ಬ್ರೇಕಿಂಗ್ ನ್ಯೂಸ್
ಕರ್ನಾಟಕಪುತ್ತೂರು

ಪುತ್ತೂರು: ನ್ಯಾಯಕ್ಕಾಗಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ದಂಪತಿಗಳು !

ಪುತ್ತೂರು: Tulu Times | ಕೌಕ್ರಾಡಿ ಗ್ರಾ.ಪಂ ವ್ಯಾಪ್ತಿಯ ಕಾಪಿನ ಬಾಗಿಲು ನಿವಾಸಿ ರಾಧಾಮ, ಮುತ್ತು ಸ್ವಾಮಿ ದಂಪತಿ ನ್ಯಾಯಕ್ಕಾಗಿ  ಅನಿರ್ದಿಷ್ಟಾವಧಿ ಧರಣಿ  ಸತ್ಯಾಗ್ರಹ ನಡೆಸುತ್ತಿದ್ದಾರೆ.

ಪುತ್ತೂರು ಸಹಾಯಕ ಕಮೀಷನ‌ರ್ ಕಚೇರಿ ಆವರಣದ ಮುಂದೆ ನೀತಿ ತಂಡದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂದುವರೆಸಿದ್ದು, ಆರನೇ ದಿನಕ್ಕೆ ವ್ಯದ್ಯ ದಂಪತಿಗಳು  ಧರಣಿ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಜಮೀರ್ ಖಾನ್ ಬಿಡ್ಡಿಂಗ್ ಕಾರಣಕ್ಕೆ ಪವನ್ ನೆಜ್ಜೂರ್ ಬಲಿ: ಶೋಭಾ ಕರಂದ್ಲಾಜೆ ಆರೋಪ

ಧರಣಿ ಸತ್ಯಾಗ್ರಹ ನಡೆಸುತ್ತಿರೋದು ಯಾಕೆ ?

ಕಡಬ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಧರಣಿ ನಡೆಸಲಾಗುತ್ತಿದೆ.  ಮನೆ ಕೆಡವಿದ ಅಕ್ರಮವಾಗಿ ತಮ್ಮ ಮನೆ ಕೆಡವಿ ಹಾಕಿದ್ದಾರೆ ಎಂದು ಆರೋಪಿಸಿ ದಂಪತಿಗಳು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ನಡುವೆ ಪುತ್ತೂರು ಸಹಾಯಕ ಆಯುಕ್ತ ಸ್ಟೇಲ್ಲಾ ವರ್ಗಿಸ್ ಅವರು ಧರಣಿ ನಿರತರನ್ನು ಭೇಟಿ ಮಾಡಿ ಹದಿನೈದು ದಿನಗಳ ಸಮಯವಕಾಶ ಕೇಳಿದ್ದರು. ಸದ್ಯ ಧರಣಿ ಮುಂದುವರೆಸಿರುವ ದಂಪತಿ ತನಿಖೆಯಲ್ಲೂ ನ್ಯಾಯ ದೊರಕದಿದ್ದಲ್ಲಿ ಅನ್ನ ಸತ್ಯಾಗ್ರಹಕ್ಕೆ ನಿರ್ಧರಿಸಿದ್ದಾರೆ.

ಪುತ್ತೂರು: ಶ್ರೀ ಆದಿ ನಾಗಬ್ರಹ್ಮಮೊಗೇರ್ಕಳ ದೈವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದಕೋರಿಯ ಶ್ರೀಆದಿ ನಾಗಬ್ರಹ್ಮ ಮೊಗೇರ್ಕ್ರೆಳ ದೈವಸ್ಥಾನದ ಪುನ‌ರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಸೇವಾಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಫೆ.15, 16 ಮತ್ತು 17ರಂದು ಶ್ರೀ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಮತ್ತು ನೇಮೋತ್ಸವ ನಡೆಯಲಿದೆ. ಹೀಗಾಗಿ, ಡಿ.21ರಂದು ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮುಖಂಡರಾದ ಡಾ.ರಘು ಬಿ. ಬೆಳ್ಳಿಪ್ಪಾಡಿ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಮೋಹನ ಪಕ್ಕಳ ಕುಂಡಾಪು. ಮನೋಹರ ಗೌಡ ಡಿ.ವಿ, ಪದ್ಮನಾಭ ಶೆಟ್ಟಿ ರೆಂಜಾಜೆ, ಶ್ರೀಧರ ಆಳ್ವ ಕಲ್ಲಡ್ಕ, ಸುಂದರ ಸಾಲ್ಯಾನ್ ಬಾರ್ಪಾದೆ, ಸುಂದರ ಕಜೆ, ದಿನೇಶ್ ‘ಮಾಧವ ಕಜೆ, ಅರ್ಚಕ ಸದಾಶಿವ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur: Couple holding indefinite sit-in for justice!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 162

You cannot copy content of this page