ಬ್ರೇಕಿಂಗ್ ನ್ಯೂಸ್
ಕರ್ನಾಟಕಮಂಗಳೂರು

ಉಡುಪಿ: ಖಾಸಗಿ ಬಸ್‌ ಗೆ ಸ್ಕೂಟರ್‌ ಡಿಕ್ಕಿ ಸವಾರ ಸಾವು

ಉಡುಪಿ: Tulu Times | ಪಾಂಗಾಳ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಮಧ್ಯಾಹ್ನ ವೇಳೆ  ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿಯಾಗಿ, ಸ್ಕೂಟರ್ ಸವಾರ ಸ್ಥಳದಲ್ಲಿಯೇ  ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಲ್ಪೆ ಪಡುಕೆರೆ ಮೂಲದ ಕಾಪು ಮೂಳೂರು ನಿವಾಸಿ ಕೃಷ್ಣರಾಜ ಎಸ್.ಕರ್ಕೇರ(50) ಮೃತ ದುರ್ದೈವಿಯಾಗಿದ್ದಾರೆ. ಉಡುಪಿಯಿಂದ ಮಂಗಳೂರು ಕಡೆ ಬರುತ್ತಿದ್ದ ಖಾಸಗಿ ಬಸ್, ಎದುರಿನಲ್ಲಿ ಹೋಗುತ್ತಿದ್ದ ಸ್ಕೂಟರ್‌ ಢಿಕ್ಕಿ ಹೊಡೆದಿದೆ.   ಹೀಗಾಗಿ ರಸ್ತೆಗೆ ಬಿದ್ದ ಸವಾರ ಕೃಷ್ಣರಾಜ ಕರ್ಕೇರ  ಗಂಭೀರ  ಗಾಯಗೊಂಡಿದ್ದಾರೆ.  ಕೂಡಲೇ ಅವರನ್ನು  ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಕೃಷ್ಣರಾಜ ಕರ್ಕೇರ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾಪು ಪೊಲೀಸರು  ಪರಿಶೀಲನೆ ನಡೆಸಿದ್ದಾರೆ.

ಗೆಳತಿಯ ಎದುರಲ್ಲಿಯೇ ಯುವತಿಯೋರ್ವಳು ನದಿಗೆ ಹಾರಿ ಆತ್ಮಹತ್ಯೆ!

ಮಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ, ಮಂಗಳೂರಿನ ಗುರುಪುರ ಸೇತುವೆಯ ಬಲಿ ತನ್ನ ಗೆಳತಿಯ ಎದುರಲ್ಲಿಯೇ ಯುವತಿಯೋರ್ವಳು ನದಿಗೆ ಹಾರಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಮೂಡಬಿದಿರೆಯ ಕಡೆಪಲ್ಲ ನಿವಾಸಿ ನವ್ಯಾ(20) ಮೃತ ಯುವತಿಯಾಗಿದ್ದು, ಈಕೆ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಆತ ತನಗೆ ಮೋಸ ಮಾಡಿದ್ದಾನೆ ಎನ್ನುವ ಕಾರಣದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ನವ್ಯಾ ತನ್ನ ಸ್ನೇಹಿತೆಯ ಜೊತೆ ಸ್ಕೂಟರ್ ನಲ್ಲಿ ಬಂದು ಮಧ್ಯಾಹ್ನ ವೇಳೆಗೆ ಗುರುಪುರ ಸೇತುವೆ ಬಳಿ ತಲುಪಿದಾಗ ಸ್ಕೂಟರ್ ನಿಲ್ಲಿಸಿ ತಾನು ನದಿಗೆ ಹಾರುತ್ತೇನೆ ಎಂದು ಹೇಳಿ ನೀರಿಗೆ ಹಾರಿದ್ದಾಳೆ ಎನ್ನಲಾಗಿದೆ.

ಯುವತಿ ನೀರಿಗೆ ಹಾರಲು ಕಾರಣವೇನು..?

ತಕ್ಷಣವೇ ನವ್ಯಾಳ ಗೆಳತಿ ಕೈ ಹಿಡಿದು ಎಳೆದರೂ ಬದುಕಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಕೂಡಲೇ ಪೊಲೀಸರು, ಅಗ್ನಿ ಶಾಮಕ ದಳದ ಸಿಬಂದಿಗೆ ಫೋನ್ ಮಾಡಿ ತಿಳಿಸಿದ್ದಾರೆ. ನಂತರ, ಅಗ್ನಿ ಶಾಮಕ ದಳದವರು ಶವವನ್ನು ಮೇಲಕ್ಕೆತ್ತಿದ್ದಾರೆ. ಹತ್ತಿರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಸೂಸೈಡ್ ಕೇಸ್ ಬಗ್ಗೆ, ನವ್ಯಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ನಂತರ ಆತ ಮದುವೆಯಾಗುವುದಾಗಿ ವಂಚಿಸಿದ್ದಾನೆ ಎನ್ನಲಾಗಿದೆ. ಆತನ ಭೇಟಿಗೂ ಮುಂದಾಗಿ ಕರೆ ಮಾಡಿ, ಬಳಿಕ ಡೆತ್ ನೋಟ್ ಬರೆದಿದ್ದಾಳೆ ಎನ್ನಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Udupi: Scooter collides with private bus, rider dies- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 127

You cannot copy content of this page