ನವದೆಹಲಿ : Tulu Times | ಅನೇಕ ಸಂದರ್ಭಗಳಲ್ಲಿ ಪ್ರಾಣಿಗಳ ಮೇಲೆ ಕ್ರೂರತೆ, ಹಿಂಸೆ ಮತ್ತು ನಿರ್ಲಕ್ಷ್ಯ ನಡೆಯುತ್ತಲೇ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ, ದೆಹಲಿಯಲ್ಲಿ ನಾಯಿಗೆ ಬಲವಂತವಾಗಿ ಮದ್ಯ ಕುಡಿಸಿದ್ದ ಆರೋಪದ ಮೇಲೆ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಿಟಿಐ ವರದಿ ಪ್ರಕಾರ, ನಾಯಿಯ ಮೇಲೆ ಕ್ರೂರವಾಗಿ ವರ್ತಿಸಿ ಮದ್ಯ ಕುಡಿಸುವ ದೃಶ್ಯವಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ ಯುವಕನೊಬ್ಬ ನಾಯಿಯನ್ನು ಹಿಂಸಿಸುತ್ತಾ, ಮದ್ಯದ ಬಾಟಲಿಯಿಂದ ಬಲವಂತವಾಗಿ ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೀಡಿಯೊ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ಬಾಗ್‌ಪತ್ ಸಾಮಾಜಿಕ ಮಾಧ್ಯಮ ಸೆಲ್ ಹಾಗೂ ಸ್ಥಳೀಯ ರಾಮಲಾ ಪೊಲೀಸ್ ಠಾಣೆ ಪ್ರಕರಣದ ಬಗ್ಗೆ ಸ್ವಯಂಪ್ರೇರಿತವಾಗಿ ತನಿಖೆ ಆರಂಭಿಸಿವೆ.
ಇದನ್ನೂ ಓದಿ : ಸಂಪಾಜೆಯಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಉಪವಾಸ ಸತ್ಯಾಗ್ರಹ
ಕ್ರೌರ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ;
ಆರೋಪಿಯನ್ನು ಕಿರ್ತಾಲ್ ಗ್ರಾಮದ ನಿವಾಸಿ ಜಿತೇಂದ್ರ ಅಲಿಯಾಸ್ ಬಲ್ಲಂ ಎಂದು ಗುರುತಿಸಲಾಗಿದ್ದು, ಅವರನ್ನು ಭಾನುವಾರ ರಾಮಲಾ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತದ ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಪ್ರಾಣಿಗಳಿಗೂ ಬದುಕುವ ಹಕ್ಕು ಇದೆ ಎಂದು ಸ್ಪಷ್ಟಪಡಿಸಿದೆ. ಪ್ರಾಣಿಗಳ ರಕ್ಷಣೆಯು ಮಾನವೀಯತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಭಾಗವೆಂದು ನ್ಯಾಯಾಲಯ ಹೇಳಿದೆ. ಹಾಗಾಗಿ, ಈ ಘಟನೆ ವಿಚಾರವಾಗಿ ತಪ್ಪಿತಸ್ಥನಿಗೆ ಸರಿಯಾದ ಶಿಕ್ಷೆಯನ್ನು ನೀಡುಲಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
Youth forcibly makes dog drink alcohol: Outrage on social media – ತುಳು ಟೈಮ್ಸ್
ಇದನ್ನೂ ಓದಿ :ಮುಸ್ಲಿಂ ಯುವಕನ ಚಾಕು ಇರಿತದಿಂದ ಹತ್ಯೆಯಾದ ಯುವತಿ ಕುಟುಂಬ ಭೇಟಿಯಾದ ವಿಜಯೇಂದ್ರ!
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=g_O1GQ_svzbcHEz4











