ಬ್ರೇಕಿಂಗ್ ನ್ಯೂಸ್
ಕರ್ನಾಟಕಪುತ್ತೂರು

ಪುತ್ತೂರು: ಮಗಳ ಮೇಲೆ ಅಪ್ಪನೇ ಅತ್ಯಾಚಾರ..ಪಾಪಿ ಅಪ್ಪ ಅರೆಸ್ಟ್‌ !

ಪುತ್ತೂರು: Tulu Times | ತನ್ನ ಮಗಳ ಮೇಲೆಯೇ ತಂದೆಯೊಬ್ಬ ಅತ್ಯಾಚಾರ ಎಸಗಿರುವ ಘಟನೆ  ಪುತ್ತೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಾಮುಕ ಅಪ್ಪನಿಂದಲೇ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಪಾಪಿ ಅಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಕಾಮುಕ ಅಬ್ದುಲ್ ಬಶೀರ್  ಎಂದು ತಿಳಿದುಬಂದಿದೆ. ಇನ್ನು ಸಂತ್ರಸ್ಥೆ ಬಾಲಕಿಯನ್ನು  ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪ್ರಕರಣ  ಪುತ್ತೂರು ಮಹಿಳಾ ಠಾಣೆಯಲ್ಲಿ ಪೋಕೋ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಂಗಳವಾರದ ಅಂಗಾರಕ ಸಂಕಷ್ಟ ಚತುರ್ಥಿ : ಭಕ್ತರ ಕಷ್ಟಗಳಿಗೆ ಶೀರ್ಘ ಪರಿಹಾರ

ಆಕಸ್ಮಿಕ ಬೆಂಕಿ ಅನಾಹುತ: ಮಂಗಳೂರಿನ ಯುವತಿ ಸಾವು

ಬೆಂಗಳೂರು: ಪ್ರತೇಕ ಪ್ರಕರಣದಲ್ಲಿ, ಬೆಂಗಳೂರಿನ ರಾಮ ಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುಬ್ರಹ್ಮಣ್ಯ ಲೇಔಟ್ ಅಪಾರ್ಟ್ ‘ಮೆಂಟ್‌ನಲ್ಲಿ ಶನಿವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಅನಾಹುತ ಉಂಟಾಗಿದ್ದು, ಮಂಗಳೂರಿನ ಯುವತಿಯೋರ್ವಳು ರೂಂ ನಲ್ಲಿ ಬೆಂಕಿಗೆ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ ಒಂದೂವರೆ ವರ್ಷದಿಂದ ಮಂಗಳೂರಿನ ಕಾವೂರು ಮೂಲದ ಶರ್ಮಿಳಾ (34) ಸುಬ್ರಹ್ಮಣ್ಯ ಲೇಔಟ್‌ನ ಅಪಾರ್ಟ್ ಮೆಂಟ್‌ನಲ್ಲಿ ಸ್ನೇಹಿತೆ ಜತೆ ಅಪಾರ್ಟೆಂಟ್ ನಲ್ಲಿ ವಾಸವಾಗಿದ್ದರು. ತನ್ನ ಮನೆಗೆ ಹತ್ತಿರ ಆಗುವಂತೆ ಆಫೀಸ್ ಕೂಡ ಇತ್ತು. ಹೀಗಾಗಿ ಓಡಾಡಲು ಸುಲಭವಾಗಲಿ ಎಂದು ಮನೆ ಸಮೀಪದ ಸಾಫ್ಟ್‌ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಶರ್ಮಿಳಾಳ ಗೆಳತಿ ರಜೆ ಇದ್ದುದರಿಂದ ಸ್ನೇಹಿತೆ ಊರಿಗೆ ತೆರಳಿದ್ದರಿಂದ ಶರ್ಮಿಳಾ ಒಬ್ಬಳೇ ರೂಂನಲ್ಲಿ ಇದ್ದಳು ಎನ್ನಲಾಗಿದೆ. ರಾತ್ರಿ 11 ಗಂಟೆಗೆ ಮನೆಯ ಕೋಣೆಯೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಮನೆಯ ರೂಂ ನ ತುಂಬಾ ಬೆಂಕಿ ಆವರಿಸಿಕೊಂಡಿದೆ. ಆಗ ಪಕ್ಕದ ‘ಕೋಣೆಯಲ್ಲಿದ್ದ ಶರ್ಮಿಳಾ ಕೂಡಲೇ ಆ ಕೋಣೆ ಕಡೆ ಬರೋಕೆ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪವರ್ ಕೂಡ ಆಫ್ ಆಗಿದೆ. ಹೀಗಾಗಿ, ಕತ್ತಲೆಯಲ್ಲಿ ಕಿಟಕಿ ಹಾಗೂ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: 2026ರಲ್ಲಿ ವ್ಯಾಯಾಮಕ್ಕಿಂತ ಹೆಚ್ಚು ಮಹತ್ವ ಹೊಂದಿರುವ 10 ಶಾಂತ ಆರೋಗ್ಯ ಅಭ್ಯಾಸಗಳ ಬಗ್ಗೆ ತಿಳಿಯಿರಿ

Puttur: Father rapes daughter… guilty father arrested!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 161

You cannot copy content of this page