ಬ್ರೇಕಿಂಗ್ ನ್ಯೂಸ್
ಕಡಬಕರ್ನಾಟಕ

ಕಡಬ: ಬಸ್‌ ನಿಂದ ಇಳಿಯುವಾಗ ಆಯತಪ್ಪಿ ಬಿದ್ದು ವೃದ್ಧ ಸಾವು

ಕಡಬ: Tulu Times | ಕಡಬ ತಾಲೂಕಿನ ಕುಂತೂರು ಎಂಬಲ್ಲಿ  ಬಸ್‌ನಿಂದ ಇಳಿಯುತ್ತಿದ್ದ ವೇಳೆ ಒಮ್ಮೆಲೇ ಬಸ್‌ ಚಲಾಯಿಸಿದ್ದರಿಂದ ಆಯತಪ್ಪಿ ಬಿದ್ದು ವೃದ್ಧ ಸಾವನ್ನಪ್ಪಿರುವ ಘಟನೆ ನಡೆದಿದೆ.

ಇದನ್ನೂ ಓದಿ: ‘ಕರ್ನಾಟಕ ಉಳಿಸಿ, ಕಾಂಗ್ರೆಸ್ ತೊಲಗಿಸಿ’ ‘ಬೆಂಗಳೂರು ಉಳಿಸಿ’ ಹೋರಾಟ

ಚಾಲಕನ ಅಜಾಗರೂಕತೆಯಿಂದ ಆಯತಪ್ಪಿ ಬಿದ್ದ ವೃದ್ಧ!

ಪೆರಾಬೆ ಗ್ರಾಮದ ಬೆಳ್ಳಾಡಿ ನಿವಾಸಿ ಬಾಬು ಮನ್ನ (65) ಎಂದು ಮೃತರನ್ನು ಗುರುತಿಸಲಾಗಿದೆ. ಇವರು ಜನವರಿ 03ರಂದು ಸಂಜೆ ಸುಮಾರು 6:30ರ ವೇಳೆಗೆ  ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕುಂತೂರಿಗೆ ಆಗಮಿಸಿದ್ದರು.  ಕುಂತೂರು ಬಸ್ ನಿಲ್ದಾಣದಲ್ಲಿ ಬಸ್ ನಿಂತಾಗ ಹಿಂಬದಿ ಬಾಗಿಲಿನಿಂದ ಇಳಿಯುತ್ತಿದ್ದ ವೇಳೆ, ಬಸ್‌ ಚಾಲಕ ಪ್ರಯಾಣಿಕರು ಇಳಿದಿದ್ದಾರೆಯೇ ಎಂದು ಗಮನಿಸದೆ, ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದಾರೆ.  ಹೀಗಾಗಿ,  ಹಿಡಿತ ತಪ್ಪಿದ ಬಾಬು ಮನ್ನ ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾರೆ ಎನ್ನಲಾಗಿದೆ.ಇನ್ನು  ಮೃತರ ಸಂಬಂಧಿ ಚರಣ್ ರಾಜ್ ಕೆ ಕಡಬ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.  ದೂರಿನ ಅನ್ವಯ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತ (BNS-2023) ಕಲಂ 281, 125(b) ಮತ್ತು 106ರ ಅಡಿಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಸೋನಿಯಾ ಗಾಂಧಿ ಆಸ್ಪತ್ರೆಯ ಮೊರೆ ಹೋಗೋದಕ್ಕೆ ದೆಹಲಿಯ ವಾಯುಮಾಲಿನ್ಯವೇ ಕಾರಣವಾಯ್ತಾ‌?

ಪ್ರಥಮ ಚಿಕಿತ್ಸೆಗೆ ಸ್ಪಂದಿಸದೇ ಮೃತ

ಇನ್ನು ಈ ಅನಾಹುತದಿಂದ ಮೃತರ ಎಡ ತೊಡೆ, ಬಲ ಕಾಲಿನ ಮೊಣಗಂಟಿಗೆ ತೀವು  ರಕ್ತಗಾಯಗಳಾಗಿವೆ. ಈ ವೇಳೆ ಬಿದ್ದ ವೃದ್ಧನನ್ನು
ಚರಣ್ ರಾಜ್ ಮತ್ತು ನವೀನ್ ಎಂಬ ಸ್ಥಳೀಯರು  ಗಾಯಾಳುವನ್ನು ಕಾರಿನ ಮೂಲಕ ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.  ನಂತರ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ರಾತ್ರಿ 10:35ರ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ  ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಯುವಕನ ಚಾಕು ಇರಿತದಿಂದ ಹತ್ಯೆಯಾದ ಯುವತಿ ಕುಟುಂಬ ಭೇಟಿಯಾದ ವಿಜಯೇಂದ್ರ!

Kadaba: Elderly man dies after falling while getting off a bus- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:‌ https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 124

You cannot copy content of this page