ಯಲ್ಲಾಪುರ:Tulu Times | ಏಕೈಕ ಪಾಲಕಿಯಾದ ಯುವತಿಯ ಹತ್ಯೆಯಿಂದ ಹತ್ತು ವರ್ಷದ ಮಗ ಅನಾಥನಾಗಿದ್ದಾನೆ. ವಯೋವೃದ್ಧ ತಾಯಿ ದಿಕ್ಕುಗಾಣದಂತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹತ್ಯೆಯಾದ ದಲಿತ ಹಿಂದು ಯುವತಿಯ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು ದಲಿತ ಕುಟುಂಬಕ್ಕೆ 2 ಎಕರೆ ಜಮೀನು ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಇಂದು ಇಲ್ಲಿ ಇಲ್ಲಿಗೆ ಭೇಟಿ ನೀಡಿದ್ದರು. ಮುಸ್ಲಿಂ ಯುವಕನ ಚಾಕು ಇರಿತದಿಂದ ಬರ್ಬರ ಹತ್ಯೆಗೊಳಗಾದ ದಲಿತ ಹಿಂದೂ ಯುವತಿ ರಂಜಿತಾ ಬನಸವಾಡೆ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಬಳಿಕ ನತದೃಷ್ಟ ಯುವತಿಯ ತಾಯಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಂಜಿತಾ ಹತ್ಯಾ ಪ್ರಕರಣದ ಗಂಭೀರ ತನಿಖೆ ನಡೆಸುವಂತೆ ಆಗ್ರಹಿಸಿದರು.
ರಾಜ್ಯ ಸರಕಾರ, ಗೃಹ ಇಲಾಖೆ ನಿಷ್ಕ್ರಿಯವಾಗಿರುವ ಪರಿಣಾಮವೇ ಇಂಥ ಪ್ರಕರಣಗಳು ಮರುಕಳಿಸುತ್ತಿವೆ. ಇಂಥ ಅಹಿತಕರ ಘಟನೆಗಳು ನಡೆದಾಗ ಪೊಲೀಸ್ ಇಲಾಖೆ ತನಿಖೆ ಪ್ರಾರಂಭಿಸುವ ಮುನ್ನವೇ ಗೃಹ ಸಚಿವರು, ಮುಖ್ಯಮಂತ್ರಿಗಳು ಇದು ಲವ್ ಜಿಹಾದ್ ಅಲ್ಲವೆಂದು ಕ್ಲೀನ್ ಚಿಟ್ ಕೊಡುತ್ತಿದ್ದಾರೆ. ಇದೆಲ್ಲದರ ಪರಿಣಾಮವೇ ಇಂಥ ದುಷ್ಕøತ್ಯಗಳು ಮರುಕಳಿಸುತ್ತಿವೆ ಎಂದು ವಿಶ್ಲೇಷಿಸಿದರು.
ಇಂಥ ಪ್ರಕರಣ ನಡೆದಾಗ ತಪ್ಪು ಮಾಹಿತಿ ಕೊಡುವುದು, ಪ್ರಕರಣಗಳನ್ನು ಮುಚ್ಚಿ ಹಾಕುವುದು ನಡೆಯುತ್ತಿದೆ. ಇದೆಲ್ಲದರ ಪರಿಣಾಮವಾಗಿ ಯಲ್ಲಾಪುರದಲ್ಲಿ ಇಂಥ ದುರ್ಘಟನೆ ನಡೆದಿದೆ ಎಂದ ತಿಳಿಸಿದರು. ಈ ಪ್ರಕರಣದ ಸಮರ್ಪಕ ತನಿಖೆ ನಡೆದು ಆ ಕುಟುಂಬಕ್ಕೂ ನ್ಯಾಯ ಲಭಿಸಬೇಕು. ಹಿಂದೂ ಸಮಾಜಕ್ಕೂ ನ್ಯಾಯ ಸಿಗಬೇಕು ಎಂದ ಅವರು, ಸರಿಯಾದ ರೀತಿ ತನಿಖೆ ನಡೆಸಿ ಎಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಆಗ್ರಹಿಸಿದರು.
ಸಾವಿನ ಮನೆಯಲ್ಲಿ ರಾಜಕಾರಣ ನಮ್ಮದಲ್ಲ. ಮನುಷ್ಯತ್ವದ ರಾಜಕಾರಣ ಬಿಜೆಪಿಯದು ಎಂದ ಅವರು, ಪದೇಪದೇ ಇಂಥ ಘಟನೆಗಳು ಕರ್ನಾಟಕದಲ್ಲಿ ಮರುಕಳಿಸುತ್ತಿವೆ. ಇದು ಖಂಡನೀಯ ಎಂದು ತಿಳಿಸಿದರು. ಹುಬ್ಬಳ್ಳಿಯಲ್ಲಿ ಎರಡು ವರ್ಷಗಳ ಹಿಂದೆ ನೇಹಾ ಹಿರೇಮಠ್ ಘಟನೆಯನ್ನು ನಾವ್ಯಾರೂ ಮರೆತಿಲ್ಲ ಎಂದು ತಿಳಿಸಿದರು. ಬಿಜೆಪಿ ಏನಾದರೂ ಹೇಳಿಕೆ ಕೊಟ್ಟರೆ ನಮ್ಮನ್ನು ಕೋಮುವಾದಿಗಳೆಂದು ಬಣ್ಣ ಕೊಡುವ ಕೆಲಸ ಮಾಡುತ್ತಾರೆ ಎಂದು ಆಕ್ಷೇಪಿಸಿದರು.
ಬಿಜೆಪಿ ವತಿಯಿಂದ ಪರಿಹಾರ, ಶಿಕ್ಷಣದ ವ್ಯವಸ್ಥೆ!
ಬಿಜೆಪಿ ವತಿಯಿಂದ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದರು. ಐದನೇ ತರಗತಿಯಲ್ಲಿ ಓದುತ್ತಿರುವ ಹತ್ತು ವರ್ಷದ ಬಾಲಕನ ಮುಂದಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಪಕ್ಷದ ವತಿಯಿಂದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಹರಿಪ್ರಕಾಶ್ ಕೋಣೆಮನೆಯವರು ತೆಗೆದುಕೊಂಡಿದ್ದನ್ನು ಪ್ರಕಟಿಸಿ, ಸಂಸ್ಥೆಯ ಅಧ್ಯಕ್ಷರನ್ನು ಅಭಿನಂದಿಸಿದರು.
Vijayendra meets the family of the young woman who was stabbed to death by a Muslim youth!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











