ಬ್ರೇಕಿಂಗ್ ನ್ಯೂಸ್
ಕರ್ನಾಟಕ

ತಿಥಿ ಸಿನಿಮಾ ಖ್ಯಾತಿಯ ಸೆಂಚೂರಿ ಗೌಡ ಇನ್ನಿಲ್ಲ

ಮಂಡ್ಯ: Tulu times | ತಿಥಿ ಸಿನಿಮಾ ಖ್ಯಾತಿಯ ಸಿಂಗಾರಿ ಗೌಡ ಅಲಿಯಾಸ್ ಸೆಂಚುರಿ ಗೌಡ  ಎಂದೇ ಫೇಮಸ್‌ ಆಗಿದ್ದ ಸಿಂಗ್ರಿ ಗೌಡ ಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 100 ವರ್ಷ ವಯಸ್ಸು ದಾಟಿದ್ದರಿಂದ ಸಿನಿಮಾದಲ್ಲೂ ಸೆಂಚುರಿ ಗೌಡ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸಿನಿ ಪ್ರೇಮಿಗಳಿಗೆ ಮನ ಗೆದ್ದಿದ್ದರು.

ತಿಥಿ ಸಿನಿಮಾದಿಂದ ಜನಪ್ರಿಯತೆ ಗಳಿಸಿದ ‘ಸೆಂಚುರಿ ಗೌಡ’ರ ನಿಜವಾದ ಹೆಸರು ಸಿಂಗಾರಿ ಗೌಡ ಅಥವಾ ಸಿಂಗ್ರಿ ಗೌಡ.  ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸಿಂಗ್ರೆಗೌಡನ ಕೊಪ್ಪಲು ಗ್ರಾಮದಲ್ಲಿ ಜನಿಸಿದ್ದರು. ತಿಥಿ ಸಿನಿಮಾ ಮೂಲಕ ಸೆಂಚೂರಿಗೌಡ ಎಂದು ಖ್ಯಾತಿ ಪಡೆದಿದ್ದರು. 100 ವರ್ಷ ವಯಸ್ಸು ದಾಟಿದ್ದರಿಂದ ಸಿನಿಮಾದಲ್ಲು ಸೆಂಚೂರಿಗೌಡ ಎಂದು ಪಾತ್ರದ ಹೆಸರಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಕಳೆದ ರಾತ್ರಿ ಕೊನೆಯುಸಿರೆಳೆದಿದ್ದು,ಇಂದು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇವರಿಬ್ಬರೂ ‘ತಿಥಿ’ ಚಿತ್ರದಲ್ಲಿ ಸಹಜ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದರು. ಸಹಜ ನಟನೆಯಿಂದ ‘ತಿಥಿ’ ಸಿನಿಮಾ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿತ್ತು. ಇವರು `ಹಾಲು ತುಪ್ಪ’, `ಚಿನ್ನದ ಗೊಂಬೆ’, ‘ಹಳ್ಳಿ ಪಂಚಾಯಿತಿ’ `ತರ್ಲೆ ವಿಲೇಜ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಸುಳ್ಯದಲ್ಲಿ ಆರ್‌ಎಸ್‌ಎಸ್‌ ಶತಾಬ್ದಿ ವರ್ಷ: ಹಿಂದೂ ಸಂಗಮ ಸಮಿತಿ ಉದ್ಘಾಟನೆ !

ಉಪ್ಪಿನಂಗಡಿ: ಎಟಿಎಂ ಹಣ, ಚಿನ್ನದೊಂದಿಗೆ ಬ್ಯಾಂಕ್ ಜಂಟಿ ವ್ಯವಸ್ಥಾಪಕ ಎಸ್ಕೆಪ್ !

ಉಪ್ಪಿನಂಗಡಿ: ಪ್ರತ್ಯೇಕ ಪ್ರಕರಣದಲ್ಲಿ  ಉಪ್ಪಿನಂಗಡಿ ಸಮೀಪದ ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಜಂಟಿ ವ್ಯವಸ್ಥಾಪಕ ಎಟಿಎಂ ಹಣ ಹಾಗೂ ಲಾಕರ್ ಒಂದರಲ್ಲಿದ್ದ ಚಿನ್ನದೊಂದಿಗೆ ಎಸ್ಕೆಪ್ ಆದ ಘಟನೆ ಬೆಳಕಿಗೆ ಬಂದಿದೆ. ಈ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಜಂಟಿ ವ್ಯವಸ್ಥಾಪಕ ಸುಬ್ರಹ್ಮಣ್ಯಂ (30) ಎಟಿಎಂ ಹಣ ಹಾಗೂ ಲಾಕರ್ ಒಂದರಲ್ಲಿದ್ದ ಚಿನ್ನಗಳನ್ನು ಹಿಡಿದುಕೊಂಡು ಎಸ್ಕೆಪ್ ಆದ ಘಟನೆ ನಡೆದಿದ್ದು, ಬ್ಯಾಂಕ್ ಗ್ರಾಹಕರು ಶಾಕ್ ಆಗಿದ್ದಾರೆ.

ಬ್ಯಾಂಕ್ ಸಿಬ್ಬಂದಿಯೇ ಕಳ್ಳತನ ಮಾಡಿ ಓಡಿ ಹೋದ!

ಜಂಟಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಬ್ರಮಣ್ಯ ಬ್ಯಾಂಕ್ ಆಫ್ ಬರೋಡಾ ಪೆರ್ನೆ ಶಾಖೆಯ ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದರು. ಇವರು ಕಳೆದ 06-02-2024 ರಿಂದ 16-12-2025 ರವರೆಗೆ ಎಟಿಎಂಗೆ ನಿಗದಿತ ನಗದು ಜಮಾ ಮಾಡದೇ ಕಡಿಮೆ ಹಣ ಜಮಾ ಮಾಡಿ ರೂ. 70,86,000/- ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ನಂತರ 19-12-2029 ರಂದು ಸೇಫ್ ಲಾಕರ್ ಪರಿಶೀಲನೆ ವೇಳೆ ರೂ.55,000/-ಮೌಲ್ಯದ 4.400 ಗ್ರಾಂ ಚಿನ್ನ ವಂಚಿಸಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ವಿಚಾರಣೆ ನಡೆದಂತೆ ಭಯಗೊಂಡ ಸುಬ್ರಹ್ಮಣ್ಯಂ ಕಳೆದ 17-12-2025 ರಂದು ಯಾರಿಗೂ ತಿಳಿಸದೇ ಎಸ್ಕೆಪ್ ಆಗಿದ್ದಾನೆ. ರೂ.71,41,000/- ಒಟ್ಟು ವಂಚನೆಯ ಮೌಲ್ಯ ಆಗಿದೆ. ಈ ಬಗ್ಗೆ CV.S. ಚಂದ್ರಶೇಖರ್ (50), ಶ್ರೀಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.

Thithi movie fame Century Gowda is no more- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page