ಉಡುಪಿ : ಕರ್ನಾಟಕದ ಕರಾವಳಿ ಪ್ರದೇಶದಲ್ಲಿರುವ ಉಡುಪಿ ಶ್ರೀಕೃಷ್ಣ ಮಠವು ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದ್ದು, ಈ ಮಠವನ್ನು 13ನೇ ಶತಮಾನದಲ್ಲಿ ಮಹಾನ್ ದಾರ್ಶನಿಕ ಹಾಗೂ ದ್ವೈತ ತತ್ವದ ಸ್ಥಾಪಕ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು. ಭಕ್ತಿ, ಜ್ಞಾನ ಮತ್ತು ಸೇವೆಯ ಸಂಗಮವಾಗಿರುವ ಈ ಮಠವು ಲಕ್ಷಾಂತರ ಭಕ್ತರಿಗೆ ಆಧ್ಯಾತ್ಮಿಕ ಶಾಂತಿಯ ಕೇಂದ್ರವಾಗಿದೆ.
ದೇಶದ ವಿವಿಧ ಭಾಗಗಳಿಂದ ಭಕ್ತರನ್ನು ಆಕರ್ಷಿಸುತ್ತವೆ ;
ಶ್ರೀಕೃಷ್ಣ ಜನ್ಮಾಷ್ಟಮಿ, ಪರ್ಯಾಯೋತ್ಸವ, ನವರಾತ್ರಿ, ಮಕರ ಸಂಕ್ರಾಂತಿ ಮೊದಲಾದ ಹಬ್ಬಗಳು ಇಲ್ಲಿ ವೈಭವದಿಂದ ಆಚರಿಸಲಾಗುತ್ತವೆ. ವಿಶೇಷವಾಗಿ ಜನ್ಮಾಷ್ಟಮಿಯಂದು ಉಡುಪಿ ಮಠದಲ್ಲಿ ನಡೆಯುವ ಉತ್ಸವಗಳು ದೇಶದ ವಿವಿಧ ಭಾಗಗಳಿಂದ ಭಕ್ತರನ್ನು ಆಕರ್ಷಿಸುತ್ತವೆ. ಇಲ್ಲೊಂದು ಅಚ್ಚರಿ ಎಂಬಂತೆ ಭಕ್ತರೊಬ್ಬರು ದೇವರಿಗೆ ಚಿನ್ನದ ಭಗವದ್ಗೀತೆಯನ್ನು ಅರ್ಪಿಸಿರುವುದು ವರದಿಯಾಗಿದೆ.
ಹೌದು…! ಉಡುಪಿ ಶ್ರೀ ಕೃಷ್ಣನಿಗೆ ದೆಹಲಿಯ ಭಕ್ತರೊಬ್ಬರು ಚಿನ್ನದ ಭಗವದ್ಗೀತೆ ಅರ್ಪಣೆಗೆ ಮುಂದಾಗಿದ್ದಾರೆ. ಜನವರಿ 8ರಂದು ನಡೆಯಲಿರುವ ವಿಶ್ವಗೀತಾ ಪರ್ಯಾಯ ಸಮಾರೋಪ ವಿಶೇಷ ಕಾರ್ಯಕ್ರಮದಂದು ಕೃಷ್ಣ ಸನ್ನಿಧಿಯಲ್ಲಿ ಹೊನ್ನಿನ ಭಗವದ್ಗೀತೆ ಲೋಕಾರ್ಪಣೆಗೊಳ್ಳಲಿದೆ. ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಚಿನ್ನದ ಹಾಳೆಯಲ್ಲಿ ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಮುದ್ರಿಸಲಾಗಿದೆ. ಚಿನ್ನದ ರಥದಲ್ಲಿ ಭಗವದ್ಗೀತೆಯ ಮೆರವಣಿಗೆ ಮೂಲಕ ಅರ್ಪಿಸಲಿದ್ದಾರೆ ಎಂದು ವರದಿಯಾಗಿದೆ.
ಇನ್ನು ಈ ಉಡುಪಿ ಶ್ರೀಕೃಷ್ಣ ಮಠವು ಭಕ್ತಿ, ಜ್ಞಾನ ಮತ್ತು ಸೇವೆಯ ಮೂಲಕ ಭಾರತೀಯ ಆತ್ಮೀಯ ಪರಂಪರೆಯನ್ನು ಜೀವಂತವಾಗಿ ಉಳಿಸಿಕೊಂಡಿರುವ ಪವಿತ್ರ ಕ್ಷೇತ್ರವಾಗಿದ್ದು, ಇಲ್ಲಿ ದೊರೆಯುವ ಶ್ರೀಕೃಷ್ಣನ ದರ್ಶನವು ಭಕ್ತರ ಮನಸ್ಸಿನಲ್ಲಿ ಶಾಶ್ವತ ಶಾಂತಿ ಮತ್ತು ಆನಂದವನ್ನು ತುಂಬುತ್ತದೆ.
A golden Bhagavad Gita was prepared for Lord Krishna of Udupi! – ತುಳು ಟೈಮ್ಸ್
ಇದನ್ನೂ ಓದಿ :ನ್ಯಾಯ ಸೇತು ಚಾಟ್ ಬೋಟ್ ಎಂದರೇನು ? ಇದರ ಮುಖ್ಯ ಉದ್ದೇಶದ ಬಗ್ಗೆ ತಿಳಿಯಿರಿ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zt875dd88R8?si=mmKeX2_Bxojx1Fif











