ಮಂಗಳೂರು: Tulu Times | ಮಂಗಳೂರಿನ ಲಾಡ್ಜ್ ಒಂದರಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಸುಮಾರು 40-45 ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿದೆ.
ಅನುಮಾನಾಸ್ಪದವಾಗಿ ಶವ ಪತ್ತೆ !
ನಗರವೊಂದರ ಲಾಡ್ಜ್‌ವೊಂದರಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪೊಲೀಸ್ ದಾಖಲೆಗಳ ಪ್ರಕಾರ, ಡಿ. 26ರಂದು ಲಾಡ್ಜ್‌ನಲ್ಲಿ ಮಣಿ ಎಂದು ಹೆಸರು ತಿಳಿಸಿದ ಅಪರಿಚಿತ ವ್ಯಕ್ತಿ ಕೊಠಡಿ ಪಡೆದಿದ್ದ. ಡಿ. 31ರ ಬೆಳಿಗ್ಗೆ ಲಾಡ್ಜ್ ಸಿಬ್ಬಂದಿ ಆತನೊಂದಿಗೆ ಮಾತನಾಡಲು ಫೋನ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಇದನ್ನು ಗಮನಿಸಿ ತಕ್ಷಣವೇ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎನ್ನುವ ಮಾಹಿತಿಯಿದೆ.
ಅಪರಿಚಿತ ವ್ಯಕ್ತಿಯು 5.8 ಅಡಿ ಎತ್ತರ ಹೊಂದಿದ್ದು, ಕಪ್ಪು ಮೈಬಣ್ಣವಿದ್ಯಾನೆ. ಎದೆಯಮೇಲೆ ಕಪ್ಪು ಗುರುತು ಕಂಡುಬಂದಿದ್ದು, ಬಲಗೈಗೆ ಕೆಂಪು ದಾರ ಕಟ್ಟಲಾಗಿತ್ತು. ಕಂದು ಬಣ್ಣದ ಟಿ-ಶರ್ಟ್ ಹಾಗೂ ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬಂದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿ ಇರುವವರು ಬಂದರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಉಪ್ಪಿನಂಗಡಿ: ಎಟಿಎಂ ಹಣ, ಚಿನ್ನದೊಂದಿಗೆ ಬ್ಯಾಂಕ್ ಜಂಟಿ ವ್ಯವಸ್ಥಾಪಕ ಎಸ್ಕೆಪ್ !
ಉಪ್ಪಿನಂಗಡಿ: ಪ್ರತ್ಯೇಕ ಪ್ರಕರಣದಲ್ಲಿ, ಉಪ್ಪಿನಂಗಡಿ ಸಮೀಪದ ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಜಂಟಿ ವ್ಯವಸ್ಥಾಪಕ ಎಟಿಎಂ ಹಣ ಹಾಗೂ ಲಾಕರ್ ಒಂದರಲ್ಲಿದ್ದ ಚಿನ್ನದೊಂದಿಗೆ ಎಸ್ಕೆಪ್ ಆದ ಘಟನೆ ಬೆಳಕಿಗೆ ಬಂದಿದೆ. ಈ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಜಂಟಿ ವ್ಯವಸ್ಥಾಪಕ ಸುಬ್ರಹ್ಮಣ್ಯಂ (30) ಎಟಿಎಂ ಹಣ ಹಾಗೂ ಲಾಕರ್ ಒಂದರಲ್ಲಿದ್ದ ಚಿನ್ನಗಳನ್ನು ಹಿಡಿದುಕೊಂಡು ಎಸ್ಕೆಪ್ ಆದ ಘಟನೆ ನಡೆದಿದ್ದು, ಬ್ಯಾಂಕ್ ಗ್ರಾಹಕರು ಶಾಕ್ ಆಗಿದ್ದಾರೆ.
ಜಂಟಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಬ್ರಮಣ್ಯ ಬ್ಯಾಂಕ್ ಆಫ್ ಬರೋಡಾ ಪೆರ್ನೆ ಶಾಖೆಯ ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದರು. ಇವರು ಕಳೆದ 06-02-2024 ರಿಂದ 16-12-2025 ರವರೆಗೆ ಎಟಿಎಂಗೆ ನಿಗದಿತ ನಗದು ಜಮಾ ಮಾಡದೇ ಕಡಿಮೆ ಹಣ ಜಮಾ ಮಾಡಿ ರೂ. 70,86,000/- ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ನಂತರ 19-12-2025 ರಂದು ಸೇಫ್ ಲಾಕರ್ ಪರಿಶೀಲನೆ ವೇಳೆ ರೂ.55,000/-ಮೌಲ್ಯದ 4.400 ಗ್ರಾಂ ಚಿನ್ನ ವಂಚಿಸಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ವಿಚಾರಣೆ ನಡೆದಂತೆ ಭಯಗೊಂಡ ಸುಬ್ರಹ್ಮಣ್ಯಂ ಕಳೆದ 17-12-2025 ರಂದು ಯಾರಿಗೂ ತಿಳಿಸದೇ ಎಸ್ಕೆಪ್ ಆಗಿದ್ದಾನೆ. ರೂ.71,41,000/- ಒಟ್ಟು ವಂಚನೆಯ ಮೌಲ್ಯ ಆಗಿದೆ. ಈ ಬಗ್ಗೆ CV.S. ಚಂದ್ರಶೇಖರ್ (50), ಶ್ರೀಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.
Body of an unidentified person found in a lodge in Mangalore!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











