ಬ್ರೇಕಿಂಗ್ ನ್ಯೂಸ್
ಕರಾವಳಿಮಂಗಳೂರು

Mangaluru: ಪಾಕ್‌ ಯುದ್ಧದಲ್ಲಿ ಹೆಲಿಕಾಪ್ಟರ್‌ನಿಂದ ಬಿದ್ದು ಬದುಕಿ ಬಂದಿದ್ದ ಮಾಜಿ ಯೋಧ ವಿಧಿವಶ

Mangaluru: ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಯುದ್ಧದಲ್ಲಿ ಪಾಲ್ಗೊಂಡಿದ್ದ ಸೇನಾನಿ ನಿಧನರಾಗಿದ್ದಾರೆ. 1971 ರ ಭಾರತ ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದ ಗರೋಡಿ ತಿಮ್ಮಪ್ಪ ಆಳ್ವ(85) ಅ. 16ರ ಗುರುವಾರ ಸಂಜೆ ಮಂಗಳೂರಿನ ಲೋಹಿತ್ ನಗರದಲ್ಲಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಇತ್ತೀಚೆಗೆ ತಿಮ್ಮಪ್ಪ ಆಳ್ವರ ಅನುಭವ ಕಥನ “ಗರೋಡಿ ಮನೆಯಿಂದ ಸೇನಾ ಗರಡಿಗೆ” ಕಿರುಪುಸ್ತಕ ಪ್ರಕಟವಾಗಿತ್ತು. ತುಳುನಾಡಿನ ಕ್ರಷಿ ಕುಟುಂಬದಲ್ಲಿ ಜನಿಸಿ, ದೇಶಕಾಯುವ ಕಾಯಕಕ್ಕೆ ಸೇರಿದ್ದರು.

1971ರ ಯುದ್ಧದಲ್ಲಿ ಹೆಲಿಕಾಫ್ಟರ್ ನಲ್ಲಿ ಯುದ್ಧ ಶಿಬಿರಕ್ಕೆ ಪ್ರಯಾಣಿಸುವ ವೇಳೆ ಪಾಕ್ ಸೈನಿಕರ ಫಿರಂಗಿ ದಾಳಿಗೆ ತುತ್ತಾಗಿ ಚಿತ್ತಗಾಂಗ್ ಪ್ರದೇಶದ ಅರಣ್ಯದೊಳಕ್ಕೆ ಬಿದ್ದು ಜೀವನ್ಮರಣ ಹೋರಾಟ ನಡೆಸಿ ಬದುಕಿ ಉಳಿದ ಅನುಭವ ಕಥನ ಕಿರು ಪುಸ್ತಕವಾಗಿ ಪ್ರಕಟವಾಗಿದೆ.

ಕುಟುಂಬಸ್ಥರು ಮೃತರ ದೇಹವನ್ನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾನ ಮಾಡಲಾಗುವುದು ಎಂದಿದ್ದಾರೆ. ಮೃತರು ಪಾಕ್‌ ವಿರುದ್ಧದ ಮೂರು ಯುದ್ಧದಲ್ಲಿ ಭಾಗವಹಿಸಿದ್ದಾರೆ. ಡೆಹ್ರಾಡೂನ್‌, ಅಸ್ಸಾಂ, ಉತ್ತರ ಪ್ರದೇಶ ಇನ್ನಿತರ ಕಡೆಗಳಲ್ಲಿ ಸೇವೆಸಲ್ಲಿದ್ದಾರೆ.

ಇದನ್ನೂ ಓದಿ: Rssban:ಸಾರ್ವಜನಿಕ ಸ್ಥಳಗಳಿಂದ ಸಾರ್ವಜನಿಕರನ್ನು ದೂರ ಇಡಲು ಸರಕಾರ ಪ್ರಯತ್ನ: ಶಾಸಕ ಸುನಿಲ್ ಕುಮಾರ್


ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 36

You cannot copy content of this page