ದೆಹಲಿ : Tulu Times | ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಆರೋಗ್ಯ ತಪಾಸಣೆಗೆಂದು ರಾಷ್ಟ್ರ ರಾಜಧಾನಿ ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಸೋನಿಯಾ ಗಾಂಧಿ ಅವರು ಆರೋಗ್ಯವಾಗಿದ್ದು, ಡಿಸೆಂಬರ್ 2025ರಲ್ಲಿ ಅವರು 79ನೇ ಜನ್ಮದಿನವನ್ನು ಆಚರಿಸಿದ್ದರು. ಇದು ನಿಯಮಿತ ತಪಾಸಣೆಗಾಗಿ ಆರೋಗ್ಯ ತಪಾಸಣೆಗೆ ತಮ್ಮನ್ನು ಒಳಪಡಿಸಿಕೊಂಡರೇ ಎನ್ನುವುದು ಸ್ಪಷ್ಟವಾಗಿಲ್ಲ. ಜೊತೆಗೆ, ಅವರಿಗೆ ದೀರ್ಘಕಾಲದ ಕೆಮ್ಮಿನ ಸಮಸ್ಯೆಯಿದ್ದು, ವಿಶೇಷವಾಗಿ ದೆಹಲಿಯ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ಅವರು ಆಗಾಗ್ಗೆ ತಪಾಸಣೆಗೆ ಬರುತ್ತಾರೆ ಎಂದು ಆಸ್ಪತ್ರೆಯ ಮೂಲಗಳು ಪಿಟಿಐಗೆ ತಿಳಿಸಿವೆ.
ಜ.5 ಸೋಮವಾರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ವರ್ಷದ ಜೂನ್‌ನಲ್ಲಿ ಹೊಟ್ಟೆ ಸಂಬಂಧಿತ ಸಮಸ್ಯೆಗಳ ಕಾರಣದಿಂದ ಸೋನಿಯಾ ಗಾಂಧಿ ಅವರು ಇದೇ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರನ್ನು ಗ್ಯಾಸ್ಟ್ರೋಎಂಟರಾಲಜಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪರಿಸ್ಥಿತಿ ನೋಡಿ, ನಂತರ ಬಿಡುಗಡೆ ಮಾಡಲಾಗಿತ್ತು.
‘ಅತಿ ಕಳಪೆ’ ವಾಯು ಗುಣಮಟ್ಟ ;
ಇದರ ನಡುವೆ, ಮಂಗಳವಾರ ಬೆಳಿಗ್ಗೆ ದೆಹಲಿಯ ವಾಯು ಗುಣಮಟ್ಟ ‘ಕಳಪೆ’ ವರ್ಗದಲ್ಲೇ ಮುಂದುವರಿದಿದೆ ಎಂಬುವುದು ವರದಿಯಾಗಿದ್ದು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ‘ಸಮೀರ್’ ಆಪ್‌ನ ಮಾಹಿತಿಯಂತೆ, ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 293 ಆಗಿದೆ. ಸ್ಟೇಷನ್‌ವಾರು ಮಾಹಿತಿಯಲ್ಲಿ ಚಾಂದ್ನಿ ಚೌಕ್ ಪ್ರದೇಶದಲ್ಲಿ ಅತ್ಯಂತ ಕೆಟ್ಟ ವಾಯು ಗುಣಮಟ್ಟ ದಾಖಲಾಗಿದ್ದು, AQI 352ರೊಂದಿಗೆ ‘ಅತಿ ಕಳಪೆ’ ವರ್ಗದಲ್ಲಿದೆ. ಒಟ್ಟು 20 ಕೇಂದ್ರಗಳಲ್ಲಿ ‘ಅತಿ ಕಳಪೆ’ ವಾಯು ಗುಣಮಟ್ಟ ದಾಖಲಾಗಿದ್ದು, 15 ಕೇಂದ್ರಗಳಲ್ಲಿ ‘ಕಳಪೆ’ ಮತ್ತು ಎರಡು ಕೇಂದ್ರಗಳಲ್ಲಿ ‘ಮಧ್ಯಮ’ (Moderate) ವಾಯು ಗುಣಮಟ್ಟ ದಾಖಲಾಗಿದೆ.
Was Delhi’s air pollution the reason behind Sonia Gandhi’s hospital visit? – ತುಳು ಟೈಮ್ಸ್
ಇದನ್ನೂ ಓದಿ :ಮಂಗಳವಾರದ ಅಂಗಾರಕ ಸಂಕಷ್ಟ ಚತುರ್ಥಿ : ಭಕ್ತರ ಕಷ್ಟಗಳಿಗೆ ಶೀಘ್ರ ಪರಿಹಾರ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=LsSvXVhrSIMoXFUz











