮಾನ್ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ. ಅರಂಬೂರು ರಸ್ತೆಯಲ್ಲಿ ಸಲ್ಮಾನ್ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ರಸ್ತೆ ಬದಿಯ ತಡೆ ಬೇಲಿಗೆ ಗುದ್ದಿ, ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಇದರಿಂದಾಗಿ ಸಲ್ಮಾನ್ ರಿಗೆ ತಲೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೆ ಸಂಜೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸೋನಿಯಾ ಗಾಂಧಿ ಆಸ್ಪತ್ರೆಯ ಮೊರೆ ಹೋಗೋದಕ್ಕೆ ದೆಹಲಿಯ ವಾಯುಮಾಲಿನ್ಯವೇ ಕಾರಣವಾಯ್ತಾ?
ದೆಹಲಿ: ಪ್ರತ್ಯೇಕ ಪ್ರಕರಣದಲ್ಲಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಆರೋಗ್ಯತಪಾಸಣೆಗೆಂದು ರಾಷ್ಟ್ರ ರಾಜಧಾನಿ ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಸೋನಿಯಾ ಗಾಂಧಿ ಅವರು ಆರೋಗ್ಯವಾಗಿದ್ದು ಡಿಸೆಂಬರ್ 2025ರಲ್ಲಿ ಅವರು 79ನೇ ಜನ್ಮದಿನವನ್ನು ಆಚರಿಸಿದ್ದರು. ಇದು ನಿಯಮಿತ ತಪಾಸಣೆಗಾಗಿ ಆರೋಗ್ಯ ತಪಾಸಣೆಗೆ ತಮ್ಮನ್ನು ಒಳಪಡಿಸಿಕೊಂಡರೇ ಎನ್ನುವುದು ಸ್ಪಷ್ಟವಾಗಿಲ್ಲ. ಜೊತೆಗೆ, ಅವರಿಗೆ ದೀರ್ಘಕಾಲದ ಕೆಮ್ಮಿನ ಸಮಸ್ಯೆಯಿದ್ದು, ವಿಶೇಷವಾಗಿ ದೆಹಲಿಯ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ಅವರು ಆಗಾಗ್ಗೆ ತಪಾಸಣೆಗೆ ಬರುತ್ತಾರೆ ಎಂದು ಆಸ್ಪತ್ರೆಯ ಮೂಲಗಳು ಪಿಟಿಐಗೆ ತಿಳಿಸಿವೆ.
ಜ.5 ಸೋಮವಾರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ವರ್ಷದ ಜೂನ್‌ನಲ್ಲಿ ಹೊಟ್ಟೆ ಸಂಬಂಧಿತ ಸಮಸ್ಯೆಗಳ ಕಾರಣದಿಂದ ಸೋನಿಯಾ ಗಾಂಧಿ ಅವರು ಇದೇ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರನ್ನು ಗ್ಯಾಸ್ಟೋಎಂಟರಾಲಜಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪರಿಸ್ಥಿತಿ ನೋಡಿ, ನಂತರ ಬಿಡುಗಡೆ ಮಾಡಲಾಗಿತ್ತು.
‘ಅತಿ ಕಳಪೆ’ ವಾಯು ಗುಣಮಟ್ಟ ;
ಇದರ ನಡುವೆ, ಮಂಗಳವಾರ ಬೆಳಿಗ್ಗೆ ದೆಹಲಿಯ ವಾಯು ಗುಣಮಟ್ಟ ‘ಕಳಪೆ’ ವರ್ಗದಲ್ಲೇ ಮುಂದುವರಿದಿದೆ ಎಂಬುವುದು ವರದಿಯಾಗಿದ್ದು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ‘ಸಮೀರ್’ ಆಪ್‌ನ ಮಾಹಿತಿಯಂತೆ, ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 293 ಆಗಿದೆ. ಸ್ಟೇಷನ್‌ವಾರು ಮಾಹಿತಿಯಲ್ಲಿ ಚಾಂಕ್ನಿಚೌಕ್ ಪ್ರದೇಶದಲ್ಲಿ ಅತ್ಯಂತ ಕೆಟ್ಟ ವಾಯು ಗುಣಮಟ್ಟ ದಾಖಲಾಗಿದ್ದು, AQI 352ರೊಂದಿಗೆ ಅತಿ ಕಳಪೆ’ ವರ್ಗದಲ್ಲಿದೆ. ಒಟ್ಟು 20 ಕೇಂದ್ರಗಳಲ್ಲಿ ‘ಅತಿ ಕಳಪೆ’ ವಾಯು ಗುಣಮಟ್ಟ ದಾಖಲಾಗಿದ್ದು, 15 ಕೇಂದ್ರಗಳಲ್ಲಿ ‘ಕಳಪೆ’ ಮತ್ತು ಎರಡು ಕೇಂದ್ರಗಳಲ್ಲಿ ‘ಮಧ್ಯಮ’ (Moderate) ವಾಯು ಗುಣಮಟ್ಟ ದಾಖಲಾಗಿದೆ.
Sullia: Bike hits road barrier, rider dies- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











