ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪಂಜಾಬಿನ ಪಿನ್ನಿ ಮತ್ತು ಪಂಜೀರಿ ಆಹಾರದ ಬಗ್ಗೆ ನಿಮಗೆಷ್ಟು‌ ಗೊತ್ತು ? ಚಳಿಗಾಲದ ಬೆಸ್ಟ್ ಫುಡ್

ಆಹಾರ : Tulu Times | ಪಂಜಾಬಿನ ಜನಜೀವನ ಚಳಿಗಾಲದಲ್ಲಿ ತುಂಬಾ ಕಷ್ಟಕರ. ಈ ಸಮಯ ದೇಹವು ಸಹಜವಾಗಿಯೇ ಉಷ್ಣತೆ, ಶಕ್ತಿ ಮತ್ತು ಆರಾಮವನ್ನು ಬಯಸುತ್ತದೆ. ಈ ಸಂದರ್ಭ ಜನರು ಕೆಲವೊಂದು ಆಹಾರದ‌ ಮೇಲೆ ಅವಲಂಬಿತವಾಗಿರುತ್ತದೆ. ಅದರಲ್ಲಿ ವಿಶೇಷವಾಗಿರುವುದು ಪಿನ್ನಿ ಮತ್ತು ಪಂಜೀರಿ. ಇದು ಪಂಜಾಬ್‌ನ ಸಾಂಪ್ರದಾಯಿಕ, ಪೌಷ್ಟಿಕಾಂಶಭರಿತ ಚಳಿಗಾಲದ ಸಿಹಿ ತಿಂಡಿಯಾಗಿದ್ದು, ಗೋಧಿ ಹಿಟ್ಟು, ತುಪ್ಪ, ಬೆಲ್ಲ, ಮತ್ತು ಒಣ ಹಣ್ಣುಗಳಿಂದ ತಯಾರಿಸಲ್ಪಡುತ್ತಾರೆ

ಈ ಪಾರಂಪರಿಕ ಆಹಾರ ಪೀಳಿಗೆಯಿಂದ ಪೀಳಿಗೆಗೆ ಸಾಗಿಕೊಂಡು ಬಂದಿವೆ. ವಿಶೇಷವಾಗಿ ಚಳಿಗಾಲದಲ್ಲಿ, ಪ್ರಸವೋತ್ತರ ಆರೈಕೆಯಲ್ಲಿ ಹಾಗೂ ದೈಹಿಕ ದುರ್ಬಲತೆಯ ಸಮಯದಲ್ಲಿ ದೇಹಕ್ಕೆ ಪೋಷಣೆ, ಶಕ್ತಿ ಮತ್ತು ಆರಾಮ ನೀಡುವ ಆಹಾರಗಳಾಗಿ ಪಿನ್ನಿ ಮತ್ತು ಪಂಜೀರಿ ಇಂದಿಗೂ ಮಹತ್ವ ಹೊಂದಿವೆ. ಪಿನ್ನಿ ಮತ್ತು ಪಂಜೀರಿ ಪಂಜಾಬಿನ ಕೃಷಿ ಸಮುದಾಯಗಳಿಂದ ಉದ್ಭವಿಸಿದ್ದವು. ರೈತರಿಗೆ ದಿನವಿಡೀ ಶಕ್ತಿ ನೀಡುವ ಆಹಾರ ಬೇಕಿತ್ತು, ಹೆರಿಗೆ ಬಳಿಕ ಮಹಿಳೆಯರಿಗೆ ದೇಹಬಲ ಅಗತ್ಯವಿತ್ತು, ಮತ್ತು ಕಠಿಣ ಚಳಿಗಾಲದಲ್ಲಿ ಕುಟುಂಬಗಳಿಗೆ ಉಷ್ಣತೆ ಬೇಕಾಗಿತ್ತು. ಈ ಪದಾರ್ಥಗಳು ಟ್ರೆಂಡ್‌ಗಳಿಂದಲ್ಲ, ಅಗತ್ಯದಿಂದಲೇ ಹುಟ್ಟಿಕೊಂಡವು ಎಂದು ಮೂಲಗಳು ಹೇಳುತ್ತವೆ.‌ ಪಂಜೀರಿ ಇನ್ನೂ ಹಳೆಯ ಇತಿಹಾಸ ಹೊಂದಿದ್ದು, ಅದರ ಬೇರುಗಳು ಆಯುರ್ವೇದದಲ್ಲಿವೆ. ಹೊಸ ತಾಯಂದಿರ ದೇಹಬಲ ಪುನಃಸ್ಥಾಪನೆಗೆ ಮತ್ತು ದೇಹದ ಸಮತೋಲನ ಮರಳಿ ತರುವುದಕ್ಕಾಗಿ ಇದನ್ನು ಹೆಚ್ಚಾಗಿ ತಯಾರಿಸಲಾಗುತ್ತಿತ್ತು. ಈ ಸಿಹಿ ಪದಾರ್ಥಗಳಲ್ಲಿ ಆರೋಗ್ಯಕರ ಕೊಬ್ಬು, ನಿಧಾನವಾಗಿ ಶಕ್ತಿ ನೀಡುವ ಕಾರ್ಬೋಹೈಡ್ರೇಟ್‌ಗಳು, ಸಸ್ಯ ಆಧಾರಿತ ಪ್ರೋಟೀನ್ ಮತ್ತು ದೇಹವನ್ನು ಉಷ್ಣಗೊಳಿಸುವ ಮಸಾಲೆಗಳು ಸರಿಯಾದ ಪ್ರಮಾಣದಲ್ಲಿ ಒಂದಾಗಿವೆ. ಸ್ವಲ್ಪ ಪ್ರಮಾಣದಲ್ಲೇ ತಿಂದರೂ ಅದರ ಪರಿಣಾಮ ಗೊತ್ತಾಗುತ್ತದೆ. ದೇಹಕ್ಕೆ ಬೆಚ್ಚನೆ, ದಿನವಿಡೀ ಶಕ್ತಿ, ಜೀರ್ಣಕ್ರಿಯೆ ಸರಾಗ, ಮತ್ತು ಚಳಿಗಾಲದ ಆಲಸ್ಯ ಅಷ್ಟಾಗಿ ಕಾಡುವುದಿಲ್ಲ.

ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು:
ಸಂಪೂರ್ಣ ಗೋಧಿ ಹಿಟ್ಟು – 1 ಕಪ್, ದೇಸಿ ತುಪ್ಪ – ¾ ಕಪ್, ಪುಡಿ ಸಕ್ಕರೆ ಅಥವಾ ಗೊಂಡ್ ಸಕ್ಕರೆ – ¾ ಕಪ್  ತಿನ್ನಬಹುದಾದ ಗೊಂಡ್ (ಎಡಿಬಲ್ ಗಮ್) – 2 ಟೇಬಲ್‌ಸ್ಪೂನ್, ಬಾದಾಮಿ (ಸಣ್ಣ ತುಂಡುಗಳಾಗಿ ಕತ್ತರಿಸಿದವು) – 2 ಟೇಬಲ್‌ಸ್ಪೂನ್, ಕಾಜು (ಸಣ್ಣ ತುಂಡುಗಳಾಗಿ ಕತ್ತರಿಸಿದವು) – 2 ಟೇಬಲ್‌ಸ್ಪೂನ್, ಕಲ್ಲಂಗಡಿ ಬೀಜಗಳು – 1 ಟೇಬಲ್‌ಸ್ಪೂನ್, ಮಖಾನಾ (ಫಾಕ್ಸ್ ನಟ್) – ½ ಕಪ್ (ಒಡೆದು ಕುಟಿದವು), ಒಣಶುಂಠಿ ಪುಡಿ – ½ ಟೀಸ್ಪೂನ್, ಏಲಕ್ಕಿ ಪುಡಿ – ½ ಟೀಸ್ಪೂನ್

ಮಾಡುವ ವಿಧಾನ:
ಪಾತ್ರೆಯಲ್ಲಿ 2 ಟೇಬಲ್‌ಸ್ಪೂನ್ ತುಪ್ಪವನ್ನು ಬಿಸಿ ಮಾಡಿ, ಅದರಲ್ಲಿ ಗೊಂಡ್ ಹಾಕಿ ಉಬ್ಬುವವರೆಗೆ ಹುರಿಯಿರಿ. ಹೊರತೆಗೆದು ತಣ್ಣಗಾದ ನಂತರ ಸ್ವಲ್ಪ ಒಡೆದು ಪುಡಿಮಾಡಿ. ಅದೇ ಪಾತ್ರೆಯಲ್ಲಿ ಮಖಾನಾವನ್ನು ಕರಕರವಾಗುವವರೆಗೆ ಹುರಿದು, ಪುಡಿಮಾಡಿ. ಈಗ ಉಳಿದ ತುಪ್ಪವನ್ನು ಪಾತ್ರೆಗೆ ಸೇರಿಸಿ, ಕಡಿಮೆ ಉರಿಯಲ್ಲಿ ಗೋಧಿ ಹಿಟ್ಟನ್ನು ನಿರಂತರವಾಗಿ ಕಲಸುತ್ತಾ ಬಂಗಾರದ ಬಣ್ಣ ಬರುವವರೆಗೆ ಮತ್ತು ಸುಗಂಧ ಹೊರಬರುವವರೆಗೆ ಹುರಿಯಿರಿ. ಇದಕ್ಕೆ ಹುಡಿ ಮಾಡಿದ ಗೊಂಡ್, ಬಾದಾಮಿ, ಕಾಜು, ಬೀಜಗಳು, ಮಖಾನಾ, ಒಣಶುಂಠಿ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಚೆನ್ನಾಗಿ ಕಲಸಿ ಉರಿಯನ್ನು ಆರಿಸಿ. ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಪುಡಿ ಸಕ್ಕರೆಯನ್ನು ಸೇರಿಸಿ ನಿಧಾನವಾಗಿ ಕಲಸಿ. ಗಾಳಿಯು ಒಳನುಗ್ಗದ ಡಬ್ಬದಲ್ಲಿ ಸಂಗ್ರಹಿಸಿ, ದಿನಕ್ಕೆ 1–2 ಟೇಬಲ್‌ಸ್ಪೂನ್ ಸೇವಿಸಿ.

How much do you know about Pinni and Panjeeri food of Punjab? Best food for winter – ತುಳು ಟೈಮ್ಸ್

ಇದನ್ನೂ ಓದಿ :ತಿಥಿ ಸಿನಿಮಾ ಖ್ಯಾತಿಯ ಸೆಂಚೂರಿ ಗೌಡ ಇನ್ನಿಲ್ಲ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=g_O1GQ_svzbcHEz4

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page